fbpx
ಮನೋರಂಜನೆ

ಸೈಮಾ ಅವಾರ್ಡ್ಸ್ 2018- ಪ್ರಶಸ್ತಿ ಮುಡಿಗೇರಿಸಿಕೊಂಡ ಚಂದನವನದ ತಾರೆಯರ ಪಟ್ಟಿ ಇಂತಿದೆ.

ದುಬೈ ನಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ 2018ನೇ ಸಾಲಿನ ಸೈಮಾ ಸೌತ್ ಪ್ರಶಸ್ತಿ ಘೋಷಿಸಲಾಯಿತು. 2017ನೇ ಸಾಲಿನಲ್ಲಿ ಬಿಡುಗಡೆಯಾದ ಅತ್ಯುತ್ತಮ ಚಿತ್ರಗಳಿಗೆ ನೀಡಲಾದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ದಕ್ಷಿಣ ಭಾರತದ ನಟ-ನಟಿಯರು ಸಮಾಗಮವಾಗಿತ್ತು. ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಯ ಸಿನಿತಾರೆಯರ ಭಾಗವಹಿಸಿದ್ದ ಈ ಸಮಾರಂಭದಲ್ಲಿ ಅತ್ಯುತ್ತಮ ನಟ, ಸಿನಿಮಾ, ನಟಿ, ನಿರ್ದೇಶಕ,ಗಾಯಕ ಹೀಗೆ ಸಿನಿಮಾದ ನಾನಾ ವಿಭಾಗಗಳಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.

 

 

ಕನ್ನಡದ ‘ರಾಜಕುಮಾರ’ ಚಿತ್ರದ ಅಭಿನಯಕ್ಕಾಗಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದಾರೆ. ‘ತಾರಕ್’ ಚಿತ್ರಕ್ಕಾಗಿ ಶಾನ್ವಿ ಶ್ರೀವಾತ್ಸವ್ ಅತ್ಯುತ್ತಮ ನಟಿ ಪ್ರಶಸ್ತಿ ಮುಡಿಗೇರಿಸಿಕೊಂಡ್ರೆ, ರಾಜಕುಮಾರ ಚಿತ್ರಕ್ಕೆ ಒಟ್ಟು ಐದು ಪ್ರಶಸ್ತಿಗಳು ಒಲಿದುಬಂದಿವೆ.

ಸೌತ್ ಸೈಮಾ ಪ್ರಶಸ್ತಿ ವಿಜೇತರ ಪಟ್ಟಿ ಇಲ್ಲಿದೆ:

ಅತ್ಯುತ್ತಮ ಸಿನಿಮಾ : ರಾಜಕುಮಾರ

ಅತ್ಯುತ್ತಮ ನಟ: ಪುನೀತ್​ರಾಜ್​ಕುಮಾರ್​ (ರಾಜಕುಮಾರ)

ಅತ್ಯುತ್ತಮ ನಟಿ: ಶಾನ್ವಿ ಶ್ರೀವತ್ಸಾ (ತಾರಕ್​​​)

ಅತ್ಯುತ್ತಮ ನಟಿ (ಕ್ರಿಟಿಕ್​​​):ಶೃತಿ ಹರಿಹರನ್​​​​ (ಬ್ಯೂಟಿಫುಲ್​ ಮನಸ್ಸುಗಳು)

ಅತ್ಯುತ್ತಮ ನಿರ್ದೇಶಕ : ಸಂತೋಷ್​ ಆನಂದ್​ರಾಮ್​​ (ರಾಜಕುಮಾರ)

ಅತ್ಯುತ್ತಮ ಸಂಗೀತ ನಿರ್ದೇಶಕ : ವಿ.ಹರಿಕೃಷ್ಣ (ರಾಜಕುಮಾರ)

ಅತ್ಯುತ್ತಮ ಗೀತ ರಚನೆಕಾರ : ಸಂತೋಷ್​ ಆನಂದ್​ರಾಮ್​​ (ರಾಜಕುಮಾರ)

ಅತ್ಯುತ್ತಮ ಹಿನ್ನಲೆ ಗಾಯಕ : ರವಿ ಬಸ್ರೂರ್​​​​​ (ಚಂದ ಚಂದ ನನ್ನ ಹೆಂಡ್ತಿ, ಅಂಜನಿಪುತ್ರ)

ಅತ್ಯುತ್ತಮ ಹಿನ್ನಲೆ ಗಾಯಕಿ : ಅನುರಾಧಾ ಭಟ್​ (ಅಪ್ಪಾ ಐ ಲವ್​ ಯೂ ಪಾ, ಚೌಕ)

ಅತ್ಯುತ್ತಮ ಛಾಯಾಗ್ರಹಣ : ಸಂತೋಷ್​ ರೈ ಪಾತಾಜೆ (ಚಮಕ್​​​)

ಅತ್ಯುತ್ತಮ ಪೋಷಕ ನಟ: ಕಾಶಿನಾಥ್​​​​​​​​(ಚೌಕ)

ಅತ್ಯುತ್ತಮ ಪೋಷಕ ನಟಿ:ಭಾವನಾ ರಾವ್​​​​(ಸತ್ಯ ಹರಿಶ್ಚಂದ್ರ)

ಅತ್ಯುತ್ತಮ ಹಾಸ್ಯ ನಟ: ಸಾಯಿಕುಮಾರ್​​(ಹ್ಯಾಪಿ ನ್ಯೂ ಇಯರ್​​​)

ಅತ್ಯುತ್ತಮ ಖಳನಟ: ಆಶಿಶ್​ ವಿದ್ಯಾರ್ಥಿ(ಪಟಾಕಿ)

ಅತ್ಯುತ್ತಮ ಉದಯೋನ್ಮುಖ ನಟ: ರಿಷಿ (ಅಪರೇಷನ್​​ ಅಲಮೇಲಮ್ಮ)

ಅತ್ಯುತ್ತಮ ಉದಯೋನ್ಮುಖ ನಟಿ : ಎಕ್ತಾ ರಾತೋಡ್​ (ಸಿಲಿಕಾನ್​ ಸಿಟಿ)

ಅತ್ಯುತ್ತಮ ಉದಯೋನ್ಮುಖ ನಿರ್ದೇಶಕ : ತರುಣ್​ ಸುಧೀರ್​​​(ಚೌಕ)

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top