ಮನೋರಂಜನೆ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿತ್ರಕ್ಕೆ ವಿಲನ್ ಆದ ಮಾಜಿ ಸೈನಿಕ.

ಪ್ರೇಕ್ಷಕ ವಲಯದಲ್ಲಿ ನಾನಾ ಕಾರಣಗಳಿಂದ ವಿಪರೀತ ನಿರೀಕ್ಷೆ ಹುಟ್ಟುಹಾಕಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಂದಿನ ಸಿನಿಮಾ `ಯಜಮಾನ ಮಾತಿನ ಭಾಗದ ಚಿತ್ರೀಕರಣವನ್ನು ಕಂಪ್ಲೀಟ್ ಮಾಡಿಕೊಂಡಿದ್ದು ಹಾಡಿನ ಚಿತ್ರೀಕರಣ ಬಿರುಸಿನಿಂದ ನಡೆಯುತ್ತಿದೆ. ಚಿತ್ರದ ಟೈಟಲ್’ನಿಂದ ಹಿಡಿದು ತಾರಾಗಣದವರೆಗೆ ಎಲ್ಲದರಲ್ಲೂ ಕುತೂಹಲ ಮೂಡಿಸಿರುವ ಯಜಮಾನ ಚಿತ್ರದಲ್ಲಿ ಮಾಜಿ ಸೈನಿಕರೊಬ್ಬರು ಕೂಡ ವಿಲನ್ ಪಾತ್ರ ಮಾಡುತ್ತಿದ್ದಾರೆ..

 

ಅರುಣ್ ಎಂಬ ಮಾಜಿ ಸೈನಿಕ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಮೂಲತಃ ಕೇರಳದವರಾದ ಅರುಣ್ ದರ್ಶನ್ ಎದುರು ಜಬರ್ದಸ್ತಾಗಿ ಹೊಡೆದಾಡಿದ್ದಾರೆ. ವಾಜಪೇಯಿ ಪ್ರಧಾನ ಮಂತ್ರಿಯಾಗಿದ್ದ ಸಮಯದಲ್ಲಿ ‘ಆಪರೇಷನ್​ ಪರಾಕ್ರಮ್’ ನಡೆದಿತ್ತು. ಆ ಆಪರೇಷನ್​ನಲ್ಲಿ ಅರುಣ್​ ಭಾಗವಹಿಸಿದ್ದರು..112 ಕೆಜಿ ತೂಕ ಹಾಗೂ ಆರು ಅಡಿ ಎತ್ತರ ಇರುವ ಅರುಣ್ ಅವರು​ ಈ ಹಿಂದೆ ಸುಮಾರು ತಮಿಳು- ತೆಲುಗು ಸಿನಿಮಾಗಳಲ್ಲೂ ನಟಿಸಿದ್ದಾರೆ.

ಅಂದಹಾಗೆ ಸೆಪ್ಟೆಂಬರ್‌ನಲ್ಲಿ ದರ್ಶನ್ ತಮ್ಮ ಭಾಗದ ಡಬ್ಬಿಂಗ್ ಮುಗಿಸಲಿದ್ದಾರಂತೆ. ಅಕ್ಟೋಬರ್ ಮೊದಲ ವಾರದಲ್ಲಿ ಚಿತ್ರದ ಹಾಡುಗಳನ್ನು ಹೊರತರುವ ಯೋಜನಯಲ್ಲಿದೆ ಯಜಮಾನ ಚಿತ್ರತಂಡ.. ಕಳೆದ ಫೆಬ್ರವರಿ 18ರಂದು ಶೂಟಿಂಗ್ ಆರಂಭಿಸಿದ್ದ ಚಿತ್ರತಂಡ ಅಚ್ಚುಕಟ್ಟಾಗಿ, ಬಿಡುವಿಲ್ಲದೆ ಚಿತ್ರೀಕರಣ ಮಾಡುವ ನೆನ್ನೆಗೆ ಮಾತಿನ ಭಾಗದ ಶೂಟಿಂಗ್ ಪೂರ್ಣಗೊಳಿಸಿದೆ.

ಯಜಮಾನ ಬಗ್ಗೆ.
ಬಿ ಸುರೇಶ್ ಮತ್ತು ಶೈಲಜಾ ನಾಗ್ ಅವರು ತಮ್ಮ ಮೀಡಿಯಾ ಹೌಸ್ ಕಡೆಯಿಂದ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಪೊನ್ನು ಕುಮಾರ್ ಯಜಮಾನ ಚಿತ್ರದ ನಿರ್ದೇಶನದ ಹೊಣೆ ಹೊತ್ತಿದ್ದಾರೆ.. ವಿ ಹರಿಕೃಷ್ಣ ಅವರು ಸಂಗೀತ ನಿರ್ದೇಶನ ಮಾಡುತಿದ್ದರೆ ಭರ್ಜರಿ ಚೇತನ್ ಸಂಭಾಷಣೆ ಬರೆಯುತ್ತಿದ್ದಾರೆ. ದರ್ಶನ್’ಗೆ ನಾಯಕಿಯರಾಗಿ, ರಶ್ಮಿಕಾ ಮಂದಣ್ಣ ಮತ್ತು ತಾನ್ಯಾ ಹೋಪ್ ನಟಿಸಿದ್ದು ಧನಂಜಯ್ ಮತ್ತು ಸಿಂಗಂ ಖ್ಯಾತಿಯ ಥಾಕುರ್ ಅನೂಪ್ ಸಿಂಗ್ ಸೇರಿದಂತೆ ಅನೇಕ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top