ಮನೋರಂಜನೆ

ತೆಲುಗು ಸಿನಿಮಾಗಳಿಗಾಗಿ ಒಪ್ಪಿಕೊಂಡಿದ್ದ ಕನ್ನಡ ಚಿತ್ರದಿಂದ ಹೊರಬಂದ ರಶ್ಮಿಕಾ ಮಂದಣ್ಣ?

ನಮ್ಮ ಕನ್ನಡ ಚಿತ್ರರಂಗದ ಹಣೆಬರಹವೇ ಇಷ್ಟು!. ಇಲ್ಲಿ ನಮ್ಮವರು ಎನಿಸಿಕೊಂಡವರೇ ಕೈಕೊಡುವುದು. ಹೌದು ‘ಕಿರಿಕ್ ಪಾರ್ಟಿ’ ಎಂಬ ಅಪ್ಪಟ ಕನ್ನಡ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಳಲ್ಲಾ? ರಶ್ಮಿಕಾ ಮಂದಣ್ಣ, ಈಕೆಗೆ ಸದ್ಯ ಕುತ್ತಿಗೆ ಮೇಲೆ ತಲೆ ನಿಲ್ಲದಂತಾಗಿಬಿಟ್ಟಿದೆ ಎಂದು ಕನ್ನಡಿಗರು ಮಾತನಾಡಿಕೊಳ್ಳುತ್ತಿದ್ದಾರೆ.. ಮೊದಲ ಸಿನಿಮಾ ಗೆದ್ದಮೇಲೆ ಕನ್ನಡದ ದೊಡ್ಡ ದೊಡ್ಡ ಸ್ಟಾರ್ ನಟರ ಸಿನಿಮಾಗಳಿಗೆ ನಟಿಯಾಗುವ ಅವಕಾಶವನ್ನ ರಶ್ಮಿಕಾ ಪಡೆದುಕೊಂಡಿದ್ದಳು. ಆನಂತರ ‘ಚಲೋ’ ಸಿನಿಮಾ ಮೂಲಕ ತೆಲುಗಿಗೆ ಕಾಲಿಟ್ಟ ‘ಕಿರಿಕ್ ಹುಡುಗಿ’ ಆನಂತರ ಯಾಕೋ ಕನ್ನಡದ ಕಡೆ ತಿರುಗದೇ ಅಲ್ಲೇ ಜಂಡಾ ಹೂಡುವ ಸ್ಕೀಮ್ ಹಾಕಿಕೊಂಡಂತೆ ಕಾಣಿಸುತ್ತಿದೆ..

 

 

ಯಾಕೆಂದರೆ ಸದ್ಯ ಮೂರ್ನಾಲ್ಕು ತೆಲುಗು ಸಿನಿಮಾಗಳಲ್ಲಿ ನಟಿಸುತ್ತಿರುವ ರಶ್ಮಿಕಾ ಕನ್ನಡದಲ್ಲಿ ಯಾವೊಂದು ಸಿನಿಮಾಗಳಲ್ಲೂ ನಟಿಸುತ್ತಿಲ್ಲ.. ಅಷ್ಟೇ ಅಲ್ಲದೆ ತೆಲುಗು ಸಿನಿಮಾಗಳಿಗೋಸ್ಕರ ಮೊದಲೇ ಒಪ್ಪಿಕೊಂಡಿದ್ದ ಕನ್ನಡ ಚಿತ್ರಕ್ಕೆ ಕೈಕೊಟ್ಟಿದ್ದಾಳೆ ಎಂಬ ಸುದ್ದಿ ಕೂಡ ಗಾಂಧಿನಗರದಲ್ಲಿ ಹರಿದಾಡುತ್ತಿದೆ. ಹೌದು, “ರಕ್ಷಿತ್ ಶೆಟ್ಟಿ ಗರಡಿಯ ಗೌತಮ್ ಅಯ್ಯರ್ ಎಂಬಾತ ‘ವೃತ್ರ’ಎಂಬ ಚಿತ್ರವನ್ನು ನಿರ್ದೇಶನ ಮಾಡ್ತಿದ್ದಾನೆ, ಇದು ಮಹಿಳಾ ಪ್ರಧಾನ ಚಿತ್ರವಾಗಿದ್ದು ಅದಕ್ಕೆ ರಶ್ಮಿಕಾ ಮಂದಣ್ಣ ನಾಯಕಿಯಾಗಿದ್ದಾಳೆ, ಇದರಲ್ಲಿ ರಶ್ಮಿಕಾ ಡಿಟೆಕ್ಟಿವ್ ಆಫೀಸರ್ ಪಾತ್ರ ಮಾಡುತ್ತಿದ್ದಾಳೆ” ಎಂಬೊಂದು ಸುದ್ದಿ ವಾರಗಳ ಹಿಂದೆ ಕೇಳಿಬಂದಿತ್ತಲ್ಲ ಆ ಸಿನಿಮಾದಿಂದ ರಶ್ಮಿಕಾ ಹೊರಬಂದಿದ್ದಾಳಂತೆ.

“3 ತೆಲುಗು ಸಿನಿಮಾಗಳನ್ನ ಕೈಯಲ್ಲಿ ಹಿಡಿದು ತೆಲುಗಿನ ಸ್ಟಾರ್ ನಟಿಯಾಗಿರೋ ರಶ್ಮಿಕಾ ಈ ವರ್ಷ ಕೊನೆವರೆಗೂ ಬಿಡುವಾಗೊದಿಲ್ಲವಂತೆ. ಹೀಗಾಗಿಯೇ ‘ವೃತ್ರ’ ಚಿತ್ರದಿಂದ ಹೊರಗೆ ನಡೆದಿದ್ದಾರೆ ಮತ್ತು ಇದಕ್ಕೆ ಚಿತ್ರತಂಡದ ಸಂಪೂರ್ಣ ಒಪ್ಪಿಗೆ ಕೂಡ ಸೂಚಿಸಿದೆ ಎಂದು ಹೇಳಲಾಗಿದೆ.. ಹಾಗಾಗಿ ‘ವೃತ್ರ’ ಚಿತ್ರತಂಡ ರಶ್ಮಿಕಾ ಬಿಟ್ಟು ಹೋದ ಪಾತ್ರಕ್ಕೆ ಬೇರೆ ಹುಡುಗಿಯನ್ನು ಹುಡುಕಾಲಾಗುತ್ತಿದೆಯಂತೆ.

ದೊಡ್ಡ ತೆಲುಗು ಚಿತ್ರಕ್ಕಾಗಿ ಕನ್ನಡ ಸಿನಿಮಾಗೆ ಕೈಕೊಟ್ಟ ರಶ್ಮಿಕಾಗೆ ಒಂದ್ಕಾಲದಲ್ಲಿ ಆಕೆಯನ್ನು ‘ಸ್ಟೇಟ್ ಕ್ರಶ್ಶು’ ಎಂತೆಲ್ಲಾ ಬಿಲ್ಡಪ್ ಕೊಟ್ಟು ತಲೆಮೇಲೆ ಕೂರಿಸಿಕೊಂಡಿದ್ದ ಟ್ರೋಲ್ ಪೇಜುಗಳೇ ಈಗ ಉಗಿಯಲಾರಂಭಿಸಿವೆ. “ತೆಲುಗು ಸ್ಟಾರ್ ನಟರ ಸಿನಿಮಾಗಳಿಗಾಗಿ, ತನಗೆ ನೇಮು ಫೇಮು ತಂದುಕೊಟ್ಟ ಕನ್ನಡ ಚಿತ್ರಗಳನ್ನು ಎಡಗಾಲಲ್ಲಿ ಒದೆಯುತ್ತಾಳೆಂದರೆ ಅದೆಷ್ಟು ಧಿಮಾಕಿರಬೇಕು ಲೆಕ್ಕಹಾಕಿ” ಎಂದು ಕನ್ನಡ ಸಿನಿರಸಿಕರು ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ಹೊರಹಾಕುತ್ತಿದ್ದಾರೆ.

ಕನ್ನಡನಾಡಲ್ಲೇ ಹುಟ್ಟಿ ಬೆಳೆದಿದ್ದರೂ ನೆಟ್ಟಗೆ ಕನ್ನಡ ಮಾತನಾಡಲು ಬಾರದ ಈಕೆ ಸಿನಿಮಾ ಅವಕಾಶಕ್ಕಾಗಿ ಮೂರು ಮುಕ್ಕಾಲು ದಿನದಲ್ಲಿ ಅಚ್ಚುಕಟ್ಟಾಗಿ ತೆಲುಗು ಮಾತನಾಡುವುದನ್ನು ಕಲಿತಾಗಲೇ ಈಕೆಯ ಮೇಲೆ ಕನ್ನಡಿಗರು ಟೀಕಿಸಿದ್ದರು.. ಈಗ ಕನ್ನಡ ಸಿನಿಮಾದಿಂದ ಹೊರನಡೆದಿರುವುದು ಕನ್ನಡಿಗರಲ್ಲಿ ಮತ್ತಷ್ಟು ಕೋಪ ತರಿಸಿದೆ.. ಪರಭಾಷಾ ಸಿನಿಮಾಗಳಿಗಾಗಿ ಕನ್ನಡವನ್ನು, ಕನ್ನಡ ಚಿತ್ರರಂಗವನ್ನು ತುಚ್ಛವಾಗಿ ಕಾಣುತ್ತಿರುವ ರಶ್ಮಿಕಾಳಂತ ನಟಿಯರನ್ನು ನಮ್ಮ ಜನ ಸಾರಾಸಗಟಾಗಿ ತಿರಸ್ಕಾರ ಮಾಡಬೇಕಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top