ಸಮಾಚಾರ

ಮೋಹಕತಾರೆ ರಮ್ಯಾ ಮೇಲೆ ಎಫ್​ಐಆರ್​ ದಾಖಲಿಸಿದ ಪೊಲೀಸರು- ಕಾರಣವೇನು ಗೊತ್ತಾ?

ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷದ ಪ್ರಭಾವ ಹೊಂದುವ ಮೂಲಕ ಆನ್‌ಲೈನ್ ವಿಭಾಗವನ್ನು ನಿರ್ವಹಿಸುತ್ತಿರುವಾಕೆ ರಮ್ಯಾ. ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನೇರವಾಗಿಯೇ ಟ್ವೀಟ್ ಮಾಡುತ್ತಲೇ ಪದೇ ಪದೆ ಮೋದಿ ಅಭಿಮಾನಿಗಳನ್ನು ಕೆಣಕುತ್ತಾ ಸುದ್ದಿಯಾಗುತ್ತಿದ್ದ ರಮ್ಯಾಗೆ ಇದೀಗ ಅವರ ಟ್ವೀಟುಗಳೇ ಮುಳ್ಳಾಗಿ ಪರಿಣಮಿಸಿವೆ. ಯಾಕೆಂದರೆ ರಮ್ಯಾ ಅವರೇ ಮಾಡಿದ ಟ್ವೀಟ್‌’ವೊಂದಕ್ಕೆ ಸಂಬಂಧಿಸಿ ಉತ್ತರ ಪ್ರದೇಶ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ.

 

 

ರಫೆಲ್​ ಒಪ್ಪಂದಕ್ಕೆ ಸಂಬಂಧಪಟ್ಟಂತೆ ಪ್ರಧಾನಿ ಮೋದಿಯವರನ್ನು ವ್ಯಂಗ್ಯಮಾಡುವಂತೆ ಎಡಿಟ್​ ಮಾಡಿದ ಫೋಟೋವನ್ನು ಟ್ವೀಟ್​ ಮಾಡಿದ್ದರು. “ಮೋದಿಯವರು ತಮ್ಮ ಮೇಣದ ಪ್ರತಿಮೆಯ ಹಣೆಯ ಮೇಲೆ ಚೋರ್​(ಕಳ್ಳ) ಎಂದು ಬರೆಯುತ್ತಿರುವಂತೆ ಎಡಿಟ್ ಮಾಡಿದ ಫೋಟೋಕ್ಕೆ, #ChorPMChupHai ಎಂಬ ಹ್ಯಾಶ್​ ಟ್ಯಾಗ್​ ಕೊಟ್ಟು ಟ್ವೀಟ್​ ಮಾಡಿದ್ದರು.

ಲಖನೌ ಮೂಲದ ವಕೀಲ ಮತ್ತು ಸಾಮಾಜಿಕ ಕಾರ್ಯಕರ್ತ ಸೈಯದ್‌ ರಿಜ್ವಾನ್‌ ಅಹ್ಮದ್‌ ಎಂಬುವವರು ಮಂಗಳವಾರ ದೂರು ದಾಖಸಿದ್ದರು. ರಮ್ಯಾ ವಿರುದ್ಧ ಉತ್ತರಪ್ರದೇಶದ ಗೋಮತಿನಗರ ಪೊಲೀಸ್‌ ಠಾಣೆಯಲ್ಲಿ ಸೆಕ್ಷನ್‌ 67 ಮಾಹಿತಿ ತಂತ್ರಜ್ಞಾನ ತಿದ್ದುಪಡಿ ಕಾಯ್ದೆ, 2008 ಮತ್ತು ಸೆಕ್ಷನ್‌ 124ಎ ಅಡಿ ದೂರು ದಾಖಲಿಸಲಾಗಿದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top