fbpx
ಉಪಯುಕ್ತ ಮಾಹಿತಿ

ಮದುವೆಯ ಸಮಯದಲ್ಲಿ ವಧು ಹಾಗೂ ವರನಿಗೆ ದೃಷ್ಟಿಬೊಟ್ಟು ಇಡುತ್ತಾರೆ ,ಇದರ ಹಿಂದೆ ಇರುವ ಕಾರಣ ಏನ್ ಗೊತ್ತಾ,ಆ ಕಾರಣ ನಿಮಗೆ ಆಶ್ಚರ್ಯ ಹುಟ್ಟಿಸುತ್ತೆ.

ಕೆನ್ನೆ ಬೊಟ್ಟು. ( ಚುಕ್ಕೆ ಬೊಟ್ಟು) ಹಿಂದಿನ ಕಾಲದಲ್ಲಿ ಮದು ಮಗಳು ಮತ್ತು ಮದು ಮಗನಿಗೆ ಏಕೆ ಈ ಕೆನ್ನೆ ಬೊಟ್ಟನ್ನು ಇಡುತ್ತಿದ್ದರು ಇದರ ಹಿಂದಿರುವ ಕಾರಣ ಏನು ?
ಮದುವೆ ಕಾರ್ಯದಲ್ಲಿ ಮದುಮಗನ ,ಮದುಮಗಳ ಮುಖದ ಒಂದು ಕೆನ್ನೆಯ ಮೇಲೆ ಕಪ್ಪನೆಯ ಚುಕ್ಕೆ ಬೊಟ್ಟನ್ನು ಇಡುತ್ತಿದ್ದರು. ಅದರ ವಿವರ ತಿಳಿಯದಿದ್ದರೂ ಹಾಗೆ ಇಡುವುದು ಅಭ್ಯಾಸವಾಗಿ ಹೋಗಿದೆ .ಕೆನ್ನೆಯ ಮೇಲೆ ಬೊಟ್ಟನ್ನು ಈ ಕಾಲದಲ್ಲಿ ದೃಷ್ಟಿಬೊಟ್ಟು ಎಂದು ಅದನ್ನು ಇಡುವುದರಿಂದ. ವಧು ವರರಿಗೆ ಯಾರ ದೃಷ್ಟಿ ತಗಲುವುದಿಲ್ಲವೆಂದು ಸಹ ಕೆಲವರು ಹೇಳುತ್ತಾರೆ .
ಆದ್ದರಿಂದ ಇದನ್ನು ದೃಷ್ಟಿಬೊಟ್ಟು ಎಂದು ಕೆಲವರು ಜಿಷ್ಟಿ ಬೊಟ್ಟು ಎಂದು ಕೆಲವರು ಎನ್ನುತ್ತಿದ್ದಾರೆ. ಈ ಕಾಲದಲ್ಲಿ ಕೆನ್ನೆ ಮೇಲಿನ ಬೊಟ್ಟನ್ನು ಕುರಿತು ಯಾರು ಏನು ಅಂದುಕೊಂಡರೂ ಅದು ಪೂರ್ವದಿಂದ ಬಂದ ಆಚರಣೆ ಎಂದು ಹೇಳಬಹುದು. ಪೂರ್ವ ಕಾಲದಲ್ಲಿ ಇದನ್ನು ದೃಷ್ಟಿಬೊಟ್ಟು ಎಂದಾಗಲಿ ಜಿಷ್ಟಿ ಬೊಟ್ಟು ಎಂದಾಗಲಿ, ಕರೆಯುತ್ತಿರಲಿಲ್ಲ.

 

ಪೂರ್ವದಲ್ಲಿ ಅರ್ಥದಿಂದ ಕೂಡಿಕೊಂಡ ವಿಧಾನ ತಿಳಿಸುವುದಕ್ಕೆ ವಿಧವಾಗಿ ಕೆನ್ನೆಯ ಮೇಲೆ ಬೊಟ್ಟನ್ನು ಇಡುತ್ತಿದ್ದರು. ದೃಷ್ಟಿ ದೋಷ ನಿವಾರಣೆಗೆ ಇಡುವ ಬೊಟ್ಟು ಅಲ್ಲ ಆದ್ದರಿಂದ ಅದನ್ನು ದೃಷ್ಟಿಬೊಟ್ಟು ಎನ್ನುತ್ತಿರಲಿಲ್ಲ. ಮದುವೆ ಕಾರ್ಯಗಳೆಲ್ಲಾ ದೈವ ಜ್ಞಾನವನ್ನು ಬೋಧಿಸುವವೆಂಬ ನಿಯಮದ ಪ್ರಕಾರ ಕೆನ್ನೆಯ ಮೇಲೆ ಇಡುವ ಬೊಟ್ಟು ಸಹ ಜ್ಞಾನಕ್ಕೆ ಸಂಬಂಧಿಸಿದ ಆಚರಣೆ ಎಂದು ತಿಳಿಯಬೇಕು.
ಕೆನ್ನೆಯ ಮೇಲೆ ಇಡುವ ಚುಕ್ಕೆ ಬೊಟ್ಟನ್ನು ನೋಡುವುದರಿಂದ ನೋಡಿದವರು ತಿಳಿದುಕೊಳ್ಳಬೇಕಾದ ಜ್ಞಾನವೇನು ಎಂಬುದನ್ನು ಎಂದು ತಿಳಿದುಕೊಳ್ಳೋಣ.

ಮನುಷ್ಯ ಶಿಶುವಾಗಿ ಹುಟ್ಟುತ್ತಿದ್ದಾನೆ. ಹುಟ್ಟಿದ ಪ್ರತಿ ಶಿಶುವನ್ನು ದೇವರು ಗುರುತು ಇಟ್ಟುಕೊಳ್ಳುತ್ತಿದ್ದಾನೆ.ಹುಟ್ಟಿದ ಪ್ರತಿ ಶರೀರವು ದೇವರ ನಿಲಯವಾಗಿದೆ.ಶರೀರವು ಪ್ರಕೃತಿ ಸಂಬಂಧವೇ ಆದರೂ ಶರೀರದಲ್ಲಿ ಪರಮಾತ್ಮ, ಆತ್ಮ, ಜೀವಾತ್ಮ ಮೂವರು ಇದ್ದಾರೆ .ಪರಮಾತ್ಮ ವಿಶಾಲವಾದವನಾದರೂ ಶರೀರದಲ್ಲಿ ಸಹ ಇದ್ದರಾದ್ದರಿಂದ “ಮತ್ ಸ್ಥಾನಿ ಸರ್ವಭೂತಾನಿ” ಎಂದು ಭಗವದ್ಗೀತೆಯಲ್ಲಿ ರಾಜವಿದ್ಯೆ, ರಾಜಗುಹ್ಯ ಯೋಗದ ನಾಲ್ಕನೇ ಶ್ಲೋಕದಲ್ಲಿ ಹೇಳಿದ್ದಾನೆ.
“ಮತ್” ಎಂದರೆ ನನ್ನೊಂದರ ಎಂದು, ಸ್ಥಾನಿ ಎಂದರೆ ಸ್ಥಾನ ಎಂದು ಅರ್ಥ. ಪರಮಾತ್ಮ ವಿಶಾಲವಾಗಿದ್ದಾನೆ ಮತ್ತು ಎಲ್ಲಾ ಜೀವ ರಾಶಿಗಳಿಗೂ ಪರಮಾತ್ಮನಲ್ಲಿವೆ. ಹಾಗೆಯೇ ಪರಮಾತ್ಮ ಎಲ್ಲಾ ಶರೀರಗಳಲ್ಲಿಯೂ ಸಹ ಇದ್ದಾನೆ. ಆದ್ದರಿಂದ ಆತನು ಎಲ್ಲರಲ್ಲಿಯೂ ಇದ್ದಾನೆ ಎಂದು ಹೇಳಬಹುದು. ಇದರಿಂದ ಪ್ರತಿ ಶರೀರವು ದೇವರಿಂದ ಗುರುತಿಸಲ್ಪಟ್ಟಿದೆ ಎಂದು ಆತನ ದೃಷ್ಟಿಯಲ್ಲಿ ಎಲ್ಲರೂ ಇದ್ದಾರೆ ಎಂದು ಹೇಳಬಹುದು. ಈ ವಿಷಯವನ್ನು ಪ್ರತಿ ಮನುಷ್ಯ ಗ್ರಹಿಸುವಂತೆ ಪ್ರತಿ ಮನುಷ್ಯನ ಶರೀರದ ಮೇಲೆ ಹುಟ್ಟಿನಿಂದಲೇ ಒಂದು ಮತ್ತು ಒಂದು ಇಟ್ಟಿದ್ದಾನೆ. ಕಾಲ ಕ್ರಮವಾಗಿ ಎಂಬ ಪದವನ್ನು ಹೇಳುತ್ತಿದ್ದೇವೆ.

 

 

 

ಶರೀರದ ಮೇಲೆ ಕಪ್ಪು ಮತ್ ಸ್ಥಾನಗಳನ್ನು ಹುಟ್ಟಿದಾಗಲೇ ನೋಡಬಹುದು. ಶರೀರದ ಮೇಲೆ ಹುಟ್ಟಿನಿಂದಲೇ ಎಲ್ಲೋ ಒಂದು ಕಡೆ ಇರುವ “ಮತ್ ಸ್ಥಾನವನ್ನು ಹುಟ್ಟು ಮತ್ಸ” ಎಂದೂ ಅನ್ನುವುದು ನಡೆಯುತ್ತಿದೆ.ಹುಟ್ಟಿನಿಂದಲೇ ಮತ್ಸ ಹುಟ್ಟಬೇಕಾದ ಅವಶ್ಯಕತೆ ಎನಿದೆಯೆಂದು ಯಾರೂ ಅಲೋಚಿಸುತ್ತಿಲ್ಲ. ಹುಟ್ಟು ಮತ್ಸ ಶರೀರದ ಮೇಲೆ ಹುಟ್ಟಿನಿಂದ ಇರುವುದರಿಂದ ನೀನು ಹುಟ್ಟಿದಾಗಲೇ ನನ್ನಿಂದ ಗುರುತಿಸಲ್ಪಟ್ಟಿದ್ದೀಯ ಎಂದು ದೇವರು ತಿಳಿಸಿದಂತೆ ತಿಳಿಯುತ್ತಿದೆ. ಪ್ರತಿಯೊಬ್ಬರೂ ದೇವರ ಸ್ಥಾನವಾಗಿ ಇದ್ದಾರೆಂದು ತಿಳಿಸಲ್ಪಡುವ ಗುರುತೇ “ಮತ್ಸ” ಎಂದು ಹೇಳಬಹುದು. ಹುಟ್ಟಿದಾಗ ಹುಟ್ಟು ಮಚ್ಚೆ ಅಲ್ಲದೆ ನಂತರ ಜೀವನ ಕಾಲದಲ್ಲಿ ಶರೀರದ ಮೇಲೆ ಚಿಕ್ಕ ಚಿಕ್ಕ ಮಚ್ಚೆಗಳು ಬರುತ್ತಿರುತ್ತವೆ. ಇದರಿಂದ ಹುಟ್ಟಿದಾಗ ಹುಟ್ಟಿದ ನಂತರ ಎಂದಿಗೂ ನಿನ್ನ ಅಧೀನದಲ್ಲಿದೆ ಎಂದು ನೀನು ನನ್ನಿಂದ ಗುರುತಿಸಲ್ಪಟ್ಟಿದ್ದೀಯ ಎಂದು ತಿಳಿಸುವ ಸಲುವಾಗಿಯೇ ಎಂದು ತಿಳಿಯುತ್ತಿದೆ.
ಹುಟ್ಟಿದ ಸ್ತ್ರೀ ಶರೀರವಾಗಲಿ, ಪುರುಷನ ಶರೀರವಾಗಲಿ ಮತಗಳು( ಮಚ್ಚೆಗಳು )ಹೊಂದಿದ್ದು ದೇವರ ಇರುವಿಕೆಯನ್ನು ತಿಳಿಸುತ್ತೇವೆ, ವಿಷಯವನ್ನು ತಿಳಿಸುವ ಸಲುವಾಗಿ ಪೂರ್ವದಲ್ಲಿ ದೈವಜ್ಞಾನ ತಿಳಿದ ಹಿರಿಯರು ಮದುವೆ ಕಾರ್ಯಗಳಲ್ಲಿ, ಮದುಮಗಳು, ಮದುಮಗನ ಮುಖದ ಮೇಲೆ ಪ್ರತ್ಯೇಕವಾಗಿ ಕಾಣಿಸುವಂತೆ ಕೆನ್ನೆಯ ಮೇಲೆ ಕಪ್ಪು ಬೊಟ್ಟನ್ನು ಇಡುತ್ತಿದ್ದರು.

 

ಮದುಮಗನಿಗೆ ಬಲಗಡೆ ಕೆನ್ನೆಯ ಮೇಲೆ ಕಪ್ಪನೆಯ ಚುಕ್ಕೆ ಬೊಟ್ಟು ಇಟ್ಟು ಮದುಮಗಳಿಗೆ ಎಡಗಡೆಯ ಕೆನ್ನೆಯ ಮೇಲೆ ಕಪ್ಪು ಚುಕ್ಕೆ ಬೊಟ್ಟನ್ನು ಇಡುತ್ತಿದ್ದರು. ಶರೀರದಲ್ಲಿ ಬಲಗಡೆ ಪರಮಾತ್ಮನಿಗೆ ಸಂಬಂಧಿಸಿರುವುದೆಂದು ಎಡಗಡೆ ಪ್ರಕೃತಿಗೆ ಸಂಬಂಧಿಸಿರುವುದು ಎಂದು ಹಿರಿಯರ ಒಂದು ಭಾವ ಅರ್ಧನಾರೀಶ್ವರ ಆಕಾರವೂ ಸಹ ಬಲಗಡೆ ಈಶ್ವರನಾಗಿ ಎಡಗಡೆ ಪಾರ್ವತಿಯಾಗಿ ಚಿತ್ರೀಕರಿಸುವುದು ತೋರಿಸುವುದು ಈ ಅರ್ಥದಿಂದಲೇ ಎಂದು ತಿಳಿದುಕೊಳ್ಳಬೇಕು.
ಕೆನ್ನೆಯ ಮೇಲೆ ಕಪ್ಪು ಬೊಟ್ಟು, ಹುಟ್ಟು ಮಚ್ಚೆಯ ನಮೂನೆಗೋಸ್ಕರ ಇಟ್ಟಿರುವುದೆಂದು ತಿಳಿಯಬೇಕು. ಎಷ್ಟು ದೈವಜ್ಞಾನ ತಿಳಿಯುವ ಸಲುವಾಗಿ ದೃಷ್ಟಿಬೊಟ್ಟು ಎಂದಾಗಲಿ ಜಿಷ್ಟಿ ಬೊಟ್ಟು ಎಂದಾಗಲಿ ಹೇಳಿಕೊಳ್ಳುವುದು ತಪ್ಪು.

ಪೂರ್ವದಲ್ಲಿ ಮದುವೆ ಕಾರ್ಯದಲ್ಲಿ ಪ್ರತಿಯೊಂದು ಕಾರ್ಯಕ್ಕೂ ಅರ್ಥವನ್ನು ವಧುವರರಿಗೆ ತಿಳಿ ಹೇಳುತ್ತಿದ್ದರು. ಅಲ್ಲಿಯವರೆಗೂ ತಿಳಿಯದ ದೈವ ವಿಷಯ ಆ ದಿನದಿಂದ ವಧು ವರರಿಗೆ ತಿಳಿಯಬೇಕೆಂದು ತಪ್ಪದೇ ಕೆನ್ನೆಯ ಮೇಲೆ ಬೊಟ್ಟನ್ನು ಇಡುವುದು ನಡೆಯುತ್ತಿತ್ತು. ಆ ಆಚರಣೆ ಈ ದಿನಗಳಲ್ಲಿ ಸಹ ಉಳಿದಿದ್ದರೂ ದೈವಜ್ಞಾನ ವಿಷಯ ತಿಳಿಯದಂತೆ ಹೋಗಿದೆ ಈಗಲಾದರೂ ಪೂರ್ವದಲ್ಲಿ ಹಿರಿಯರು ಹೇಳಿದ ಇಂದೂ ಸಂಪ್ರದಾಯಗಳ ಪ್ರಕಾರ ಅರ್ಥ ಸಹಿತವಾಗಿ ಕೆನ್ನೆಯ ಮೇಲೆ ಬೊಟ್ಟಿನಿಂದ ಮದುವೆಗಳು ಮಾಡಿಕೊಳ್ಳಬೇಕೆಂದು ತಿಳಿಸುತ್ತಿದ್ದೇವೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top