ಆರೋಗ್ಯ

ಕಾಡುವ ಹಲವು ರೀತಿಯ ಕಿವಿ ನೋವುಗಳಿಗೆ ಇಲ್ಲಿದೆ ಮನೆಮದ್ದು.

ದೇಹಕ್ಕೆ ಬರುವ ನೋವುಗಳಲ್ಲಿ ಕಿವಿ ನೋವು ಕೂಡ ಒಂದು. ದೊಡ್ಡವರು ಮತ್ತು ಮಕ್ಕಳು ಎಂಬ ತಾರತಮ್ಯವಿಲ್ಲದೆ ಎಲ್ಲರನ್ನೂ ಒಂದಲ್ಲ ಒಂದು ದಿನ ಇದು ಕಾಡುತ್ತದೆ. ಕಿವಿನೋವು ಬರಲು ಹಲವು ಕಾರಣಗಳಿದ್ದು, ಇದರಲ್ಲಿ ದೀರ್ಘ ಮತ್ತು ಅಲ್ಪ ಕಾಲದ ಕಿವಿ ಸೋಂಕು, ದವಡೆಯ ಸಂಧಿವಾತ, ಕಿವಿಯ ಮೇಣ, ಕಿವಿಯಲ್ಲಿ ಏನಾದರೂ ಸಿಕ್ಕಿಹಾಕಿಕೊಂಡಿರುವುದು, ಕಿವಿಯಲ್ಲಿ ಗಾಯ, ಕಿವಿಯ ತಮಟೆಯಲ್ಲಿ ತೂತು, ನೋಯುತ್ತಿರುವ ಗಂಟಲು ಮತ್ತು ಸೈನಸ್ ಸೋಂಕು ಕಾರಣವಾಗಿರುತ್ತದೆ. ಕಿವಿ ನೋವು ಆರಂಭದಲ್ಲಿ ಅಲ್ಪವಾಗಿದ್ದರೆ ಮನೆಮದ್ದುಗಳ ಚಿಕಿತ್ಸೆಯನ್ನು ಮಾಡಿಕೊಳ್ಳಬಹುದಾಗಿದೆ. ಈ ನೋವು ತೀವ್ರವಾಗಿದೆ ಎಂದಾದಲ್ಲಿ ವೈದ್ಯರನ್ನು ನೀವು ಹೋಗಿ ಕಾಣಬೇಕಾಗುತ್ತದೆ.

 

 

 

ಕಿವಿ ನೋವು ತೀವ್ರವಾದಾಗ ಕೆಲವೊಂದು ರೋಗಲಕ್ಷಣಗಳನ್ನು ಇದು ತೋರ್ಪಡಿಸುತ್ತದೆ. ಬಾಹ್ಯ ಕಿವಿ ಕಾಲುವೆಯಲ್ಲಿ ನೋವು, ಕಿವಿಯಲ್ಲಿ ತುರಿಸುವಿಕೆ, ಕಿವಿಯಲ್ಲಿ ಝೇಂಕರಿಸುವ ಶಬ್ಧ, ಊದಿಕೊಂಡ ಕಿವಿ, ಕಿವಿ ಬಂದ್ ಆಗಿರುವುದು, ಕಿವಿಯಲ್ಲಿ ನೋವು, ಕಿವಿಯಿಂದ ದ್ರವ ವಿಸರ್ಜನೆ ಇತ್ಯಾದಿ ಲಕ್ಷಣಗಳಾಗಿವೆ. ಕಿವಿನೋವಿಗೆ ಕೆಲವು ತಾತ್ಕಾಲಿಕ ಮನೆಮದ್ದುಗಳು ಇಲ್ಲಿವೆ ನೋಡಿ. ಆದರೆ ತೀವ್ರವಾದರೆ ಅಗತ್ಯವಾಗಿ ವೈದ್ಯರನ್ನು ಸಂಪರ್ಕಿಸಿ.

ತುಳಸಿ ಎಲೆ:ತುಳಸಿ ಎಲೆಗಳು ಬೀಟಾ ಕ್ಯಾರೊಟಿನ್ ಅನ್ನು ಒಳಗೊಂಡಿದ್ದು ವಿಟಮಿನ್ ಸಿ ಇದರಲ್ಲಿದೆ. ಇಯುಜೊನಲ್, ಬೋರ್ನಲ್ ಅಂಶಗಳನ್ನು ಇದು ಪಡೆದಿದೆ. ಇದೊಂದು ಅದ್ಭುತ ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿಸೆಪ್ಟಿಕ್ ಅಂಶಗಳನ್ನು ಒಳಗೊಂಡಿದ್ದು ಕಿವಿ ನೋವಿಗೆ ಉತ್ತಮ ಪರಿಹಾರವನ್ನು ಒದಗಿಸುತ್ತದೆ. ತುಳಸಿಯ ಎಲೆಯಿಂದ ರಸವನ್ನು ಪಡೆದು 2 ಹನಿಗಳಷ್ಟು ನೋವಿರುವ ಕಿವಿಗೆ ಬಿಡಿ.

ಬೆಳ್ಳುಳ್ಳಿ:ಉತ್ಕರ್ಷಣ ನಿರೋಧಿ ಅಂಶಗಳನ್ನು ಬೆಳ್ಳುಳ್ಳಿಯು ಒಳಗೊಂಡಿದ್ದು ಕಿವಿ ನೋವಿಗೆ ಉತ್ತಮ ಪರಿಹಾರವನ್ನು ಇದು ಒದಗಿಸುತ್ತದೆ. ಬೇಯಿಸಿದ ಬೆಳ್ಳುಳ್ಳಿಯನ್ನು (3-4) ಚೆನ್ನಾಗಿ ಜಜ್ಜಿಕೊಂಡು ಸ್ವಲ್ಪ ನೀರಿಗೆ ಹಾಕಿ ಮತ್ತು ಚಿಟಿಕೆ ಉಪ್ಪನ್ನು ನೀರಿಗೆ ಸೇರಿಸಿಕೊಳ್ಳಿ. ನಂತರ ಇದನ್ನು ಹತ್ತಿಯ ಬಟ್ಟೆಯಲ್ಲಿ ಕಟ್ಟಿ ನೋಯುತ್ತಿರುವ ಕಿವಿಯ ಮೇಲಿಡಿ.

ಸಾಸಿವೆ ಎಣ್ಣೆ:
ಆ್ಯಂಟಿಬ್ಯಾಕ್ಟೀರಿಯಲ್ ಅಂಶಗಳನ್ನು ಸಾಸಿವೆ ಎಣ್ಣೆ ಒಳಗೊಂಡಿದ್ದು ಕಿವಿ ನೋವಿಗೆ ಇದು ಉತ್ತಮ ಪರಿಹಾರವನ್ನು ಒದಗಿಸುತ್ತದೆ. ತುಸು ಬೆಚ್ಚಗಿನ ಸಾಸಿವೆ ಎಣ್ಣೆಯನ್ನು (2-3 ಹನಿಗಳು) ನೋವಿರುವ ಕಿವಿಗೆ ಹಾಕಿ ಮತ್ತು ಹಾಗೆಯೇ ಸ್ವಲ್ಪ ಹೊತ್ತು ಬಿಡಿ.

 

 

 

ಕಿವಿಗೆ ಬೆಚ್ಚಗಿನ ಶಾಖ:ಕಿವಿ ನೋವನ್ನು ಕಡಿಮೆ ಮಾಡಲು ಸ್ವಚ್ಛವಾದ ಟವೆಲ್ ಅನ್ನು ಬಿಸಿ ನೀರಿಗೆ ಅದ್ದಿ ನಂತರ ಅದನ್ನು 20 ನಿಮಿಷಗಳ ಕಾಲ ನೋವಿರುವ ಕಿವಿಗೆ ಮೃದುವಾಗಿ ಒತ್ತಿ ಇಡಿ.

ಈರುಳ್ಳಿ ರಸ:ಈರುಳ್ಳಿ ಹಿಂಡಿ ಅದರ ರಸವನ್ನು ಹತ್ತಿಯಲ್ಲಿ ಮುಳುಗಿಸಿ ಕಿವಿಯ ಮೇಲೆ ಒತ್ತಿ ಇಡಿ. ಇದು ನೋವನ್ನು ಕಡಿಮೆ ಮಾಡುತ್ತದೆ ಮತ್ತು ನೋವನ್ನು ಉಂಟುಮಾಡುವ ಬ್ಯಾಕ್ಟೀರಿಯಾವನ್ನು ನಿವಾರಿಸುತ್ತದೆ, ಅಂತೆಯೇ ಕೆಂಪಗಾದ ಕಿವಿ ಹಾಗೂ ತುರಿಕೆಯನ್ನು ದೂರಮಾಡುತ್ತದೆ.

ವಿಟಮಿನ್ ಸಿ ಮತ್ತು ಜಿಂಕ್ ಇರುವ ಆಹಾರಗಳು:ವಿಟಮಿನ್ ಸಿ ಮತ್ತು ಜಿಂಕ್ ಅಂಶ ಇರುವ ಆಹಾರಗಳನ್ನು ಸೇವಿಸಿ. ಲಿಂಬೆ, ಕಿತ್ತಳೆ, ಸೀಬೆಹಣ್ಣು, ಸ್ಟ್ರಾಬೆರ್ರಿ, ಪಪ್ಪಾಯ, ಗೋಡಂಬಿ, ಕಿವಿ ನೋವಿಗೆ ಕಾರಣವಾಗುವ ಸೂಕ್ಷ್ಮಾಣುಗಳನ್ನು ಕೊಂದು ನೋವು ನಿವಾರಿಸುತ್ತದೆ.

ಮಿನರಲ್ ಆಯಿಲ್:ಈಜುವಾಗ, ಕಿವಿಯಲ್ಲಿ ನೋವು ಉಂಟಾಗುವ ಅನುಭವ ಜನರಿಗಾಗುತ್ತದೆ. ಇದನ್ನು ತಡೆಗಟ್ಟಲು, ಈಜುವ ಮುನ್ನ ಕಿವಿಗೆ ಮಿನರಲ್ ಎಣ್ಣೆಯನ್ನು ಹಾಕಿಕೊಳ್ಳುವುದರಿಂದ ನೋವು ಉಂಟಾಗುವುದಿಲ್ಲ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top