ಭವಿಷ್ಯ

ಅಯ್ಯೋ ಕೆಲಸ ಅರ್ಧಕ್ಕೆ ನಿಂತೋಗಿದೆ ಎಷ್ಟೇ ಕಷ್ಟ ಪಟ್ಟರು ಮುಂದೆ ಹೋಗ್ತಿಲ್ಲ ಅನ್ನೋರು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಿರೋ ಈ ಉಪಾಯಗಳು ಟ್ರೈ ಮಾಡಿ

ನಿಮ್ಮ ಕೆಲಸಗಳು ಅರ್ಧಕ್ಕೆ ನಿಂತು ಹೋಗಿದ್ದರೆ ಅವು ಪೂರ್ತಿಯಾಗಲು ಸಹಾಯವಾಗುತ್ತದೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಿರುವ ಈ ಉಪಾಯಗಳು . ಒಮ್ಮೆ ಪ್ರಯತ್ನಿಸಿ ನೋಡಿ.

ಕೆಲವೊಮ್ಮೆ ನಾವು ಮಾಡುತ್ತಿರುವ ಕೆಲಸಗಳು ಇದ್ದಕ್ಕಿದ್ದಂತೆ ಯಾವುದೇ ಹಣದ ಕೊರತೆ ಇಲ್ಲದಿದ್ದರೂ ಕೂಡ ಯಾವುದೋ ಒಂದು ಸಮಸ್ಯೆ ಎದುರಾಗಿ ಅರ್ಧಕ್ಕೆ ನಿಂತು ಹೋಗುತ್ತದೆ.ಈ ರೀತಿಯಾದಾಗ ನಾವು ಯೋಚನೆ ಮಾಡುತ್ತೇವೆ ಏಕೆ ಕೆಲಸ ಹೀಗೆ ನಿಂತು ಹೋಯಿತು.ಇದ್ದಕ್ಕೆ ಆಗ ನಾವು ಯಾವ ರೀತಿಯ ಪರಿಹಾರಗಳನ್ನು ಮಾಡಿಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ

 

 

 

ಮನುಷ್ಯನ ಪ್ರತಿಯೊಂದು ಸಮಸ್ಯೆಗೂ ಜ್ಯೋತಿಷ್ಯ ಶಾಸ್ತ್ರದಲ್ಲಿ ಪರಿಹಾರವಿದೆ. ಸಣ್ಣದರಿಂದ ಹಿಡಿದು ದೊಡ್ಡ ದೊಡ್ಡ ಉಪಾಯಗಳನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ .ಅರ್ಧಕ್ಕೆ ನಿಂತ ಕೆಲಸವನ್ನು ಹೇಗೆ ಪೂರ್ಣಗೊಳಿಸುವುದು ಎಂಬುದನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ .

ಪ್ರತಿದಿನ ಆಕಳು, ನಾಯಿ, ಕಾಗೆ , ಪಕ್ಷಿಗಳಿಗೆ ಆಹಾರ ನೀಡಬೇಕು. ಅರ್ಧಕ್ಕೆ ನಿಂತ ಕೆಲಸ ಪೂರ್ಣಗೊಳ್ಳುತ್ತದೆ. ಜೊತೆಗೆ ಎಲ್ಲ ರೀತಿಯ ಸಮಸ್ಯೆಗೂ ಪರಿಹಾರ ಸಿಗಲು ಪ್ರಾರಂಭವಾಗುತ್ತದೆ. ಹಸುವಿನಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗಿ ಇರುತ್ತದೆ. ಮನೆಯ ಸುತ್ತಮುತ್ತ ಆಕಳು ಇದ್ದರೆ, ಎಲ್ಲ ಸಮಸ್ಯೆಯಿಂದ ಮುಕ್ತಿ ಹೊಂದಿ ಸುಖ ಸಮೃದ್ಧಿಯಾದ ಜೀವನ ನಡೆಸುತ್ತಿದ್ದೀರಿ ಎಂದರ್ಥ. ಪ್ರತಿದಿನ ಆಕಳಿಗೆ ಆಹಾರ ನೀಡಿದರೆ ಸುಖ ಸಮೃದ್ಧಿ ಪ್ರಾಪ್ತಿಯಾಗುತ್ತದೆ .ನಾಯಿಗಳಿಗೆ ಪ್ರತಿದಿನ ಆಹಾರ  ನೀಡುವುದರಿಂದ ದುಷ್ಟರು ನಿಮ್ಮಿಂದ ದೂರವಾಗುತ್ತಾರೆ. ಭಯ ದೂರವಾಗುತ್ತದೆ. ನಾಯಿಗೆ ಸಿಹಿ ರೊಟ್ಟಿಯನ್ನು ನೀಡಬೇಕು .ಕಾಗೆಗಳಿಗೆ ಆಹಾರ ನೀಡುವುದರಿಂದ ಪಿತೃ ದೋಷ ಹಾಗೂ ಕಾಳ ಸರ್ಪ ದೋಷ ನಿವಾರಣೆಯಾಗಲಿದೆ. ಶನಿಯನ್ನು ಪ್ರಸನ್ನ ಗೊಳಿಸಲು ಕಾಗೆಗೆ ಆಹಾರ ನೀಡಬೇಕು .ಪಕ್ಷಿಗಳಿಗೆ ಆಹಾರ ನೀಡುವುದರಿಂದ  ವ್ಯಾಪಾರ, ವ್ಯವಹಾರದಲ್ಲಿ, ನೌಕರಿಯಲ್ಲಿ ಲಾಭವಾಗಲಿದೆ. ಮನೆಯಲ್ಲಿ ಖುಷಿಯ ವಾತಾವರಣ ಹೆಚ್ಚಾಗುತ್ತದೆ. ವ್ಯಕ್ತಿಯ ಸಮೃದ್ಧಿಯ ಬಾಗಿಲು ತೆರೆಯಲಿದೆ .ಸಮಾಜದಲ್ಲಿ ಗೌರವ ಪ್ರಾಪ್ತಿಗಾಗಿ ಪಾರಿವಾಳಕ್ಕೆ ಕಾಳುಗಳನ್ನು ನೀಡಬೇಕು. ಶುಕ್ರವಾರ ಕಾಳುಗಳನ್ನು ಖರೀದಿ ಮಾಡಿ ಶನಿವಾರದಿಂದ ಹಾಕಲು ಶುರು ಮಾಡಿ .ಹೀಗೆ ಸತತವಾಗಿ ಈ ಪರಿಹಾರಗಳನ್ನು ಮಾಡುತ್ತಾ ಬನ್ನಿ ಆಗ ನಿಮ್ಮ ಸಮಸ್ಯೆಗಳು ತಾವಾಗಿಯೇ ಕೆಲವೇ ದಿನಗಳಲ್ಲಿ ಬಗೆಹರಿಯುತ್ತವೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top