ಮನೋರಂಜನೆ

ನಾಮಫಲಕಗಳಲ್ಲಿ ಕನ್ನಡ ಯಾಕೆ ಬಳಸಬೇಕು ಎಂದ ಪ್ರಶ್ನಿಸಿದ ಹೈಕೋರ್ಟ್‌.

ಕನ್ನಡ ನಾಡಿಗೆ ಬಂದು ವ್ಯಾಪಾರ ಮಾಡಿ ಲಾಭ ಗಳಿಸಿಕೊಳ್ಳುತ್ತಿರುವ ಉತ್ತರದ ಪರದೇಸಿ ಹಿಂದಿ ವ್ಯಾಪಾರಿಗಳು ಇದೀಗ ಕನ್ನಡ ಭಾಷೆಯ ವಿರುದ್ಧವೇ ತಿರುಗಿ ಬೀಳುವಷ್ಟರ ಮಟ್ಟಿಗೆ ಕೊಬ್ಬಿಕೊಂಡಿದ್ದಾರೆ.. ಉಂಡ ಮನೆಗೆ ಕೇಡು ಬಗೆಯುವುದು ಎಂಬ ಮಾತಿಗೆ ಬಹುಷಃ ಈ ಚಿಲ್ಲರೆ ವ್ಯಾಪಾರಿಗಳು ಅತ್ಯತ್ತಮ ಉದಾಹರಣೆ ಎನ್ನಬಹುದು. ಯಾಕಂದರೆ ಬೆಂಗಳೂರು ನಗರ ವ್ಯಾಪ್ತಿಯಲ್ಲಿನ ಎಲ್ಲಾ ವಾಣಿಜ್ಯ ಮಳಿಗೆಗಳು ಅಳವಡಿಸುವ ನಾಮ ಫಲಕಗಳಲ್ಲಿ ಕನ್ನಡ ಭಾಷೆಯನ್ನು ಪ್ರಧಾನವಾಗಿ ಬಳಸುವುದನ್ನು ಕಡ್ಡಾಯಗೊಳಿಸಿ ಎಂದು ಬಿಬಿಎಂಪಿ ಸುತ್ತೋಲೆ ಹೊರಡಿಸಿತ್ತಲ್ಲಾ ಅದು ಇದೀಗ ವಿವಾದದ ತಿರುವು ಪಡೆದುಕೊಂಡಿದೆ. ಬಿಬಿಎಂಪಿ ಹೊರಡಿಸಿರುವ ಈ ಸುತ್ತೋಲೆಯನ್ನು ರದ್ದುಪಡಿಸುವಂತೆ ಕೋರಿ ‘ಭಾರತೀಯ ಚಿಲ್ಲರೆ ಮಾರಾಟಗಾರರ ಸಂಘ’ ಮತ್ತು’ಆದಿತ್ಯ ಬಿರ್ಲಾ ಫ್ಯಾಷನ್‌ ರೀಟೇಲ್‌ ಲಿಮಿಟೆಡ್‌’ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

ಅರ್ಜಿಯನ್ನು ನ್ಯಾಯಮೂರ್ತಿ ಜಿ. ನರೇಂದರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು. ಈ ಕುರಿತು ಅರ್ಜಿ ವಿಚಾರಣೆ ನಡೆಸಿರುವ ನ್ಯಾ. ಜಿ. ನರೇಂದರ್ ಅವರಿದ್ದ ಏಕ ಸದಸ್ಯ ಪೀಠ, “ಯಾವ ಕಾನೂನಿನ ಆಧಾರದ ಮೇಲೆ ಕಡ್ಡಾಯ ಕನ್ನಡ ಸುತ್ತೋಲೆ ಹೊರಡಿಸಿದ್ದೀರಿ” ಎಂದು ವಿವರಣೆ ನೀಡುವಂತೆ ಬಿಬಿಎಂಪಿಗೆ ನಿರ್ದೇಶನ ನೀಡಿ ವಿಚಾರಣೆಯನ್ನು ಮುಂದೂಡಿತು.

ಇದೇ ವೇಳೆ ಬಿಬಿಎಂಪಿ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್ “ಕನ್ನಡ ಭಾಷೆಯನ್ನು ಶಾಲಾ ಕಾಲೇಜುಗಳ ಮೂಲಕ ಪ್ರಚುರಪಡಿಸಿ ಅದರ ಶ್ರೀಮಂತಿಕೆ ಹೆಚ್ಚಿಸಬೇಕೇ ಹೊರತು, ವಾಣಿಜ್ಯ ಸಂಸ್ಥೆಗಳ ಮೇಲೆ ಒತ್ತಡ ಹೇರಿದರೆ ಏನು ಪ್ರಯೋಜನ” ಎಂದು ಟೀಕಿಸಿದೆ. “ಕನ್ನಡ ಬಳಕೆಗೆ ವಾಣಿಜ್ಯ ಸಂಸ್ಥೆಗಳ ಮೇಲೆ ಒತ್ತಡ ಹೇರಿ ನಾಮಫಲಕಗಳಲ್ಲಿ ಭಾಷೆಯ ಆದ್ಯತೆ ಗುರುತಿಸುವ ವಿಧಾನ ಎಷ್ಟು ಸರಿ” ಎಂದು ಹೈಕೋರ್ಟ್ ಪ್ರಶ್ನಿಸಿದೆ.

ಬಿಬಿಎಂಪಿ ಹೊರಡಿಸಿದ್ದ ಸುತ್ತೋಲೆ ಏನು?
ಯಾವುದೇ ಅಂಗಡಿ ಮುಂಗಟ್ಟು, ಹೋಟೆಲ್‌ಗಳು, ಕಂಪನಿಗಳು ತಮ್ಮ ಮಳಿಗೆಗಳ ಮುಂದೆ ಅಳವಡಿಸುವ ನಾಮಫಲಕಗಳಲ್ಲಿ ಕನ್ನಡ ಭಾಷೆ ಕಡ್ಡಾಯವಾಗಿ ಇರಬೇಕು.. ನಾಮಫಲಕಗಳಲ್ಲಿ ಶೇಕಡಾ 60ರಷ್ಟು ಕನ್ನಡ ಪದಗಳನ್ನು ಸ್ಪಷ್ಟವಾಗಿ ಕಾಣುವಂತೆ ಬಳಸಬೇಕಿದ್ದು, ಉಳಿದ ಶೇಕಡಾ 40ರಷ್ಟು ತಮಗೆ ಅನುಕೂಲವಾಗುವ ಭಾಷೆ ಪದಗಳನ್ನು ಬಳಸಬಹುದೆಂದು BBMP 2017ರ ಜುಲೈ 27ರಂದು ಸುತ್ತೋಲೆ ಹೊರಡಿಸಿತ್ತು. ಇದನ್ನು ಪಾಲಿಸದ್ದಿದ್ದಲ್ಲಿ ಪರವಾನಗಿ ರದ್ದು ಪಡಿಸುವುದಾಗಿ ಎಚ್ಚರಿಕೆ ನೀಡಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top