fbpx
ಭವಿಷ್ಯ

17 ಸೆಪ್ಟೆಂಬರ್ ರಂದು ನಿಮ್ಮ ರಾಶಿ ಭವಿಷ್ಯ ಹೇಗಿದೆ ತಿಳಿಯಲು ಮುಂದೆ ಓದಿ

ಸೋಮವಾರ, ೧೭ ಸೆಪ್ಟೆಂಬರ್ ೨೦೧೮
ಸೂರ್ಯೋದಯ : ೦೬:೨೯
ಸೂರ್ಯಾಸ್ತ : ೧೮:೩೬
ಶಕ ಸಂವತ : ೧೯೪೦ ವಿಲಂಬಿ
ಅಮಂತ ತಿಂಗಳು : ಭಾದ್ರಪದ

ಪಕ್ಷ : ಶುಕ್ಲ ಪಕ್ಷ
ತಿಥಿ : ಅಷ್ಟಮೀ – ೧೭:೪೪ ವರೆಗೆ
ನಕ್ಷತ್ರ : ಮೂಲ – ಪೂರ್ಣ ರಾತ್ರಿ ವರೆಗೆ
ಯೋಗ : ಆಯುಷ್ಮಾನ್ – ೨೩:೩೨ ವರೆಗೆ
ಸೂರ್ಯ ರಾಶಿ : ಸಿಂಹ

ಅಭಿಜಿತ್ ಮುಹುರ್ತ: ೧೨:೦೮ – ೧೨:೫೭
ಅಮೃತಕಾಲ: ೨೪:೨೮+ – ೨೬:೧೫+
ರಾಹು ಕಾಲ:೦೮:೦೦ – ೦೯:೩೧
ಗುಳಿಕ ಕಾಲ: ೧೪:೦೩ – ೧೫:೩೪
ಯಮಗಂಡ:೧೧:೦೧ – ೧೨:೩೨

ಮಾಡಿದವರ ಪಾಪ ಆಡಿದವರ ಮೇಲೆ ಎನ್ನುವಂತೆ ನಿಮಗೆ ಸಂಬಂಧ ಪಡದವರ ವಿಚಾರವಾಗಿ ಮಾತನಾಡದಿರಿ. ಇದರಿಂದ ಈದಿನ ಎಲ್ಲರ ಎದುರು ಇರಸು-ಮುರಸಿಗೆ ಒಳಗಾಗುವಿರಿ. ನಿಮ್ಮ ಧಾರ್ಮಿಕ ನಿಷ್ಠೆ ನಿಮ್ಮನ್ನು ಕಾಪಾಡುವುದು.

ನಿಮ್ಮ ಮಾತಿನಲ್ಲಿನ ಅರ್ಥಪೂರ್ಣ ವಿನಯದಿಂದ ಗೆಲುವಿದೆ. ವಿನಯಶಾಲಿಯೇ ವಿಜಯಶಾಲಿ ಎಂಬುದು ನಿಮಗೆ ಮನದಟ್ಟಾಗುವುದು. ಇದು ಎಲ್ಲ ರಂಗದಲ್ಲಿರುವವರಿಗೂ ಅನ್ವಯಿಸುವಂತಹ ಮಾತಾಗಿರುತ್ತದೆ. ಹಣದ ಸಹಾಯ ಸಕಾಲದಲ್ಲಿ ದೊರೆಯುವುದು.

ಉತ್ತಮವಾದ ಯಶಸ್ಸಿಗೆ ಈದಿನ ಸಾಕ್ಷಿಯಾಗುವುದು. ಮೇಲಧಿಕಾರಿಗಳಿಂದ ಪ್ರಶಂಸೆಯ ಮಾತುಗಳು ಕೇಳಿಬರುವುದು. ಧಾರ್ಮಿಕ ಕಾರ್ಯಗಳಿಗಾಗಿ ಧನ ಸಹಾಯ ಮಾಡುವಿರಿ. ಮಕ್ಕಳು ವಿದ್ಯಾಭ್ಯಾಸದಲ್ಲಿ ಪ್ರಗತಿಯನ್ನು ತೋರುವರು.

ಇತರರು ಕೊಟ್ಟ ಮಾತನ್ನು ಉಳಿಸಿಕೊಳ್ಳುವ ವಿಚಾರದಲ್ಲಿ ಸೋಲು ಉಂಟಾಗುವುದು. ಹಣದ ವಿಚಾರದಲ್ಲಿ ಜಾಗ್ರತೆ ಇರಲಿ. ಕೌಟುಂಬಿಕ ಜೀವನ ಉತ್ತಮವಾಗಿರುತ್ತದೆ. ಮನೆಯ ಹಿರಿಯರ ಆರೋಗ್ಯದ ಕಡೆ ಗಮನ ಹರಿಸಿ.

 

ಶುಭದಾಯಕ ಗಳಿಗೆಗೆ ಇಂದು ರಹದಾರಿ ಆಗುವುದು. ಮನೋಕಾಮನೆಗಳು ಪೂರ್ಣಗೊಳ್ಳುವವು. ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ. ಗುರು ಹಿರಿಯರ ಆಶೀರ್ವಾದವು ನಿಮ್ಮ ಮೇಲಿರುವುದರಿಂದ ಹೆಚ್ಚಿನ ತೊಂದರೆ ಇರುವುದಿಲ್ಲ.

 

ಸದ್ಯದ ಪರಿಸ್ಥಿತಿಯಲ್ಲಿ ತಗ್ಗಿ-ಬಗ್ಗೆ ನಡೆಯುವುದು ಕ್ಷೇಮ. ಅಟ್ಟಹಾಸದಿಂದ ಮೆರೆದವರೆಲ್ಲರೂ ಸೋತು ಇತಿಹಾಸ ಸೇರಿದ್ದಾರೆ. ಹಾಗಾಗಿ ಈದಿನ ತಾಳ್ಮೆಯ ಜತೆಗೆ ಸೌಜನ್ಯವನ್ನು ರೂಢಿಸಿಕೊಳ್ಳಿ. ಇದರಿಂದ ನಿಮ್ಮ ಕಾರ್ಯ ಕೈಗೂಡುವುದು.

 

ಈ ದಿನ ಮಾನಸಿಕ ಸ್ಥಿತಿ ಅಷ್ಟೇನೂ ಉತ್ತಮವಿಲ್ಲ. ಶಿವನ ಧ್ಯಾನ ಮಾಡಿರಿ. ಸಾಧ್ಯವಾದರೆ ಅಕ್ಕಿ ಮತ್ತು ಬೆಲ್ಲವನ್ನು ಹಸುವಿಗೆ ನೀಡಿರಿ. ಮಹತ್ತರ ತೀರ್ಮಾನಗಳನ್ನು ಮುಂದೂಡುವುದು ಒಳಿತು.

 

ನೀವು ಅತ್ಯಂತ ಗೌಪ್ಯತೆ ಎಂದು ಕಾಪಾಡಿಕೊಂಡ ವಿಚಾರವೂ ಇತರೆಯವರಿಗೆ ತಿಳಿದು ಅವರು ನಿಮ್ಮನ್ನು ಅಣಕಿಸುವ ಸಾಧ್ಯತೆಯಿದೆ. ನಿಮಗಾದ ಅವಮಾನವನ್ನು ಈ ದಿನ ಸಹಿಸಿಕೊಳ್ಳಬೇಕಾಗಿದೆ. ಗಣಪತಿಯನ್ನು ಪ್ರಾರ್ಥಿಸಿರಿ.

 

ನಿಮ್ಮ ಚಾಕಚಕ್ಯತೆಯನ್ನು ಯಾರೂ ಪ್ರಶ್ನಿಸಲಾರರು. ಏಕೆಂದರೆ ಆನೆ ನಡೆದದ್ದೆ ದಾರಿ. ಅಂತೆಯೇ ಈ ದಿನ ನೀವು ಕೈಕೊಳ್ಳುವ ಕಾರ್ಯಗಳು ಸಾರ್ವಜನಿಕ ಮನ್ನಣೆ ಗಳಿಸುವುದು.

ನಿಮ್ಮ ಕಾರ್ಯಕ್ಷೇತ್ರದಲ್ಲಿ ತೋರುವ ಜಾಣ್ಮೆಯು ನಿಮ್ಮನ್ನು ಬಹು ಎತ್ತರಕ್ಕೆ ಕೊಂಡೊಯ್ಯುವುದು. ಇದಕ್ಕೆ ನಿಮ್ಮ ವಿದ್ಯೆಯು ಸಹಕಾರಿಯಾಗಿ ನಿಲ್ಲುವುದು. ಆರೋಗ್ಯದ ಕಡೆ ಗಮನ ಹರಿಸಿರಿ. ಸೂಕ್ತ ಎನಿಸಿದಲ್ಲಿ ಮನೆ ವೈದ್ಯರನ್ನು ಭೇಟಿ ಮಾಡಿರಿ.

 

 

ಬಾಳ ಸಂಗಾತಿಯ ಸೂಕ್ತ ಬೆಂಬಲದಿಂದಾಗಿ ಎದುರಾಗಿರುವ ನೂರಾರು ಸಮಸ್ಯೆಗಳನ್ನು ಮೆಟ್ಟಿ ನಿಲ್ಲುವಿರಿ. ಆದರೆ ಆತುರ ಪ್ರವೃತ್ತಿ ಸಲ್ಲದು. ನಿಧಾನವೇ ಪ್ರಧಾನ ಎಂಬುದು ನಿಮಗೆ ತಿಳಿದಿರಲಿ. ಆರ್ಥಿಕ ಸ್ಥಿತಿ ಸುಧಾರಿಸುವುದು.

ಜೀವನದಲ್ಲಿ ಕಷ್ಟಗಳು ಸಮುದ್ರ ಅಲೆಗಳಂತೆ ಒಂದರ ಹಿಂದೆ ಮತ್ತೊಂದು ಬರುತ್ತಲಿರುತ್ತವೆ. ಅಂತಹ ಸಮಯದಲ್ಲಿಯೆ ಆ ತೆರೆಗಳಲ್ಲಿ ಮುಳುಗಿ ಏಳುವುದು ಸಾಹಸ. ಅಂತಹ ಸಾಹಸವನ್ನು ಈ ದಿನ ಮಾಡಿ ಜಯಶೀಲರಾಗುವಿರಿ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top