ಆರೋಗ್ಯ

ಕಬ್ಬಿನ ರಸ ಕುಡಿಯೋದರಿಂದ ಈ ಹತ್ತು ಲಾಭಗಳನ್ನು ಪಡ್ಕೊಬಹುದು ಇನ್ಯಾಕೆ ತಡ ತಿಳ್ಕೊಂಡ್ಬಿಡಿ .

ಕಬ್ಬಿನ ರಸ ಕುಡಿದರೆ ಏನೆಲ್ಲಾ ಲಾಭ.

 

 

 

ಬೆಸಿಗೆಯಲ್ಲಿ ತಂಪಾದ ಪಾನೀಯ ಕುಡಿಯಬೇಕೆನಿಸುವುದು ಸಹಜ.ಸಾಮಾನ್ಯವಾಗಿ ಹೆಚ್ಚಿನವರು ಕೂಲ್ ಡ್ರಿಂಕ್ಸ್ ಅಥವ ರೆಡಿಮೇಡ್ ಪಾನೀಯಗಳ ಮೋರೆ ಹೋಗುತ್ತಾರೆ.,ಆದರೆ ಅವುಗಳಿಂದ ಅಡ್ಡಪರಿಣಾಮಗಳ ಬಗ್ಗೆ ತಿಳಿಯಬೇಕಾದದು ಮುಖ್ಯ.ತಂಪು ಪಾನೀಯಗಳ ಮೊರೆ ಹೋಗುವ ಬದಲು,ಕಬ್ಬಿನ ಜ್ಯೂಸ್ ಕುಡಿಯುವುದು ಒಳ್ಳೆಯದು,ಮೂತ್ರ ಸಂಬಂಧಿ ಇನ್ ಫೆಕ್ಷನ್ ಸಮಸ್ಯೆಗೆ ಕಬ್ಬಿನ ಜ್ಯೂಸ್ ಕುಡಿಯುವುದು ಒಳ್ಳೆಯದು.ಕಿಡ್ನಿ ಕಲ್ಲು ಸಮಸ್ಯೆಯನ್ನು ಹೋಗಲಾಡಿಸಲು ಇದು ಸಹಕಾರಿಯಾಗಿದೆ.ಬಾಯಿ ಹುಣ್ಣು , ಕೆಟ್ಟ ಉಸಿರು , ಬಾಯಿ ವಾಸನೆಯ ಸಮಸ್ಯೆ ಯನ್ನು ದೂರಮಾಡುತ್ತದೆ. ನಿಮಗೆ ನಿಮ್ಮ ಚರ್ಮ ಸುಂದರವಾಗಿರಬೇಕೆಂದರೆ ಪ್ರತಿ ದಿನ ಕಬ್ಬಿನ ಜ್ಯೂಸ್ ಅನ್ನು ಸೇವಿಸಿ..ಇದು ನಿಮ್ಮ ಚರ್ಮ ವನ್ನು ಕೋಮಲವಾಗಿಸುತ್ತದೆ ಹಾಗು ಆರೋಗ್ಯಕರವಾಗಿಸುತ್ತದೆ.ಕಬ್ಬಿನ ಜ್ಯೂಸ್ ನಲ್ಲೀ ಪ್ರೋಟೀನ್ , ಕಾರ್ಬ್ಬೋಹೈಡ್ರೇಟ್ , ಪೊಟಾಶಿಯಂ , ಹಾಗು ಇನ್ನೀತ್ತರೆ ನ್ಯೂಟ್ರೀಶನ್ ಗಳು ಹೆಚ್ಚಾಗಿರುತ್ತವೆ ಇದು ನಿಮಗೆ ಶಕ್ತಿಯನ್ನು ನೀಡುತ್ತದೆ ಹಾಗು ಮೂಳೆಗಳ ಬೆಳವಣಿಗೆಗೆ ಸಹಕಾರಿ ಆಗಲಿದೆ.ನಿಮಗೆ ಆಯಾಸವಾದರೆ ಒಂದು ಗ್ಲಾಸ್ ಕಬ್ಬಿನ ಜ್ಯೂಸ್ ಕುಡಿದರೆ ಸಾಕು ಎನರ್ಜಿ ಬರುತ್ತದೆ.ಜಾಂಡೀಸ್ ಕಾಯಿಲೆಗೆ ಕಬ್ಬಿನ ಹಾಲು ರಾಮ ಬಾಣವಿದ್ದಂತೆ , ಹೆಚ್ಚೆಚ್ಚು ಕಬ್ಬಿನ ಹಾಲನ್ನು ಕುಡಿಯಿರಿ ಜಾಂಡೀಸ್ ನಿಂದ ದೂರವಿರಿ.

 

 

 

ತಾಜಾ ಕಬ್ಬಿನ ಹಾಲಿಗೆ ಎಳನೀರು , ಹಸಿ ಶುಂಠಿ ರಸ , ನಿಂಬೆಹಣ್ಣಿನ ರಸ ಸೇರಿಸಿ ಸೇವಿಸಿದರೆ ಮೂತ್ರ ವಿಸರ್ಜನೆ ಚೆನ್ನಾಗಿ ಆಗುತ್ತದೆ.ಕಬ್ಬಿನ ಜ್ಯೂಸ್ ಕೊಬ್ಬು ಕರಗಿಸಲು ಸಹಾಯ ಮಾಡುತ್ತದೆ ಮತ್ತು ಇದರಲ್ಲಿ ಫೈಬರ್ ಅಂಶ ಹೇರಳವಾಗಿರುವುದರಿಂದ ತೂಕ ಇಳಿಸಲು ಪರಿಣಾಮಕಾರಿಯಾಗಲಿದೆ.ಗ್ಲೈಸೆಮಿಕ್ ಇಂಡೆಕ್ಸ ಅಂಶವೂ ಕಡಿಮೆ ಇರುವುದರಿಂದ ಸಕ್ಕರೆ ಕಾಯಿಲೆ ಇರುವವರೂ ಸಹ ಕಬ್ಬಿನ ಜ್ಯೂಸ್ ಕುಡಿಯಬಹುದು .ಆದರೆ ಮಿತವಿರಲಿ ಅತಿಯಾಗಿ ಸೇವಿಸಿದರೆ ಉಷ್ಣವು ಹೆಚ್ಚಾಗಿ ಖಾಯಿಲೆ ಬೀಳುವ ಸಂಭವ ಹೆಚ್ಚು .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top