ಕಿರಿಕ್ ಪಾರ್ಟಿ ಎಂಬ ‘ಕನ್ನಡ’ ಸಿನಿಮಾ ಮೂಲಕವೇ ನೇಮು ಫೇಮು ಗಳಿಸಿಕೊಂಡು ಆನಂತರ ‘ಅಪ್ಪಟ ತೆಲುಗು’ ಹುಡುಗಿಯಂತೆ ಮಿಂಚುತ್ತಿರುವಾಕೆ ರಶ್ಮಿಕಾ ಮಂದಣ್ಣ. ಒಂದೇ ಒಂದು ಚಿತ್ರದ ಮೂಲಕ ನಂಬರ್ ಒನ್ ನಟಿಯರನ್ನೇ ಮೀರಿಸುವಂತೆ ಈಕೆ ಮಿರುಗಿದ ರೀತಿ ನಿಜಕ್ಕೂ ಅಚ್ಚರಿ ಹುಟ್ಟಿಸುವಂತಿದೆ. ಆ ನಂತರದಲ್ಲಿ ಕನ್ನಡದ ದೊಡ್ಡ ದೊಡ್ಡ ಸ್ಟಾರ್’ಗಳ ಸಿನಿಮಾದಲ್ಲಿ ನಟಿಸುವ ಅವಕಾಶವನ್ನು ಗಿಟ್ಟಿಸಿಕೊಂಡಿದ್ದ ಕಿರಿಕ್ ಹುಡುಗಿ ಕನ್ನಡಕ್ಕಿಂತ ತೆಲುಗಿನಲ್ಲೇ ಹೆಚ್ಚು ಬ್ಯುಸಿಯಾಗಿದ್ದಾಳೆ.
ಕಿರಿಕ್ ಪಾರ್ಟಿ ಚಿತ್ರದ ಮೂಲಕ ಏಕಾಏಕಿ ಪಡ್ಡೆ ಹುಡುಗರಿಗೆ ಕಚಗುಳಿ ಇಟ್ಟಾಕೆ ರಶ್ಮಿಕಾ ಮಂದಣ್ಣ. ಆ ನಂತರದಲ್ಲಿ ಪುನೀತ್, ಗಣೇಶ್, ದರ್ಶನ್ ರಂತಹ ದೊಡ್ಡ ನಟರ ಜೊತೆಗೂ ನಟಿಸೋ ಅವಕಾಶ ಗಿಟ್ಟಿಸಿಕೊಂಡಿರುವ ರಶ್ಮಿಕಾ ಇದೀಗ ಕನ್ನಡಕ್ಕಿಂತ ತೆಲುಗಿನಲ್ಲೆ ಠಿಕಾಣಿ ಹೂಡಿದ್ದಾಳೆ.ರಶ್ಮಿಕಾ ಮಂದಣ್ಣ ತೆಲುಗಿನಲ್ಲಿ ನಟಿಸಿದ ‘ಗೀತಾ ಗೋವಿಂದಂ’ ಚಿತ್ರ ಬ್ಲಾಕ್ಬಸ್ಟರ್ ಹಿಟ್ ಆಗಿದೆ,ಗೀತಾ ಗೋವಿಂದಂ ಸಿನಿಮಾದಲ್ಲಿ ವಿಜಯ್ ಹಾಗೂ ರಶ್ಮಿಕಾ ಜೊತೆಗಿನ ಕಾಂಬಿನೇಷನ್’ಗೆ ತೆಲುಗು ಮಂದಿ ಫಿದಾ ಆಗಿದ್ದಾರೆ,ಈಗಾಗಲೇ ತೆಲುಗಿನಲ್ಲಿ ಈಕೆಯ ಎರಡು ತೆಲುಗು ಚಿತ್ರಗಳಲ್ಲಿ ನಟಿಸಿದ್ದು ಇನ್ನೂ ಮೂರು ತೆಲುಗು ಚಿತ್ರಗಳು ಕೈನಲ್ಲಿವೆ. ಹೀಗಿರುವಾಗ ಮತ್ತೊಂದು ತೆಲುಗು ಚಿತ್ರ ರಶ್ಮಿಕಾ ಪಾಲಾಗಿದೆ.
ಸದ್ಯ ಶ್ರೀರಾಮ್ ಆದಿತ್ಯ ನಿರ್ದೇಶನ ಮಾಡುತ್ತಿರುವ ನಾಗಾರ್ಜುನ ಮತ್ತು ನಾನಿ ನಟಿಸಲಿರೋ ಮಲ್ಟಿ ಸ್ಟಾರರ್ ಚಿತ್ರ ‘ದೇವದಾಸ್’ ನಲ್ಲಿ ಬ್ಯುಸಿಯಾಗಿರುವ ರಶ್ಮಿಕಾ, ವಿಜಯ ದೇವರಕೊಂಡ ಜೊತೆಯಲ್ಲಿ ಮತ್ತೊಂದು ಸಿನಿಮಾ ‘ಡಿಯರ್ ಕಾಮ್ರೇಡ್’ ನಲ್ಲೂ ನಟಿಸುತ್ತಿದ್ದಾರೆ.ಈ ಸಿನಿಮಾದಲ್ಲಿ ರಶ್ಮಿಕಾ ಕ್ರಿಕೆಟರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಈ ನಡುವೆ ರಶ್ಮಿಕಾ ಬ್ರೇಕ್ ಅಪ್ ನಂತರ ಮತ್ತೆ ಸುದ್ದಿಯಲ್ಲಿರುವುದು ಈ ಕಾರಣಕ್ಕೆ ಗ್ಲಾಮರ್ ಲುಕ್ನಲ್ಲಿ,ಮೈ ತುಂಬಾ ಹೊಸ ಸೆಲ್ವಾರ್ ರೀತಿಯ ಬಟ್ಟೆ ಧರಿಸಿ ಕ್ಯಾಮೆರಾಗೆ ಪೋಸ್ ಕೊಟ್ಟ ಎಕ್ಸ್ಕ್ಲ್ಯೂಸೀವ್ ಫೋಟೋಸ್ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ ಆ ಫೋಟೋ ನೋಡಿ ಫುಲ್ ಫಿದಾ ಆಗಿದ್ದರೆ ನೆಟ್ಟಿಗರು.
ಪ್ರತಿಷ್ಟಿತ ಬ್ಯೂಟಿ ಪ್ರಾಡಕ್ಟ್ವೊಂದ್ರ ಬ್ರ್ಯಾಂಡ್ ಅಂಬಾಸಿಡರ್ ಆಗಿ ನಂತ್ರ, ಲಮೋಡ್ ಬೆಂಗಳೂರ್ ಟಾಪ್ ಮಾಡೆಲ್ ಹಂಟ್ ಕಾಂಪಿಟೇಷನ್ವೊಂದ್ರಲ್ಲಿ ಟಿವಿಸಿ ಪಟ್ಟ ಗಿಟ್ಟಿಸಿಕೊಂಡಿದ್ರು. ಇಲ್ಲಿ ತೆಗೆಸಿಕೊಂಡ ಫೋಟೋಗಳನ್ನ ನೋಡಿ ಇಂಪ್ರೆಸ್ ಆದ ಕಿರಿಕ್ ಪಾರ್ಟಿ ಚಿತ್ರತಂಡ ಕಿರಿಕ್ ಪಾರ್ಟಿ ಸಿನಿಮಾದ ಸಾನ್ವಿ ಪಾತ್ರಕ್ಕೆ ಆಫರ್ ನೀಡಿತ್ತು.ರಶ್ಮಿಕಾ ಇಲ್ಲಿಯವರಿಗೆ ಮಾಡಿರೋ ಸಿನಿಮಾಗಳು ಕಡಿಮೆ ಆದ್ರೂ ಅವರಿಗೆ ಇರೋ ಫೇಮ್ ಅಂಡ್ ಫ್ಯಾನ್ ಕ್ರೇಜ್ ಸಿಕ್ಕಾಪಟ್ಟೆ.
ತೆಲುಗಿನ ಗೀತಾ ಗೋವಿಂದಂ ಚಿತ್ರದ ನಂತರ ರಶ್ಮಿಕಾ ಮಾರ್ಕೆಟ್ ಇದ್ದಕ್ಕಿದ್ದ ಹಾಗೇ ದುಪ್ಪಟ್ಟಾಗಿದೆ. ಒಂದು ಸಿನಿಮಾಗೆ 20 ರಿಂದ 25 ಲಕ್ಷ ಸಂಭಾವನೆ ಪಡೆಯುತ್ತಿದ್ದ ರಶ್ಮಿಕಾ 50 ಲಕ್ಷಕ್ಕೆ ಏರಿಸಿದ್ದಾರೆ,ರಶ್ಮಿಕಾಗೆ ಈಗ ಇರೋ ಡಿಮ್ಯಾಂಡ್ ಎಷ್ಟು ಗೊತ್ತಾ ನಿರ್ಮಾಪಕರು ರಶ್ಮಿಕಾ ಕಾಲ್ ಶೀಟ್ಗಾಗಿ ತಿಂಗಳಾರು ಗಟ್ಟಲೆ ಕಾಯಲು ರೆಡಿ ಇದ್ದಾರೆ .
ಈಗಿರೋವಾಗ ರಶ್ಮಿಕಾ 10 ನಿಮಿಷ ಡಾನ್ಸ್ ಮಾಡೋದಕ್ಕೆ ಡಿಮ್ಯಾಂಡ್ ಮಾಡೋ ಸಂಭಾವನೆ ಎಷ್ಟು ಗೊತ್ತಾ ,ಗೊತಾದ್ರೆ ಖಂಡಿತಾ ನಿಮ್ಮ ತಲೆ ತಿರುಗುತ್ತೆ ,ಒಂದು ನಿಮಿಷ ಸ್ಟೆಪ್ಪು ಹಾಕಲು ರಶ್ಮಿಕಾ ತೆಗೆದುಕೊಳ್ಳುವ ಹಣ ಸಾವಿರ ಅಲ್ಲ ಲಕ್ಷದಲ್ಲಿದೆ.10 ನಿಮಿಷ ಡ್ಯಾನ್ಸ್ ಮಾಡೋಕೆ 10 ಲಕ್ಷ ಕೇಳ್ತಾರಂತೆ ರಶ್ಮಿಕಾ ಅಂದಹಾಗೇ ಖಾಸಗೀ ರೇಡಿಯೋ ವಾಹಿನಿಯೊಂದು ಏರ್ಪಡಿಸೋ ಕಾರ್ಯಕ್ರಮದಲ್ಲಿ ಕೇವಲ 10 ನಿಮಿಷ ಡ್ಯಾನ್ಸ್ ಮಾಡಲು ರಶ್ಮಿಕಾ ತೆಗೆದುಕೊಂಡಿರೋ ಸಂಭಾವನೆ ಬರೋಬ್ಬರಿ 10 ಲಕ್ಷ ಅಂತೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
