fbpx
ಮನೋರಂಜನೆ

ಚಿರಯುವತಿ ಜಯಪ್ರದಾಗೆ ಒಲಿದ ಭಾಗ್ಯ,ನೇಪಾಳ ರಾಯಭಾರಿಯಾಗಿ ಬದಲಾದ ನಟಿ

ಮಾಜಿ ಸಂಸತ್ ಸದಸ್ಯೆ ಹಾಗೂ ಸ್ಯಾಂಡಲ್ ವುಡ್ ,ಬಾಲಿವುಡ್‍ನ ಖ್ಯಾತ ನಟಿ ಜಯಪ್ರದಾ ರವರಿಗೆ ಒಲಿದು ಬಂತು ಭಾಗ್ಯ ,ಟಿ ಜಯಪ್ರದಾ ಅವರನ್ನು ನೇಪಾಳ ಸರ್ಕಾರ ಸೌಹಾರ್ದ ರಾಯಭಾರಿಯನ್ನಾಗಿ ನೇಮಕ ಮಾಡಿಕೊಂಡಿದೆ.
ನೇಪಾಳ ಸರ್ಕಾರ ಸಂಸತ್ತಿನಲ್ಲಿ ಸೌಹಾರ್ದ ರಾಯಭಾರಿಯನ್ನಾಗಿ ನಟಿ ಜಯಪ್ರದಾರವರನ್ನು ಆಯ್ಕೆಮಾಡುವ ಬಗ್ಗೆ ಮುಂಚೆಯಿಂದ ವಿಚಾರ ಪ್ರಸ್ತಾಪಿಸಿತ್ತು ಈಗ ಇದಕ್ಕೆ ಎಲ್ಲಾ ಸದಸ್ಯರು ಒಂದೇ ಅಭಿಪ್ರಾಯವನ್ನು ಹೊಂದಿದ್ದು ಸರ್ವಾನುಮತದಿಂದ ಜಯಪ್ರದಾ ರವರನ್ನು ಆಯ್ಕೆಮಾಡಿ ನೇಪಾಳ ಸರ್ಕಾರದ ಸೌಹಾರ್ದ ರಾಯಭಾರಿಯನ್ನಾಗಿ ಆಯ್ಕೆ ಮಾಡಿದ್ದಾರೆ.

 

 

 

ನಟಿ ಜಯಪ್ರದಾರವರು ಈ ಹುದ್ದೆ ಅಂಗೀಕರಿಸಿದ್ದಾರೆ ,ಜಯಪ್ರದಾ ಅವರು ರಾಯಭಾರಿ ಹುದ್ದೆಗೆ ನಾಮನಿರ್ದೇಶನದಿಂದಾಗಿ ನೆರೆಹೊರೆ ರಾಷ್ಟ್ರಗಳ ನಡುವಿನ ಹಳೆಯ ಸಾಂಸ್ಕೃತಿಕ ಸಂಬಂಧ ಮತ್ತಷ್ಟು ಬಲಗೊಳಿಸುವ ಹಾಗೂ ನೇಪಾಳದ ಪ್ರವಾಸೋದ್ಯಮ ಇಲಾಖೆಯನ್ನು ಭಾರತದಲ್ಲಿ ಉತ್ತೇಜಿಸಲು ನೆರವಾಗಲಿದೆ. ಒಟ್ಟು ನಾಲ್ಕು ವರ್ಷಗಳ ಕಾಲ ಜಯಪ್ರದಾ ಅವರು ನೇಪಾಳದ ರಾಯಭಾರಿಗಳಾಗಲಿದ್ದಾರೆ ಎನ್ನಲಾಗಿದೆ.

ಆದಾಯ ಮತ್ತು ಉದ್ಯೋಗ ಸೃಷ್ಟಿಯಲ್ಲಿ ನೇಪಾಳಕ್ಕೆ ಪ್ರವಾಸೋದ್ಯಮವೇ ಮೂಲ ಆಧಾರವಾಗಿದೆ. ಅಲ್ಲದೇ ಭಾರತದ ಪ್ರವಾಸಿಗರು ನೇಪಾಳದ ಪ್ರಮುಖ ಗ್ರಾಹಕರಾಗಿದ್ದಾರೆ. ಹೀಗಾಗಿ ಪ್ರವಾಸೋದ್ಯಮವನ್ನು ಸೆಳೆಯುವ ಹಾಗೂ ಪ್ರೋತ್ಸಾಹಿಸುವ ದೃಷ್ಟಿಯಿಂದ ನೇಪಾಳ ಸರ್ಕಾರವು 2020ರ ವರ್ಷವನ್ನು ವಿಸಿಟ್ ನೇಪಾಳ ಇಯರ್ ಎಂಬ ಅಡಿಬರಹದ ಯೋಜನೆಯನ್ನು ಹಮ್ಮಿಕೊಂಡಿದೆ. ಈ ಮೂಲಕ ನೇಪಾಳಕ್ಕೆ ಭೇಟಿ ನೀಡುವ ಪ್ರವಾಸಿಗರನ್ನು ಆಕರ್ಷಿಸುವಂತೆ ಮಾಡಿದೆ. ಈ ಯೋಜನೆ ಮೂಲಕ ಸುಮಾರು 20 ಲಕ್ಷ ಪ್ರವಾಸಿಗರನ್ನು ಸೆಳೆಯುವ ಉದ್ದೇಶವನ್ನು ಪ್ರವಾಸೋದ್ಯಮ ಇಲಾಖೆ ಹೊಂದಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top