ಮನೋರಂಜನೆ

“ಹಿಂದಿಯನ್ನು ವಿರೋಧಿಸಿವ ಕನ್ನಡಿಗರು ಮೂರ್ಖರು” – ಸುಬ್ರಮಣಿಯನ್ ಸ್ವಾಮಿ ವಿವಾದಾತ್ಮಕ ಹೇಳಿಕೆ.

ಯಾವಾಗಲೂ ತನ್ನ ವಿವಾದಾತ್ಮಕ ಹೇಳಿಕೆಗಳನ್ನ ನೀಡೋ ಮೂಲಕ ಮಾತ್ರವೇ ಸುದ್ದಿಗೆ ಗ್ರಾಸವಾಗುವಾತ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ..ಬೇರಾವುದೇ ಇಶ್ಯೂ ಇಲ್ಲದಿದ್ದರೇ ಇತರರನ್ನು ಕೆಣಕುವುದನ್ನೇ ಕಸುಬಾಗಿಸಿಕೊಂಡಿರುವ ಈ ತಲೆಕೆಟ್ಟ ಸ್ವಾಮಿ ಇದೀಗ ಕನ್ನಡಿಗರನ್ನು ಕೆಣಕುವಂತ ಮಾತುಗಳನ್ನ ಆಡಿದ್ದಾರೆ.. ಹೌದು, ಹಿಂದಿಯನ್ನು ಪ್ರಚಾರ ಮಾಡೋ ಉದ್ದೇಶದಿಂದ ಸ್ವತಂತ್ರ ಬಂದಾಗಿನಿಂದಲೂ ಕೇಂದ್ರ ಸರ್ಕಾರಗಳು ಪ್ರಾದೇಶಿಕ ರಾಜ್ಯಗಳ ಮೇಲೆ ಹಿಂದಿಯನ್ನು ಹೇರಿಕೆ ಮಾಡುತ್ತಿರುವುದರ ವಿರುದ್ಧ ಮೊದಲಿಂದಲೂ ತೀವ್ರ ವಿರೋಧ ಕೇಳಿಬರುತ್ತಲೇ ಇದೆ.. ಕೇವಲ ಕನ್ನಡಿಗರ ಮಾತ್ರವಲ್ಲದೆ ತಮಿಳರು, ತೆಲುಗಿನವರೂ ಕೂಡ ಅರ್ಥವಾಗದ ‘ಹಿಂದಿ’ ಭಾಷೆಯ ಹೇರಿಕೆ ವಿರುದ್ಧ ಧ್ವನಿಯೆತ್ತುತ್ತಲೇ ಇದ್ದಾರೆ.. ಈ ರೀತಿ ‘ಹಿಂದಿ ಹೇರಿಕೆ’ಯ ವಿರುದ್ಧ ಧ್ವನಿ ಎತ್ತುವ ಕನ್ನಡಿಗರನ್ನ ‘ಮೂರ್ಖರು’ ಎಂದು ಸುಬ್ರಮಣಿಯನ್ ಸ್ವಾಮಿ ಕರೆದಿದ್ದಾರೆ..

 

 

ಮೊನ್ನೆ ಕೇಂದ್ರ ಸರ್ಕಾರ ‘ಹಿಂದಿ ದಿವಸ್’ ಆಚರಿಸಿತ್ತು ಅಂದೇ ಕನ್ನಡಿಗರು ಕೂಡ ಕರಾಳ ದಿನವನ್ನಾಗಿ ಆಚರಿಸಿ ಹಿಂದಿ ಹೇರಿಕೆಯ ವಿರುದ್ಧ ಪ್ರತಿಭಟನೆ ಮಾಡಿದ್ದರು. ‘ಹಿಂದಿ ದಿವಸ್’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸ್ವಾಮಿ, “ಸಂವಿಧಾನದಲ್ಲಿ ಹಿಂದಿ ಕೂಡ ಒಂದು ಭಾಷೆ.. ನಮ್ಮ ದೇಶದಲ್ಲಿ ಹೆಚ್ಚು ಜನ ಹಿಂದಿಯನ್ನು ಮಾತನಾಡುತ್ತಾರೆ. ಹಿಂದಿ ಬೆಳೆಯುವುದರಿಂದ ಕನ್ನಡ ಕೆಳಗೆ ಇಳಿಯುತ್ತದೆ ಎಂದು ತಿಳಿದುಕೊಳ್ಳಬೇಕಿಲ್ಲ. ‘ಹಿಂದಿ ಭಾಷೆ’ಯನ್ನು ವಿರೋಧಿಸುವ ಕನ್ನಡಿಗರು ತಮಿಳುನಾಡಿನ ಜನರಂತೆ ಮೂರ್ಖರು., ಹಿಂದಿ ಭಾಷೆಯನ್ನು ವಿರೋಧಿಸಿದ್ದ ಪರಿಣಾಮ ತಮಿಳಿಗರು ಇಂದು ಉದ್ಯೋಗಾವಕಾಶ ಇಲ್ಲದೆ ಬಳಲುತ್ತಿದ್ದಾರೆ. ಹಿಂದಿ ಭಾಷೆ ಅರ್ಥವಾಗದ ಕಾರಣ ದೇಶಾದ್ಯಂತ ತಿರುಗಾಡಲಾಗದ ಸ್ಥಿತಿಯಲ್ಲಿದ್ದಾರೆ. ತಮಿಳುನಾಡಿನ ಜನರು ಮಾಡಿದ ಮೂರ್ಖ ಕೆಲಸವನ್ನು ಇಂದು ಕನ್ನಡಿಗರು ಮಾಡುತ್ತಿದ್ದಾರೆ” ಎಂದು ತಲೆಬುಡವಿಲ್ಲದ ಮಾತುಗಳನ್ನ ಆಡಿದ್ದಾರೆ.

ಇಡೀ ದೇಶದ ಜನರ ತೆರೆಗೆ ಹಣವನ್ನೆಲ್ಲಾ ಉಪಯೋಗಿಸಿಕೊಂಡು ಕೇಂದ್ರ ಸರ್ಕಾರ ‘ಹಿಂದಿ ದಿವಸ್’ ಅಂತ ಪ್ರತಿ ವರ್ಷ ಆಚರರಿಸುತ್ತದೆಯಲ್ಲಾ? ಅದರ ವಿರುದ್ದ ಅರ್ಧ ಭಾಗ ದೇಶದ ಜನರಿಗೆ ತಕರಾರು ಇದೆ. “ಕೇವಲ ‘ಹಿಂದಿ ದಿವಸ್’ ಮಾತ್ರ ಯಾಕೆ ಆಚರಿಸುತ್ತೀರಿ..ಹಿಂದಿ ದಿವಸ್ ಆಚರಿಸುವುದಾದರೆ ಅದರ ಜೊತೆಗೆ ಪ್ರಾದೇಶಿಕ ಭಾಷೆಗಳ ದಿನವನ್ನು ಆಚರಿಸಿ,, ಹಿಂದಿಗೆ ಯಾಕೆ ಅಷ್ಟೊಂದು ಉಚ್ಚ ಸ್ಥಾನಮಾನ.. ಭಾರತದಂತಹ ಬಹುಭಾಷಾ ಒಕ್ಕೂಟದಲ್ಲಿ ಕೇವಲ ಹಿಂದಿಯನ್ನು ಮಾತ್ರ ಆಡಳಿತ ಭಾಷೆಯೆಂದು ಗುರುತಿಸಿ, ನೂರಾರು ಕೋಟಿ ಖರ್ಚು ಮಾಡಿ #HindiDiwas ಆಚರಿಸುವುದು ಕನ್ನಡದಂತಹ ಹಿಂದಿಯೇತರ ನುಡಿಗಳ ಮೇಲಿನ ದಬ್ಬಾಳಿಕೆಯಲ್ಲವೇ” ಎಂಬ ಅನೇಕ ಪ್ರಶ್ನೆಗಳು ಏಳುತ್ತಲೇ ಇರುತ್ತವೆ. ಹೀಗಿರುವಾಗ ತಮ್ಮ ತಾಯಿ ಭಾಷೆಯ ಸ್ಥಾನಮಾನಕ್ಕಾಗಿ ಹೋರಾಡಿರುವವರನ್ನು ಮೂರ್ಖರು ಎಂದು ಕರೆದಿರುವ ಸ್ವಾಮಿ ವಿರುದ್ಧ ಕನ್ನಡಿಗರು ಕೆರಳಿದ್ದಾರೆ..

ಸುಬ್ರಮಣಿಯನ್ ಸ್ವಾಮಿಯ ‘ಮೂರ್ಖ’ ಹೇಳಿಕೆಯನ್ನು ಖಂಡಿಸಿರುವ ಹಿರಿಯ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು “ಸುಬ್ರಮಣಿಯನ್ ಸ್ವಾಮಿ ಅವರು ಮಾನಸಿಕ ಸೀಮಿತ ಕಳೆದುಕೊಂಡಿದ್ದಾರೆ” ಎಂದು ಟೀಕಿಸಿದ್ದಾರೆ.

“ಕನ್ನಡಕ್ಕೆ 2.5 ಸಾವಿರ ವರ್ಷಗಳ ಭವ್ಯ ಇತಿಹಾಸವಿದೆ. ಕೇವಲ 600 ವರ್ಷಗಳ ಹಿಂದೆ ಹುಟ್ಟಿಕೊಂಡಿರುವ ಹಿಂದಿಯನ್ನು ಕನ್ನಡಿಗರು ಏಕೆ ಮಾತನಾಡಬೇಕು.. ಕೇವಲ ದೆಹಲಿ ಸುತ್ತಮುತ್ತದ ಒಂದಷ್ಟು ರಾಜ್ಯಗಳಲ್ಲಿ ಮಾತನಾಡುತ್ತಾರೆ ಎಂಬ ಕಾರಣಕ್ಕೆ ಇಡೀ ದೇಶದಲ್ಲೇ ಹಿಂದಿಯನ್ನು ತುರುಕುವುದು ನಿಜವಾದ ಮೂರ್ಖತನ. ನಮಗೆ ಇಷ್ಟ ಬಂಡ ಭಾಷೆಯನ್ನ ಕಲಿಯುತ್ತೇವೆ, ಆದರೆ ಹೇರಿಕೆ ಮಾಡುವುದು ಸರಿಯಲ್ಲ.” ಎಂದು ಪ್ರಜ್ಞಾವಂತ ಕನ್ನಡಿಗರ ಅಭಿಪ್ರಾಯವಾಗಿದೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top