ಹೆಚ್ಚಿನ

ಪಿತೃ ಪಕ್ಷದ ವೇಳೆಯಲ್ಲಿ ಕಾಗೆಗಳಿಗೆ ಏಕೆ ಹೆಚ್ಚಿನ ಮಹತ್ವ ನೀಡುತ್ತಾರೆ ಗೊತ್ತಾ

ಪಿತೃ ಪಕ್ಷ ನಿನ್ನೆಇಂದ ಇನ್ನೂ 15 ದಿನಗಳ ಕಾಲ ಆಚರಣೆ ಮಾಡಲಾಗುತ್ತೆ ಪಿತೃ ಪಕ್ಷ 24 ಸೆಪ್ಟೆಂಬರ್ ನಿಂದ ಶುರುವಾಗಿದ್ದು ಅಕ್ಟೋಬರ್ 8 ಕ್ಕೆ ಅಂತ್ಯ ಗೊಳ್ಳುವುದು .ಪಿತೃ ಪಕ್ಷ ಎಂದರೆ ನಾವು ಯಾವುದೇ ಪೂಜೆ ಮಾಡುತ್ತೀವೋ ಬಿಡುತ್ತೀವೋ ಆದರೆ ಹಿರಿಯರು ಸತ್ತವರನ್ನು ಸ್ಮರಣೆ ಮಾಡಿಕೊಂಡು ಅವರ ಭಾವಚಿತ್ರವನ್ನು ಹಾಗೂ ಅವರಿಗೆ ಇಷ್ಟವಾದ ತಿಂಡಿ ತಿನ್ನಿಸುಗಳನ್ನು ಮತ್ತು ಹೊಸ ಬಟ್ಟೆಗಳನ್ನುಎಡೆಯನ್ನು ಇಟ್ಟು ಪೂಜೆ ಮಾಡುವುದೇ ಈ ಪಿತೃ ಪಕ್ಷ ಎಂದು ಕರೆಯುತ್ತೇವೆ.ಆದರೆ ಇನ್ನು ಕೆಲವರು ಹಿರಿಯರಿಗೆ ದರ್ಪಣವನ್ನು ಬಿಡುತ್ತಾರೆ .ಪಿತೃ ಪಕ್ಷ ದಲ್ಲಿ ಹಿರಿಯರಿಗೂ ಮತ್ತು ಕಾಗೆಗಳಿಗೂ ಕೂಡ ಹೆಡೆಯನ್ನು ಇಡುತ್ತಾರೆ .

 

 

 

ಪಿತೃ ಪಕ್ಷದಲ್ಲಿ ಕಾಗೆ ಕೂಡ ಹೆಡೆ ಇಡಲಾಗುತ್ತೆ ಅದರ ಮಹತ್ವವೇನು .

ಪಿತೃ ಪಕ್ಷದಲ್ಲಿ ಕಾಗೆಗಳನ್ನು ಹಿರಿಯರ ಸಂಕೇತ ಎಂದು ಗ್ರಂಥಗಳಲ್ಲಿ ಹೇಳಲಾಗಿದೆ .ಕಾಗೆಗಳ ವಿಚಾರದಲ್ಲಿ ನೋಡುವುದಾರೆ ಕೆಲವು ಮನೆಗಳ ಮುಂದೆ ಕಾಗೆಗಳು ಕೂಗುವುದರಿಂದ ಯಾರಾದರೂ ನೆಂಟರು ಬರುತ್ತಾರೆ ಎಂಬ ಶಕುನ ನೀಡುತ್ತದೆ .ಗ್ರಹಗಳ ಅನುಸಾರವಾಗಿ ನೋಡುವುದಾದರೆ ಕಾಗೆ ಶನಿಯ ವಾಹನವಾಗಿರುತ್ತದೆ .ಮನುಷ್ಯರಿಗೆ ಗ್ರಹಗಳ ಸ್ಥಿತಿಗಳು ಕೆಟ್ಟದಾಗ ಕಾಗೆಯು ಮಾನವನ ತಲೆಗೆ ಟೆಚ್ ಆಗುವುದು ಮತ್ತು ಮನುಷ್ಯನ ಮೇಲೆ ಕಾಗೆ ಗಾಲೀಜು ಮಾಡುವುದು ಇದರಿಂದ ಮನುಷ್ಯನಿಗೆ ಯಾವುದಾದರು ತೊಂದರೆಗಳು ಬರುವ ಮುನ್ಸೂಚನೆ ನೀಡುತ್ತದೆ.

ಕಾಗೆ ಶಕುನ ತಿಳಿಸುತ್ತದೆ .ಪಿತೃ ಪಕ್ಷದಲ್ಲಿ ಕಾಗೆಗೂ ಇರುವ ಸಂಭದವನ್ನು ನೋಡುವುದಾದರೆ ,ಕಾಗೆ ಪಿತೃ ಪಕ್ಷದಲ್ಲಿ ಹಿರಿಯರನ್ನು ಅನುಗ್ರಹವನ್ನು ಕರುಣಿಸುವುದು ಒಂದು ಶಕ್ತಿ ಎನ್ನಲಾಗುತ್ತೆ ,ಕಾಗೆಗಳ ಕೆಲವು ಗ್ರಂಥಗಳ ಆಧಾರ ಮೇಲೆಯೂ ಇರುವಂತಹ ಉಲ್ಲೇಖನ ವಿಚಾರದಲ್ಲಿ ಕಾಗೆಗಳು ಎಂದರೆ ಹಿರಿಯರ ಸಂಕೇತ ಎಂದು ಎನ್ನಲಾಗುತ್ತದೆ .ಯಾಕೆಂದರೆ ತಿಥಿ ಮತ್ತು ಶ್ರಾದ್ಧ ಕಾಲದಲ್ಲಿ ಅವರಿಗು ಎಡೆ ಇಡುತ್ತೇವೆ ಮತ್ತು ಕಾಗೆಗಳು ಕೂಡ ಎಡೆ ಇಡುವುದು ಇದನ್ನು ಹಿರಿಯರ ಅನುಗ್ರಹಗೋಸ್ಕರ ಕಾಗೆಗಳಿಗೆ ಎಡೆ ಇಡುವುದು.

ಕಾಗೆಗಳು ವಿಚಾರದಲ್ಲಿ ಬಂದಾಗ ಸಾಮಾನ್ಯವಾಗಿ ಕಾಗೆಗಳು ಬಾಯಿಯಲ್ಲಿ ಏನಾದರೂ ಇಟ್ಟುಕೊಂಡು ಹೋಗುತ್ತಾ ಇರುತ್ತದೆ .ಕೆಲವೊಂದು ಕಾಗೆಗಳು ಬಾಯಿಯಲ್ಲಿ ಹೂವು ಮತ್ತು ಎಲೆಗಳನ್ನು ಕಚ್ಚಿಕೊಂಡಿರುತ್ತೆ ಅದನ್ನು ನೋಡಿದವರಿಗೆ ಏನು ಸಮಸ್ಯೆ ಆಗುತ್ತಾ ಎಂದು ಯೋಚನೆ ಮಾಡುತ್ತಾರೆ.ಆದರೆ ಕೆಲವು ಗ್ರಂಥಗಳ ಉಲ್ಲೇಖನದಲ್ಲಿ ಕಾಗೆಗಳು ಬಾಯಿಯಲ್ಲಿ ಹೂವು ಕಚ್ಚಿಕೊಂಡಿರುವದನ್ನು ನೋಡಿದರೆ ಶುಭ ಶಕುನ ಎಂದು ಹಿರಿಯರು ಹೇಳಿದರೆ ಯಾವುದೇ ಹೋಗುವ ಕೆಲಸಗಳಲ್ಲಿ ಶುಭವಾಗುವ ಸಂಕೇತ ಎಂದು ಗ್ರಂಥಗಳಲ್ಲಿ ಹೇಳಲಾಗಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top