ಸಮಾಚಾರ

ಮೇಘನಾರಾಜ್ ಕೈಯಲ್ಲಿರೋ ಅಮೂಲ್ಯ ವಸ್ತುವಿಗೂ ಸಾಹಸಸಿಂಹನಿಗೂ ಇರುವ ನಂಟೇನು ಗೊತ್ತಾ?

ಕರುನಾಡ ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರು ಭೌತಿಕವಾಗಿ ನಮ್ಮಿಂದ ಮರೆಯಾಗಿ ಒಂಭತ್ತು ವರ್ಷಗಳು ಕಳೆದಿವೆ. ಈ ನಾಡು ಕಂಡ ಅಪ್ರತಿಮ ನಟ ಡಾ.ವಿಷ್ಣುವರ್ಧನ್ ಅಭಿಮಾನಿಗಳ ಮನಸ್ಸಿನಲ್ಲಿ ಎಂದಿಗೂ ಯಜಮಾನನಾಗಿ ನೆಲೆಗೊಂಡಿದ್ದಾರೆ.. ಇಂಥ ಗ್ರೇಟ್ ವಿಷ್ಣು ಸರ್ ಜೊತೆ ಒಮ್ಮೆಯಾದರೂ ನಟಿಸಬೇಕಿತ್ತು ಎಂಬ ಆಸೆ ಪ್ರತಿ ಕಲಾವಿದನಲ್ಲಿ ಮೂಡಿದ್ದರೆ ಆಚರಿಯೇನಿಲ್ಲ. ಆದರೆ ಎಷ್ಟೋ ಕಲಾವಿದರಿಗೆ ಆ ಭಾಗ್ಯ ಸಿಗಲಿಲ್ಲ.. ಇನ್ನು ಕೆಲವರಿಗಂತು ಅವರನ್ನು ಮನಸ್ಸಿನಲ್ಲೇ ಗುರುಗಳಾಗಿ ಅವರ ಅಭಿಮಾನಿಗಳಾಗಿ ಪೂಜಿಸುವ ಅವಕಾಶ ಮಾತ್ರ ಸಿಕ್ಕಿರುತ್ತೆ.

 

 

 

ಸಾಹಸಸಿಂಹ ಕ್ರೇಜ್ ಯಾವರೀತಿ ಇದೆ ಅಂದ್ರೆ ಇಂದಿಗೂ ಅವರ ಚಿತ್ರಗಳು, ಅವರ ಸ್ಟೈಲ್, ಅವರ ಕೈನಲ್ಲಿ ತೊಡುತ್ತಿದ್ದ ಕಡಗ ಎಲ್ಲವೂ ಅವರ ಅಭಿಮಾನಿಗಳಿಗೆ ಅಚ್ಚುಮೆಚ್ಚು. ಸದ್ಯಕ್ಕೆ ವಿಷ್ಣವರ್ಧನ್ ಅವರ ವಾಚು ಹೆಚ್ಚು ಸುದ್ದಿಯಾಗಿದೆ, ಅದಕ್ಕೆ ಕಾರಣ ನಟಿ ಮೇಘನಾ ರಾಜ್. ವಿಷ್ಣುವರ್ಧನ್ ತೊಡುತ್ತಿದ್ದ ಅವರ ಅಚ್ಚು ಮೆಚ್ಚಿನ ​​ ಕಪ್ಪು ಬಣ್ಣದ ವಾಚು, ಈಗ ಮೇಘನಾ ರಾಜ್ ಬಳಿ ಇದೆ,.

ಈ ವಿಚಾರವನ್ನು ಖುದ್ದು ಮೇಘನಾ ಅವರೇ ಹೇಳಿಕೊಂಡಿದ್ದು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮೂಲಕ ತಿಳಿಸಿದ್ದಾರೆ.. ” ನಾನು ಈಗ ಆಕಾಶದಲ್ಲಿ ತೇಲುತ್ತಿದ್ದೇನೆ. ವಿಷ್ಣು ಅಂಕಲ್ ಅವರು ಕಟ್ಟುತ್ತಿದ್ದ ವಾಚನ್ನು, ಅವರ ಮಗಳು ಕೀರ್ತಿ ಅಕ್ಕ ನನಗೆ ಕೊಟ್ಟಿದ್ದಾರೆ. ಈ ಮಾಸ್ಟರ್​ ಪೀಸ್​​ ಹೊಂದಿರುವ ಏಕೈಕ ನಟಿ ನಾನು ಅಂತಾ ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ಥ್ಯಾಂಕ್ಯೂ ಕೀರ್ತಿ ಅಕ್ಕಾ” ಎಂದು ಬರೆದುಕೊಂಡಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top