ಸಮಾಚಾರ

ದರ್ಶನ್‌ ಅಪಘಾತ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್- ಕಾರಿನಲ್ಲಿದ್ದವರು ನಾಲ್ವರಲ್ಲ, ಆರು ಜನ.

ಕಾರು ಅಪಘಾತದಲ್ಲಿ ಕೈ ಮೂಳೆ ಮುರಿದುಕೊಂಡಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ಯ​ ಮೈಸೂರಿನ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದು ತಿಳಿದಿರುವ ವಿಷಯವೆ. ಸದ್ಯ ದಚ್ಚು ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು ಅವರನ್ನು ಸ್ಪೆಷಲ್ ವಾರ್ಡ್ ಗೆ ಶಿಫ್ಟ್ ಮಾಡಲಾಗಿದೆ. ನಿನ್ನೆ ಐಸಿಯುನಲ್ಲಿದ್ದ ದರ್ಶನ್ ಇಂದು ಸ್ಪೆಷಲ್ ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಕೈಗೆ ಶಸ್ತ್ರ ಚಿಕಿತ್ಸೆ ಮಾಡಿ ಪ್ಲೇಟ್ ಹಾಕಲಾಗಿದೆ.

ದರ್ಶನ್ ಕಾರು ಆಕ್ಸಿಡೆಂಟ್ ಕೇಸು ದಿನಕ್ಕೊಂದು ಟ್ವಿಸ್ಟ್ ಅಂಡ್ ಟರ್ನ್ಸ್’ಗಳನ್ನ ಪಡೆದುಕೊಳ್ಳುತ್ತಿದೆ. ಅಪಘಾತವಾದ ಕಾರು ಶ್ರೀರಂಗಪಟ್ಟಣದಲ್ಲಿ ಪತ್ತೆಯಾಗಿತ್ತು., ಕಾರಿಗೆ ನಂಬರ್ ಪ್ಲೇಟ್ ಆನ್ ಕಿತ್ತುಹಾಕಲಾಗಿತ್ತು., ನಂತರ ಕಾರು ಓಡುಸುತ್ತಿದುದು ರಾಯ್​ ಆಂಟೋನಿ ಅಲ್ಲ. ಬದಲಾಗಿ ಆತ ದರ್ಶನ್​ ಸ್ನೇಹಿತ ಎಂದು ಹೇಳಲಾಗಿತ್ತು,. ಕೊನೆಗೂ ಅಂತೋನಿ ರಾಯ್ ಮೇಲೆ ಮಾತ್ರ ಎಫ್ಐಆರ್ ದಾಖಲಿಸಲಾಗಿತ್ತು.. ಇದೀಗ ಈ ಪ್ರಕರಣಕ್ಕೆ ಮತ್ತೊಂದು ಮೇಜರ್ ಟ್ವಿಸ್ಟ್ ಸಿಕ್ಕಿದ್ದು ಕಾರಿನಲ್ಲಿ ಎಷ್ಟು ಜನ ಪ್ರಯಾಣ ಮಾಡುತ್ತಿದ್ದರು ಎಂಬ ಗೊಂದಲ ಶುರುವಾಗಿದೆ.

 

 

ಅಪಘಾತವಾದಾಗ ಕಾರಿನಲ್ಲಿದ್ದವರು ನಾಲ್ವರಲ್ಲ, 5 ಮಂದಿ ಎಂದು ಮೈಸೂರು ನಗರ ಪೊಲೀಸ್‌ ಆಯುಕ್ತ ಡಾ.ಸುಬ್ರಮಣ್ಯೇಶ್ವರರಾವ್ ಹೇಳಿದ್ದಾರೆ. ‘ಅಪಘಾತವಾದ ಕಾರಿನಲ್ಲಿ ಐದು ಜನ ಇದ್ದರು ಎಂಬುದು ನಮ್ಮ ಗಮನಕ್ಕೆ ಬಂದಿದೆ. ನಾಲ್ಕು ಜನಕ್ಕೆ ಪೆಟ್ಟಾಗಿದೆ’ ಎಂದು ಸುಬ್ರಮಣ್ಯೇಶ್ವರರಾವ್ ಹೇಳಿದ್ದಾರೆ.. ಆದರೆ ಈವರೆಗೆ ದರ್ಶನ್ ಸ್ನೇಹಿತರು, ಸಂಬಂಧಿಸಿದವರು ಮತ್ತು ಲಕ್ಷ್ಮಣ್ ನೀಡಿರುವ ದೂರಿನಲ್ಲಿ ರಾಯ್ ಸೇರಿ ನಾಲ್ಕು ಮಂದಿ ಎಂದು ಉಲ್ಲೇಖಿಸಲಾಗಿದೆ..ಇದಲ್ಲದೆ ಆಸ್ಪತ್ರೆಯ MLC ವರದಿ ಪ್ರಕಾರವು ಕಾರಿನಲ್ಲಿ 6 ಮಂದಿ ಇದ್ದರು ಎಂದು ಹೇಳಲಾಗಿದೆ..

ಆಸ್ಪತ್ರೆಯ ವರದಿ ಹೇಳುತ್ತಿದೆ ಅಪಘಾತವಾದ ಕಾರಿನಲ್ಲಿ ಇದ್ದುದ್ದು ಆರು ಜನ, ಪೊಲೀಸರು ಹೇಳುತ್ತಿದ್ದಾರೆ ಐದು ಜನ. ಆದ್ರೆ, ಎಫ್ಐಆರ್ ನಲ್ಲಿ ದಾಖಲಾಗಿರುವುದು ನಾಲ್ಕು ಜನ. ಹಾಗಾದರೆ ಇವುಗಳಲ್ಲಿ ನಿಜವಾದದ್ದು ಯಾವುದು? ಈ ಅಪಘಾತ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆಯುತ್ತಿದ್ದು, ದರ್ಶನ್‌ ಆಪ್ತರು ಮತ್ತಿಬ್ಬರ ಬಗ್ಗೆ ಏಕೆ ಮಾಹಿತಿ ಮುಚ್ಚಿಡುತ್ತಿದ್ದಾರೆ ಎನ್ನುವ ಗೊಂದಲಗಳು ಮೂಡುತ್ತಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top