ಸಮಾಚಾರ

‘ದಿ ವಿಲನ್’ ಸಿನಿಮಾದ ದೊಡ್ಡ ಸೀಕ್ರೆಟ್’ವೊಂದನ್ನ ಬಿಟ್ಟು ಕೊಟ್ರು ಡೈರೆಕ್ಟರ್ ಪ್ರೇಮ್ಸ್.

ನಿರ್ದೇಶಕ ಪ್ರೇಮ್ ಎಂದರೆ ಹಾಗೆ, ಏನನ್ನೇ ಮಾಡಿದರು ಕೊಂಚ ಸೆನ್ಸೇಷನ್ ಆಗಿ ಮಾಡುವುದು ಅವರ ಜಾಯಮಾನ ಅದು ಅವರ ಬಹುನಿರೀಕ್ಷಿತ ದಿ ವಿಲನ್ ಚಿತ್ರದಲ್ಲೂ ಮುಂದುವರೆದಿದೆ.. ದೊಡ್ಡ ಅಬ್ಬರದಲ್ಲಿ ಸಿನಿಮಾ ಆರಂಭಿಸಿ ಸಿನಿಮಾ ಮೇಲಿನ ಕುತೂಹಲವನ್ನು ವರ್ಷಾನುಗಟ್ಟಲೆ ಕಾಪಿಟ್ಟುಕೊಳ್ಳುವುದು ಪ್ರೇಮ್ ಅವರ ಸ್ಪೆಷಾಲಿಟಿ.. ಇಲ್ಲಿವರೆಗೆ ಚಿತ್ರಕ್ಕೆ ಸಂಭಂದಪಟ್ಟ ಯಾವುದೇ ವಿಚಾರಗಳನ್ನು ಪಹಿರಂಗಪಡಿಸದೇ ಸೀಕ್ಟ್ರೆಟ್ ಮೇಂಟೈನ್ ಮಾಡ್ಕೊಂಡು ಬರ್ತಿದ್ದ ಪ್ರೇಮ್ ಇದೀಗ ಮಾಧ್ಯಮಗಳ ಮುಂದೆ ಗುಟ್ಟೊಂದನ್ನ ಬಿಚ್ಚಿಟ್ಟಿದ್ದಾರೆ.

 

 

ದಿ ವಿಲನ್ ಚಿತ್ರ ಫೈಟ್ ಮೂಲಕ ಕೊನೆಗೊಳ್ಳುವುದಿಲ್ಲವಂತೆ ಕ್ಲೈಮಾಕ್ಸ್‍ನಲ್ಲಿ ಸೆಂಟಿಮೆಂಟ್ ಸನ್ನಿವೇಶವಿದೆಯಂತೆ. ಈ ಮಾಹಿತಿಯನ್ನು ಸ್ವತಃ ಪ್ರೇಮ್ ಅವರೇ ಹೇಳಿರುವುದು ವಿಶೇಷ.. ಸುದೀಪ್ ಮತ್ತು ಶಿವಣ್ಣ ಇಬ್ಬರೂ ಕಮರ್ಷಿಯಲ್ ಹೀರೋಗಳು. ಅವರನ್ನಿಟ್ಟುಕೊಂಡು ಕೇವಲ ಆ್ಯಕ್ಷನ್ ಸಿನಿಮಾ ಮಾಡೋದು ದೊಡ್ಡ ವಿಷಯವಲ್ಲ. ಹಾಗಾಗಿ ಒಂದು ಉದ್ದೇಶ, ಸಂದೇಶ ಕೊಡುವ ಸೆಂಟಿಮೆಂಟ್ ಕಥೆ ಇರೋ ಸಿನಿಮಾ ಮಾಡಿದ್ದೇನೆ ಎಂದಿದ್ದಾರೆ ಪ್ರೇಮ್

ಬಹುನಿರೀಕ್ಷಿತ ‘ದಿ ವಿಲನ್’ ಚಿತ್ರ ಬಿಡುಗಡೆಯಾಗೋ ದಿನಾಂಕ ಪಕ್ಕಾ ಆಗಿದೆ. ಮುಂದಿನ ತಿಂಗಳ ಹದಿನೆಂಟನೇ ತಾರೀಕಿನಂದು ಈ ಚಿತ್ರ ಬಿಡುಗಡೆಯಾಗಲಿದೆ ಎಂದು ಅಧಿಕೃತವಾಗಿಯೇ ಚಿತ್ರತಂಡ ಘೋಷಿಸಿದೆ.

ಅಕ್ಟೋಬರ್ 2ರಿಂದ ಅಡ್ವಾನ್ಸ್ ಬುಕಿಂಗ್:

ರಿಲೀಸ್’ಗಿಂತ ಹದಿನೈದು ದಿನಗಳ ಮುಂಚಿತವಾಗಿಯೇ ಅಡ್ವಾನ್ಸ್ ಬುಕಿಂಗ್ ಓಪನ್ ಮಾಡಿಸುವುದಾಗಿ ಘೋಷಿಸಿದ್ದ ಪ್ರೇಮ್ ಯಾವ ತಾರೀಕಿನಿಂದ ಅಡ್ವಾನ್ಸ್ ಬುಕಿಂಗ್ ಶುರುವಾಗುತ್ತೆ ಎಂಬ ಮಾಹಿತಿ ಹೊರಹಾಕಿರಲಿಲ್ಲ. ಆದರೆ ಆ ವಿಚಾರವನ್ನೂ ಕೂಡ ಪ್ರೇಮ್ ಬಹಿರಂಗಪಡಿಸಿದ್ದು ಎಲ್ಲವೂ ಅಂದುಕೊಂಡಂತೆ ಆದರೆ ಗಾಂಧಿ ಜಯಂತಿ(ಅಕ್ಟೋಬರ್ 02) ದಿನದಿಂದಲೇ ಎಲ್ಲಾ ಚಿತ್ರಮಂದಿರಗಳಲ್ಲೂ ಟಿಕೆಟ್ಟುಗಳು ಸಿಗಲಿವೆಯಂತೆ. ಈ ಮೂಲಕ ಬಿಡುಗಡೆ ಹದಿನೈದು ದಿನ ಮುನ್ನವೇ ಟಿಕೆಟ್ ಮುಂಗಡ ಕಾಯ್ದಿರಿಸೋ ಅವಕಾಶ ಅಭಿಮಾನಿಗಳಿಗೆ ಸಿಗಲಿದೆ

ಚಿತ್ರ ಬಿಡುಗಡೆಯಾಗಲು ಇನ್ನೊಂದು ತಿಂಗಳು ಬಾಕಿ ಇದ್ದರೂ ಕೂಡಾ ಅಭಿಮಾನಿಗಳೆಲ್ಲ ಈಗಾಗಲೇ ತಯಾರಿ ಆರಂಭಿಸಿದ್ದಾರೆ. ಮುಖ್ಯವಾದ ಥೇಟರುಗಳು ಸೇರಿದಂತೆ ಎಲ್ಲ ಕಡೆಗಳಲ್ಲಿಯೂ ‘ದಿ ವಿಲನ್’ ಚಿತ್ರಕ್ಕೆ ಅದ್ದೂರಿ ಸ್ವಾಗತ ಕೋರಲು ತಯಾರಿಗಳು ಭರದಿಂದ ಸಾಗುತ್ತಿವೆ. ಇದಕ್ಕಾಗಿ ಭಾರೀಗಾತ್ರದ ಕಟೌಟುಗಳೂ ಸೇರಿದಂತೆ ಡಿಫರೆಂಟಾದ ಬ್ಯಾನರುಗಳೂ ಸಿದ್ಧಗೊಳ್ಳುತ್ತಿವೆ.

ದಿ ವಿಲನ್ ಬಗ್ಗೆ ಹೇಳ್ಬೇಕಂದ್ರೆ ಚಿತ್ರದಲ್ಲಿ ಕಿಚ್ಚ ಸುದೀಪ್ ಮತ್ತು ಶಿವಣ್ಣನಿಗೆ ನಾಯಕಿಯಾಗಿ ಬ್ರಿಟಿಷ್ ಬ್ಯೂಟಿ ಆಮಿ ಜಾಕ್ಸನ್ ನಟಿಸುತ್ತಿದ್ದಾರೆ,,ಚಿತ್ರಕ್ಕೆ ಸಿ.ಮನೋಹರ್ ಬಂಡವಾಳ ಹಾಕಿದ್ದು ಅರ್ಜುನ್ಯ ಜನ್ಯರವರು ಸಂಗೀತ ಸಂಯೋಜನೆ ಮಾಡಿದ್ದಾರೆ…ಉಳಿದಂತೆ ಗಿರಿಗೌಡ ಅವರ ಕ್ಯಾಮರಾ ಕೈಚಳಕ ಚಿತ್ರಕ್ಕಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top