ಮನೋರಂಜನೆ

ಅತ್ಯತ್ತಮ ನಾಯಕನಟ ಪ್ರಶಸ್ತಿ ಮುಡಿಗೇರಿಸಿಕೊಂಡ ಪುನೀತ್ ರಾಜಕುಮಾರ್.

ದುಬೈನಲ್ಲಿ ನಡೆದ ಪ್ರತಿಷ್ಠಿತ ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ಬಾರಿ ಕನ್ನಡದ ಅತ್ಯುತ್ತಮ ನಟ ಪ್ರಶಸ್ತಿಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಭಾಜನರಾಗಿದ್ದಾರೆ. ಭರ್ಜರಿ ಯಶಸ್ಸು ಗಳಿಸಿದ್ದ ‘ರಾಜಕುಮಾರ’ ಸಿನಿಮಾದ ಅಭಿನಯಕ್ಕಾಗಿ ಪುನೀತ್ ರಾಜ್ ಕುಮಾರ್ ಅವರು ಅತ್ಯುತ್ತಮ ನಟ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

 

 

2017 ಫೆಬ್ರವರಿಯಲ್ಲಿ ತೆರೆಕಂಡಿದ್ದ ರಾಜಕುಮಾರ ಚಿತ್ರ ಅಭೂತಪೂರ್ವ ಗೆಲುವನ್ನು ದಾಖಲಿಸಿದ್ದಲ್ಲದೇ ಚಿತ್ರರಂಗದ ಹಿಂದಿನ ಎಲ್ಲಾ ದಾಖಲೆಗಳನ್ನೂ ಅಳಿಸಿ ಹಾಕಿದೆಯಂತೆ. ಪುನೀತ್ ಮತ್ತು ಪ್ರಿಯ ಆನಂದ್ ಜೋಡಿಯಾಗಿ ನಟಿಸಿದ ಈ ಚಿತ್ರಕ್ಕೆ ಸಂತೋಷ್ ಆನಂದ್ ರಾಮ್ ಆಕ್ಷನ್ ಕಟ್ ಹೇಳಿದ್ದರು. ನೂರು ದಿನಗಳನ್ನು ಪೂರೈಸಿದ್ದ ಈ ಚಿತ್ರ ಎಲ್ಲಾ ತಲೆಮಾರಿನ ಪ್ರೇಕ್ಷಕರಿಂದಲೂ ಮೆಚ್ಚುಗೆ ಗಳಿಸಿಕೊಂಡಿತ್ತು. ವಿಶೇಷವಾಗಿ ಪುನೀತ್ ರಾಜಕುಮಾರ್ ಅವರ ಮನೋಜ್ಞ ಅಭಿನಯ ನೋಡುಗರ ಮನಮುಟ್ಟಿತ್ತು.

ಈ ಬಾರಿಯ ಸೈಮಾ ಅವಾರ್ಡ್ಸ್ ನಲ್ಲಿ ಅತ್ಯುತ್ತಮ ನಾಯಕ ಪ್ರಶಸ್ತಿ ಯಾರಿಗೆ ಒಲಿಯುತ್ತೆ ಅನ್ನೋ ಕುರಿತು ಕನ್ನಡಿಗರಲ್ಲಿ ಭಾರೀ ಕುತೂಹಲ ಮನೆ ಮಾಡಿತ್ತು. ಪುನೀತ್ ರಾಜಕುಮಾರ್ ಜೊತೆ ಇತರ ನಟರ ಹೆಸರು ಕೂಡ ನಾಮಿನೇಟ್ ಆಗಿದ್ದವು. ಇಷ್ಟೂ ಮಂದಿಯಲ್ಲಿ ತುಂಬಾನೇ ಸ್ಪರ್ಧೆ ಏರ್ಪಟ್ಟಿದ್ದರೂ ಅಂತಿಮವಾಗಿ ಅತ್ಯತ್ತಮ ನಾಯಕ ಪ್ರಶಸ್ತಿ ಪುನೀತ್ ರಾಜಕುಮಾರ್ ಅವರ ಪಾಲಿಗೆ ಒಲಿದಿದೆ. ತಮ್ಮ ನೆಚ್ಚಿನ ನಟನಿಗೆ ಪ್ರತಿಷ್ಠಿತ ಪ್ರಶಸ್ತಿ ಸಿಕ್ಕಿರುವುದಕ್ಕಾಗಿ ಅಪ್ಪು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂಭ್ರಮಾಚರಣೆಯಲ್ಲಿ ಮುಳುಗಿದ್ದಾರೆ.,

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top