ಸಮಾಚಾರ

ಹುಟ್ಟುಹಬ್ಬದಂದೇ ಎರಡನೇ ಇನ್ನಿಂಗ್ಸ್ ಆರಂಭಿಸುತ್ತಿದ್ದಾರೆ ರಿಯಲ್ ಸ್ಟಾರ್ ಉಪೇಂದ್ರ.

ಕರ್ನಾಟಕದ ರಾಜಕಾರಣದ ದಿಕ್ಕುದೆಸೆಗಳನ್ನೇ ಬದಲಿಸಿ ಬಿಡುವಂತೆ ಥೇಟು ತಮ್ಮ ಸಿನಿಮಾ ಸ್ಕ್ರಿಫ್ಟ್‌ನಂಥಾದ್ದೇ ಬತ್ತಳಿಕೆ ಹಿಡಿದು ಕುಣಿದಾಡಿದ್ದವರು ರಿಯಲ್ ಸ್ಟಾರ್ ಉಪೇಂದ್ರ. ಉಪೇಂದ್ರ ಕೆಜೆಪಿ ಪಕ್ಷ ಘೋಷಣೆ ಮಾಡಿದಾಗ ಕರ್ನಾಟಕದಲ್ಲೊಂದು ನಿರೀಕ್ಷೆ ಮೂಡಿಕೊಂಡಿದ್ದು ಸುಳ್ಳಲ್ಲ. ಕಾಸು ಚೆಲ್ಲಾಡದೆ ಚುನಾವಣೆ ಸಾಧ್ಯವಾಗಬೇಕೆಂಬ ಕನಸು ಶುರುವಾಗುವ ಮುನ್ನವೇ ಅಂತ್ಯವಾಗಿತ್ತು.

 


ಕೆಪಿಜೆಪಿಯಿಂದ ಬಂದಾಗ ಹೊಸ ಪಕ್ಷವನ್ನು ಸ್ಥಾಪಿಸುತ್ತೇನೆ ಎಂದು ಹೇಳಿದ್ದ ಮಾತಿನಂತೆ ಉಪ್ಪಿ ಹೊಸ ಪಕ್ಷವನ್ನು ನೋಂದಣಿ ಮಾಡಿಸಿದ್ದಾರೆ. ತಮ್ಮ ಜನ್ಮದಿನದಂದು ಹೊಸ ಪಕ್ಷವಾದ ಉತ್ತಮ ಪ್ರಜಾಕೀಯ ಪಾರ್ಟಿಯನ್ನು (UPP) ಲೋಕಾರ್ಪಣೆ ಮಾಡಲಿದ್ದಾರೆ. .ಉಪೇಂದ್ರ ಅವರ ಹುಟ್ಟುಹಬ್ಬ ನಾಡಿದ್ದು ಮಂಗಳವಾರ ಅಂದರೆ ಸೆಪ್ಟೆಂಬರ್ 18ರಂದಾಗಿದ್ದು ಅಂದು ಉತ್ತಮ ಪ್ರಜಾಕೀಯ ಪಾರ್ಟಿಯನ್ನು ಅವರ ನಿವಾಸದಲ್ಲಿ ಅಧಿಕೃತವಾಗಿ ಪಕ್ಷವನ್ನು ಲಾಂಚ್​ ಮಾಡಲಿದ್ದಾರೆ.

 

 

ಉಪೇಂದ್ರ ಟ್ವೀಟ್ ಮಾಡಿದ್ದೇನು?
“ಅಸಾಮಾನ್ಯ ಪ್ರಜಾಪ್ರಭುಗಳೇ..
ಸಂಪೂರ್ಣ ಪಾರದರ್ಶಕ ಆಡಳಿತದ, ಪ್ರಣಾಳಿಕೆಗಳ ವಿಚಾರಗಳೇ ಕೇಂದ್ರಬಿಂದುವಾಗಿರುವಂತಹ “ಪ್ರಜಾಕೀಯ” ವ್ಯವಸ್ಥೆಯನ್ನು ತರಲು “ಉತ್ತಮ ಪ್ರಜಾಕೀಯ ಪಾರ್ಟಿ” (ಯು.ಪಿ.ಪಿ) ಪಕ್ಷವನ್ನು ನನ್ನ ನಿವಾಸದಲ್ಲಿ 18-9-18 ಬೆಳಿಗ್ಗೆ 10.30 ಕ್ಕೆ, ಲೋಕಾರ್ಪಣೆ ಆಗುತ್ತದೆ. ತಾವೆಲ್ಲರೂ
ಪಾಲ್ಗೊಳ್ಳಬೇಕಾಗಿ ವಿನಂತಿಸುತ್ತೇನೆ. Upp”

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top