fbpx
ಸಮಾಚಾರ

2047ರಲ್ಲಿ ಭಾರತ ಮತ್ತೊಮ್ಮೆ ವಿಭಜನೆಯಾಗಲಿದೆ- ವಿವಾದಿತ ಹೇಳಿಕೆ ನೀಡಿದ ಕೇಂದ್ರ ಸಚಿವ.

ತಮ್ಮ ಕೆಲಸ ಕಾರ್ಯಗಳಿಗಿಂತಲೂ ಭಿನ್ನ ವಿಭಿನ್ನ ವಿವಾದಿತ ಹೇಳಿಕೆಗಳ ಮೂಲಕವೇ ಹೆಚ್ಚು ಸುದ್ದಿಯಾಗುವವರು ಭಾರತೀಯ ಜನತಾ ಪಕ್ಷ (ಬಿಜೆಪಿ) ನಾಯಕ ಮತ್ತು ಕೇಂದ್ರ ಸಚಿವ ಗಿರಿರಾಜ್ ಸಿಂಗ್.. ಇತ್ತೀಚಿಗಷ್ಟೇ ಭಾರತೀಯ ಮುಸ್ಲಿಮರು ರಾಮನ ವಂಶಸ್ಥರು ಎಂದು ಹೇಳಿಕೆ ನೀಡಿಗೆ ಗುರಿಯಾಗಿದ್ದ ಸಿಂಗ್ ಈಗ ಮತ್ತೊಂದು ವಿವಾದಿತ ಹೇಳಿಕೆ ಕೊಟ್ಟಿದ್ದಾರೆ.. 2047ಕ್ಕೆ ಭಾರತದ ಮತ್ತೊಂದು ವಿಭಜನೆಗೆ ಸಾಕ್ಷಿಯಾಗಲಿದೆ ಎಂದು ಸಿಂಗ್ ಹೇಳಿರುವುದು ದೇಶಾದ್ಯಂತ ಭಾರಿ ಸುದ್ದಿಯಾಗಲಿದೆ.

ಈ ವಿಚಾರವನ್ನು ತಮ್ಮ ಟ್ವಿಟ್ಟರ್​ನಲ್ಲಿ ಬರೆದುಕೊಂಡಿರುವ ಅವರು,”1947ರಲ್ಲಿ ಭಾರತವು ಧರ್ಮದ ಆಧಾರದಲ್ಲಿ ವಿಭಜನೆಯಾಗಿತ್ತು. ಅದೇ ರೀತಿ 2047ರಲ್ಲಿ ಕೂಡ ಇದೇ ರೀತಿಯ ಸನ್ನಿವೇಶ ಎದುರಾಗಲಿದೆ.. ಕಳೆದ 72 ವರ್ಷಗಳಲ್ಲಿ ಭಾರತದ ಜನಸಂಖ್ಯೆ 33 ಕೋಟಿಯಿಂದ 135.7 ಕೋಟಿಗೆ ಏರಿಕೆಯಾಗಿದೆ. ಜನಸಂಖ್ಯಾ ಸ್ಫೋಟವೇ ಭಾರತದ ವಿಭಜನೆಗೆ ಕಾರಣವಾಗಲಿದೆ” ಎಂದು ಹೇಳಿದ್ದಾರೆ.

 

ಭಾರತೀಯ ಸಂವಿಧಾನದಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಆರ್ಟಿಕಲ್ 35 ಎ ಬಗ್ಗೆ ಹಿಂದಿಯಲ್ಲಿ ಟ್ವೀಟ್ ಮಾಡಿರುವ ಅವರು ಈ ರೀತಿ ವಿವಾದಿತವಾಗಿ ಟ್ವೀಟ್ ಮಾಡಿದ್ದಾರೆ.. ಇವರ ಈ ಟ್ವೀಟ್’ಗೆ ಕೆಲವರು ಸಹಮತ ಸೂಚಿಸುತ್ತಿದ್ದರೇ ಇನ್ನೂ ಕೆಲವರು ಭಾರತವನ್ನು ಒಡೆಯಲು ನೀವೇ ಪ್ರಚೋದಿಸುತ್ತೀರಾ ಎಂದು ಟೀಕಾ ಪ್ರಹಾರ ಮಾಡುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top