ಮನೋರಂಜನೆ

ಸ್ಯಾಂಡಲ್‌ವುಡ್‌ನಲ್ಲಿ ಭುಗಿಲೆದ್ದ ಮತ್ತೊಂದು ಟೈಟಲ್ ವಿವಾದ- ಯಾರ ಪಾಲಿಗೆ ‘ಮದಗಜ’

ಕನ್ನಡ ಚಿತ್ರರಂಗದಲ್ಲಿ ಮತ್ತೊಂದು ಟೈಟಲ್ ಕಿತ್ತಾಟ ಆರಂಭವಾಗಿದೆ., ‘ಅಯೋಗ್ಯ’ ಖ್ಯಾತಿಯ ನಿರ್ದೇಶಕ ಮಹೇಶ್ ‘ಮದಗಜ’ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ ಎನ್ನಲಾಗಿತ್ತು. ನಾಯಕನಾಗಿ ಶ್ರೀಮುರಳಿ ನಟಿಸಲಿದ್ದಾರೆ ಅಂತಲೂ ಸುದ್ದಿಯಾಗಿತ್ತಲ್ಲಾ, ಈಗ ಆ ‘ಮದಗಜ’ ಟೈಟಲ್ ವಿಚಾರವಾಗಿಯೇ ಗಾಂಧಿನಗರದಲ್ಲಿ ವಿವಾದ ಹುಟ್ಟುಕೊಂಡಿದೆ.

ಎರಡು ವರ್ಷದ ಹಿಂದೆಯೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ‘ಮದಗಜ’ ನೋಂದಣಿಯಾಗಿದ್ದು ಆ ಶೀರ್ಷಿಕೆಯನ್ನು ನೋಂದಣಿ ಮಾಡಿಸಿದ್ದು ನಿರ್ದೇಶಕ ಅಯೋಗ್ಯ ಮಹೇಶ್.. ‘2016ರಲ್ಲಿ ಯೋಗರಾಜ್ ಭಟ್ ಅವರ ಹೆಸರಿನೊಂದಿಗೆ ‘ಮದಗಜ’ ಎಂಬ ಟೈಟಲ್ ಅನ್ನು ಮಹೇಶ್ ಅವರು ನೋಂದಣಿ ಮಾಡಿಸಿದ್ದರಂತೆ. ಆದರೆ ಅದಾದ ವರ್ಷದ ಬಳಿಕ ಶೀರ್ಷಿಕೆಯನ್ನು ನವೀಕರಣ ಮಾಡಿಸಬೇಕಿತ್ತು., “ಶೀರ್ಷಿಕೆ ನವೀಕರಣ ಪ್ರಕ್ರಿಯೆಯ ಕಡೆ ದಿನಾಂಕದ ಬಗ್ಗೆಯೂ ವಾಣಿಜ್ಯ ಮಂಡಳಿ ನಮಗೆ ಮಾಹಿತಿ ನೀಡಿಲ್ಲ.. ಶೀರ್ಷಿಕೆ ನವೀಕರಣ ಮಾಡಿಸದಿದ್ದಕ್ಕೆ ನನ್ನ ‘ಮದಗಜ’ ಟೈಟಲ್​ನ್ನು ನಮ್ಮಿಂದ ಒಪ್ಪಿಗೆ ಪಡೆದುಕೊಳ್ಳದೆ ಎಂ.ಜಿ. ರಾಮಮೂರ್ತಿ ತಮ್ಮ ಹೆಸರಿನಲ್ಲಿ ನೋಂದಣಿ ಮಾಡಿಸಿಕೊಂಡಿದ್ದಾರೆ’ ಎಂದು ಅಯೋಗ್ಯ ಮಹೇಶ್ ಹೇಳುತ್ತಿದ್ದಾರೆ.

 

 

ಸದ್ಯ ಮದಗಜ ಟೈಟಲ್ ತಮ್ಮಿಂದ ಕೈತಪ್ಪಿ ಹೋಗಿರುವುದರಿಂದ ಪರ್ಯಾಯ ಶೀರ್ಷಿಕೆಗಳನ್ನ ಚಿತ್ರತಂಡ ಹುಡುಕಿದ್ದು ‘ಶ್ರೀಮುರಳಿ ಮದಗಜ’ ಅಥವಾ ‘ವೀರ ಮದಗಜ’ ಎಂಬ ಎರಡು ಬೇರೆ ಶೀರ್ಷಿಕೆಗಳನ್ನ ಮಹೇಶ್ ವಾಣಿಜ್ಯ ಮಂಡಳಿಯಲ್ಲಿ ರಿಜಿಸ್ಟರ್ ಮಾಡಿಸಿದ್ದಾರೆ.. ಇದೀಗ ಈ ಎರಡು ಟೈಟಲ್ಲುಗಳಲ್ಲಿ ‘ಶ್ರೀಮುರಳಿ ಮದಗಜ’ ಎಂಬ ಟೈಟಲ್ಅನ್ನು ಫೈನಲ್ ಮಾಡಿರುವ ಮಹೇಶ್, ಆದಷ್ಟು ಬೇಗ ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಿದ್ದಾರಂತೆ..

ಸೆಪ್ಟೆಂಬರ್ 28ಕ್ಕೆ ನಡೆಯಲಿರುವ ಕಾರ್ಯಕಾರಿ ಸಭೆಯಲ್ಲಿ ‘ಮದಗಜ’ ಶೀರ್ಷಿಕೆ ಬಗೆಗಿನ ಗೊಂದಲಕ್ಕೆ ಅಧಿಕೃತವಾಗಿ ತೆರೆಬೀಳಲಿದೆ. ಇನ್ನು ಎಂ.ಜಿ.ರಾಮಮೂರ್ತಿ ಅವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಹಾಕಿಕೊಂಡು ಸಿನಿಮಾ ನಿರ್ಮಿಸುವುದಕ್ಕಾಗಿ ‘ಮದಗಜ’ ಎಂಬ ಟೈಟಲ್ಲನ್ನು ನೋಂದಣಿ ಮಾಡಿಸಿದ್ದಾರೆ ಎಂದು ಹೇಳಲಾಗುತ್ತಿದೆ… ಒಟ್ಟಿನಲ್ಲಿ ‘ಮದಗಜ’ ಶ್ರೀಮುರುಳಿ ಪಾಲಾಗುತ್ತದೆಯೋ? ಅಥವಾ ದರ್ಶನ್ ಪಾಲಾಗುತ್ತದೆಯೋ? ಕಾದು ನೋಡಬೇಕಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top