fbpx
ಕ್ರಿಕೆಟ್

ಕೊನೆಗೂ ಕನ್ನಡಿಗರಿಗೆ ಆಡುವ ಹನ್ನೊಂದರೊಳಗೆ ಅವಕಾಶ ನೀಡಿದ ಟೀಮ್ ಇಂಡಿಯಾ.

ಅದೆಷ್ಟೇ ಉತ್ಕೃಷ್ಟ ಫಾರ್ಮ್’ನಲ್ಲಿದ್ದರೂ ಟೀಮ್ ಇಂಡಿಯಾ ಮಾತ್ರ ಅದ್ಯಾಕೋ ಕರ್ನಾಟಕದ ಯುವಪ್ರತಿಭೆಗಳಿಗೆ ಆಡುವ ಹನ್ನೊಂದರಲ್ಲಿ ಚಾನ್ಸ್ ಕೊಡುತ್ತಿಲ್ಲ. ಕೆಎಲ್ ರಾಹುಲ್ ಮತ್ತು ಮನೀಶ್ ಪಾಂಡೆ ಇಬ್ಬರೂ ಉತ್ತಮ ಫಾರ್ಮ್ ನಲ್ಲಿಯೇ ಇದ್ದರೂ ಟೀಮ್ ಇಂಡಿಯಾ ಮ್ಯಾನೇಜ್ ಮೆಂಟ್ ಇವರನ್ನ ಕಡೆಗಣಿಸುತ್ತಿದೆ.. ತಾವಾಡಿದ ಕೊನೆ ಪಂದ್ಯದಲ್ಲಿ ಅಮೋಘ ಶತಕ ಭಾರಿಸಿದ್ದರೂ ಕೆಎಲ್ ರಾಹುಲ್ ಅವರಿಗೆ ಏಷ್ಯಾ ಕಪ್ ನಲ್ಲಿ ಒಂದು ಪಂದ್ಯವನ್ನು ಆಡಿಸಲಿಲ್ಲ ಇನ್ನು ಮನೀಶ್ ಪಾಂಡೆ ಕತೆಯೂ ಅಷ್ಟೇ.. ದೇಸಿ ಪಂದ್ಯಗಳಲ್ಲಿ ಅತ್ಯತ್ತಮ ಪ್ರದರ್ಶನ ನೀಡಿರುವ ಮನೀಶ್ ಪಾಂಡೆ ಕೂಡ ಬೆಂಚ್ ಕಾದದ್ದೇ ಸಾಧನೆ..

 

 

ಪಾಕಿಸ್ತಾನದ ವಿರುದ್ಧ ಭರ್ಜರಿಯಾಗಿ ಗೆದ್ದು ಏಷ್ಯಾ ಕಪ್ ಫೈನಲ್ ಗೆ ಎಂಟ್ರಿ ಕೊಟ್ಟಿರುವ ಟೀಂ ಇಂಡಿಯಾಗೆ ಇಂದು ಔಪಚಾರಿಕ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡದ ಸೆಣಸಾಡುತ್ತಿದೆ . ಹೇಗಿದ್ದರೂ ಅದಾಗಲೇ ಫೈನಲ್ ನಲ್ಲಿ ಸ್ಥಾನ ಪಡೆದುಕೊಂಡಿರುವ ಟೀಮ್ ಇಂಡಿಯಾ ಇಂದು ಇದುವರೆಗೆ ಟೂರ್ನಿಯಲ್ಲಿ ಆಡಲು ಅವಕಾಶ ಸಿಗದ ಕ್ರಿಕೆಟಿಗರಿಗೆ ಅವಕಾಶ ನೀಡಿದೆ. ಆ ಪೈಕಿ ಇಬ್ಬರು ಕನ್ನಡಿಗರೂ ಇದ್ದಾರೆ..

ಇಂದಿನ ಪದ್ಯದಲ್ಲಿ ರಾಹುಲ್ ಮತ್ತು ಮನೀಶ್ ಪಾಂಡೆ ಇಬ್ಬರಿಗೂ ಅವಕಾಶ ಸಿಕ್ಕಿದ್ದು ಇವರ ಜೊತೆ ದೀಪಕ್ ಚಾಹರ್, ಖಲೀಲ್ ಅಹಮೆದ್, ಸಿದ್ದಾರ್ಥ್ ಕೌಲ್ ಕೂಡ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಇನ್ನು ರೋಹಿತ್ ಶರ್ಮ, ಶಿಖರ್ ಧವನ್, ಬುಮ್ರಾ, ಚಾಹಲ್ ಮತ್ತು ಭುವನೇಶ್ವರ್ ಕುಮಾರ್ ಅವರಿಗೆ ವಿಶ್ರಾಂತಿ ನೀಡಲಾಗಿದ್ದು ಮಹೇಂದ್ರ ಸಿಂಗ್ ಧೋನಿ ತಂಡವನ್ನು ಮುನ್ನಡೆಸುತ್ತಿದ್ದಾರೆ..

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top