fbpx
ಮನೋರಂಜನೆ

ಕಿರಿಕ್ ಹುಡುಗಿಯ ಈ ಹೊಸ ಲುಕ್​ಗೆ ಫಿದಾ ಆದ ನೆಟ್ಟಿಗರು,ಹೊಸ ಲುಕ್​ನ ಫೋಟೋಗಳು ಒಳಗಿದೆ

ಕಿರಿಕ್ ಪಾರ್ಟಿ ಎಂಬ ‘ಕನ್ನಡ’ ಸಿನಿಮಾ ಮೂಲಕವೇ ನೇಮು ಫೇಮು ಗಳಿಸಿಕೊಂಡು ಆನಂತರ ‘ಅಪ್ಪಟ ತೆಲುಗು’ ಹುಡುಗಿಯಂತೆ ಮಿಂಚುತ್ತಿರುವಾಕೆ ರಶ್ಮಿಕಾ ಮಂದಣ್ಣ. ಒಂದೇ ಒಂದು ಚಿತ್ರದ ಮೂಲಕ ನಂಬರ್ ಒನ್ ನಟಿಯರನ್ನೇ ಮೀರಿಸುವಂತೆ ಈಕೆ ಮಿರುಗಿದ ರೀತಿ ನಿಜಕ್ಕೂ ಅಚ್ಚರಿ ಹುಟ್ಟಿಸುವಂತಿದೆ. ಆ ನಂತರದಲ್ಲಿ ಕನ್ನಡದ ದೊಡ್ಡ ದೊಡ್ಡ ಸ್ಟಾರ್’ಗಳ ಸಿನಿಮಾದಲ್ಲಿ ನಟಿಸುವ ಅವಕಾಶವನ್ನು ಗಿಟ್ಟಿಸಿಕೊಂಡಿದ್ದ ಕಿರಿಕ್ ಹುಡುಗಿ ಕನ್ನಡಕ್ಕಿಂತ ತೆಲುಗಿನಲ್ಲೇ ಹೆಚ್ಚು ಬ್ಯುಸಿಯಾಗಿದ್ದಾಳೆ.

ಕಿರಿಕ್ ಪಾರ್ಟಿ ಚಿತ್ರದ ಮೂಲಕ ಏಕಾಏಕಿ ಪಡ್ಡೆ ಹುಡುಗರಿಗೆ ಕಚಗುಳಿ ಇಟ್ಟಾಕೆ ರಶ್ಮಿಕಾ ಮಂದಣ್ಣ. ಆ ನಂತರದಲ್ಲಿ ಪುನೀತ್‌, ಗಣೇಶ್, ದರ್ಶನ್ ರಂತಹ ದೊಡ್ಡ ನಟರ ಜೊತೆಗೂ ನಟಿಸೋ ಅವಕಾಶ ಗಿಟ್ಟಿಸಿಕೊಂಡಿರುವ ರಶ್ಮಿಕಾ ಇದೀಗ ಕನ್ನಡಕ್ಕಿಂತ ತೆಲುಗಿನಲ್ಲೆ ಠಿಕಾಣಿ ಹೂಡಿದ್ದಾಳೆ.ರಶ್ಮಿಕಾ ಮಂದಣ್ಣ ತೆಲುಗಿನಲ್ಲಿ ನಟಿಸಿದ ‘ಗೀತಾ ಗೋವಿಂದಂ’ ಚಿತ್ರ ಬ್ಲಾಕ್‍ಬಸ್ಟರ್ ಹಿಟ್ ಆಗಿದೆ,ಗೀತಾ ಗೋವಿಂದಂ ಸಿನಿಮಾದಲ್ಲಿ ವಿಜಯ್ ಹಾಗೂ ರಶ್ಮಿಕಾ ಜೊತೆಗಿನ ಕಾಂಬಿನೇಷನ್’ಗೆ ತೆಲುಗು ಮಂದಿ ಫಿದಾ ಆಗಿದ್ದಾರೆ,ಈಗಾಗಲೇ ತೆಲುಗಿನಲ್ಲಿ ಈಕೆಯ ಎರಡು ತೆಲುಗು ಚಿತ್ರಗಳಲ್ಲಿ ನಟಿಸಿದ್ದು ಇನ್ನೂ ಮೂರು ತೆಲುಗು ಚಿತ್ರಗಳು ಕೈನಲ್ಲಿವೆ. ಹೀಗಿರುವಾಗ ಮತ್ತೊಂದು ತೆಲುಗು ಚಿತ್ರ ರಶ್ಮಿಕಾ ಪಾಲಾಗಿದೆ.
ಸದ್ಯ ಶ್ರೀರಾಮ್ ಆದಿತ್ಯ ನಿರ್ದೇಶನ ಮಾಡುತ್ತಿರುವ ನಾಗಾರ್ಜುನ ಮತ್ತು ನಾನಿ ನಟಿಸಲಿರೋ ಮಲ್ಟಿ ಸ್ಟಾರರ್ ಚಿತ್ರ ‘ದೇವದಾಸ್’ ನಲ್ಲಿ ಬ್ಯುಸಿಯಾಗಿರುವ ರಶ್ಮಿಕಾ, ವಿಜಯ ದೇವರಕೊಂಡ ಜೊತೆಯಲ್ಲಿ ಮತ್ತೊಂದು ಸಿನಿಮಾ ‘ಡಿಯರ್ ಕಾಮ್ರೇಡ್’ ನಲ್ಲೂ ನಟಿಸುತ್ತಿದ್ದಾರೆ.ಈ ಸಿನಿಮಾದಲ್ಲಿ ರಶ್ಮಿಕಾ ಕ್ರಿಕೆಟರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

 

ಈ ನಡುವೆ ರಶ್ಮಿಕಾ ಬ್ರೇಕ್ ಅಪ್ ನಂತರ ಮತ್ತೆ ಸುದ್ದಿಯಲ್ಲಿರುವುದು ಈ ಕಾರಣಕ್ಕೆ ಗ್ಲಾಮರ್​ ಲುಕ್​ನಲ್ಲಿ,ಮೈ ತುಂಬಾ ಹೊಸ ಸೆಲ್ವಾರ್​ ರೀತಿಯ ಬಟ್ಟೆ ಧರಿಸಿ ಕ್ಯಾಮೆರಾಗೆ ಪೋಸ್​ ಕೊಟ್ಟ ಎಕ್ಸ್​ಕ್ಲ್ಯೂಸೀವ್​ ಫೋಟೋಸ್​ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿವೆ ಆ ಫೋಟೋ ನೋಡಿ ಫುಲ್ ಫಿದಾ ಆಗಿದ್ದರೆ ನೆಟ್ಟಿಗರು ಅದಕ್ಕೆ ರಶ್ಮಿಕಾ ಅವರ ಇನ್ಸ್​ಟ್ರಾಗ್ರಾಂನಲ್ಲಿ ಹಾಕ್ಕೊಂಡಿರುವ ಫೋಟೋಗಳೇ ಸಾಕ್ಷಿ.
ಇತ್ತೀಚೆಗೆ ಕ್ಯಾಶುವಲ್ 3 ಪೀಸ್ ಕಾಸ್ಟ್ಯೂಮ್ ಹಾಕಿ ಡಿಫ್ರೆಂಟ್‌ ಆಗಿರೋ ತಾಜ್‌ಮಹಲ್ ನೆಕ್ಲೇಸ್ ಹಾಕಿ ಆಟಿಟ್ಯೂಡ್ ಲುಕ್‌ನಲ್ಲಿ ಕೊಟ್ಟಿರೋ ಪೋಸ್‌, ಆಲಿವ್ ಪ್ಯಾಂಟ್ಸ್,ಮಸ್ಟರ್ಡ್ ಶರ್ಟ್ ಹಾಕಿ ನಿಂತಿರೋ ಭಂಗಿ ನೋಡಿದ್ರೆ,ಯಾವ ಸ್ಟೈಲಿಶ್ ಐಕಾನ್‌ಗೂ ಕಡಿಮೆಯೇನಿಲ್ಲ ಅನ್ನಿಸುತ್ತೆ.ರಶ್ಮಿಕಾ ರ ಈಗಿನ ಡ್ರೆಸ್ಸಿಂಗ್ ಸ್ಟೈಲ್ ಎಲ್ಲರ ಗಮನ ಸೆಳೆಯುತ್ತಿದೆ , ರಶ್ಮಿಕಾ ಬರ್ತಾ ಬರ್ತಾ ಫ್ಯಾಷನ್‌ಗೆ ಫುಲ್ ಟ್ರೆಂಡಿಂಗ್ ಅಪ್ಟೇಟ್ ಆಗುತ್ತಿರುವುದು 100 % ನಿಜ. ಹಾಗೆ ನೋಡಿದ್ರೆ ರಶ್ಮಿಕಾ 2014 ರಲ್ಲೇ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟು ನಂತ್ರ ಸಿನಿರಂಗಕ್ಕೆ ಕಾಲಿಟ್ಟಿದ್ರು.

 

 

 

ಪ್ರತಿಷ್ಟಿತ ಬ್ಯೂಟಿ ಪ್ರಾಡಕ್ಟ್‌ವೊಂದ್ರ ಬ್ರ್ಯಾಂಡ್ ಅಂಬಾಸಿಡರ್ ಆಗಿ ನಂತ್ರ, ಲಮೋಡ್ ಬೆಂಗಳೂರ್ ಟಾಪ್‌ ಮಾಡೆಲ್‌ ಹಂಟ್‌ ಕಾಂಪಿಟೇಷನ್‌ವೊಂದ್ರಲ್ಲಿ ಟಿವಿಸಿ ಪಟ್ಟ ಗಿಟ್ಟಿಸಿಕೊಂಡಿದ್ರು. ಇಲ್ಲಿ ತೆಗೆಸಿಕೊಂಡ ಫೋಟೋಗಳನ್ನ ನೋಡಿ ಇಂಪ್ರೆಸ್ ಆದ ಕಿರಿಕ್ ಪಾರ್ಟಿ ಚಿತ್ರತಂಡ ಕಿರಿಕ್ ಪಾರ್ಟಿ ಸಿನಿಮಾದ ಸಾನ್ವಿ ಪಾತ್ರಕ್ಕೆ ಆಫರ್ ನೀಡಿತ್ತು.ರಶ್ಮಿಕಾ ಸಿನಿಮಾಗಳನ್ನೂ ಹಾಗೂ ಈಗಿನ ಅವರ ಬೆಳವಣಿಗೆ ನೋಡಿದ್ರೆ ಅವ್ರು ಮಿಂಚೋದು ಖಂಡಿತಾ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top