ಸಮಾಚಾರ

ಲವ್ ನಲ್ಲಿ ಬಿದ್ದು ಹಸೆಮಣೆ ಏರಲು ಸಜ್ಜಾದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಅಂದ್ಹಾಗೆ ಹುಡುಗ ಯಾರ್ ಗೊತ್ತಾ

ಅಂತಾರಾಷ್ಟ್ರೀಯ ಮಟ್ಟದ ಬ್ಯಾಡ್ಮಿಂಟನ್ ಸ್ಪರ್ಧೆಗಳಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಸೈನಾ ನೆಹ್ವಾಲ್ ಮತ್ತು ಪರುಪಳ್ಳಿ ಕಶ್ಯಪ್ ಮದುವೆಯಾಗಬೇಕು ಎನ್ನುವ ಬೇಡಿಕೆ ಆಗಾಗ್ಗೆ ಅಭಿಮಾನಿಗಳಿಂದ ಬರುತ್ತಿತ್ತು , ಬರ್ತ್ ಡೇ ಪಾರ್ಟಿ ಹೀಗೆ ಒಟ್ಟೊಟ್ಟಿಗೆ ಸುತ್ತಾಡುತ್ತಿದ್ದ ಈ ಜೋಡಿ ದೇಶದ ಪ್ರಖ್ಯಾತ ಬ್ಯಾಡ್ಮಿಂಟನ್ ಮಿಶ್ರ ಜೋಡಿ .

 

 

ಸೈನಾ (28) ಮತ್ತು ಪರುಪಳ್ಳಿ ಕಶ್ಯಪ್ (32) ಒಟ್ಟಿಗೆ ಒಂದೇ ಅಕಾಡೆಮಿಯಲ್ಲಿ ತರಬೇತಿ ಪಡೆದವರು ಆಟ ಆಡುತ್ತಾ ಆಡುತ್ತ ಈಗ ಜೀವನದ ಹಾವು ಏಣಿ ಆಟಕ್ಕೆ ಸಜ್ಜಾಗಿದ್ದಾರೆ , ಕಳೆದೆರಡು ವರ್ಷಗಳಿಂದ ಲವ್ ನಲ್ಲಿ ಬಿದ್ದಿದ್ದ ಈ ಜೋಡಿ ಈಗ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

ಪರುಪಳ್ಳಿ ಕಶ್ಯಪ್(ಪಿ. ಕಶ್ಯಪ್) ಇವರು ಹೈದರಾಬಾದ್ ಮೂಲದ ಭಾರತದ ಬ್ಯಾಡ್ಮಿಂಟನ್ ಆಟಗಾರ, ಇವರು ಗೋಪಿಚಂದ್ ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ತರಬೇತಿ ಪಡೆದ ಆಟಗಾರ.

ಡಿಸೆಂಬರ್ ಎರಡನೇ ವಾರ ಮದುವೆ ನಿಶ್ಚಯವಾಗಿರುವ ಸಾಧ್ಯತೆ ಹೆಚ್ಚಾಗಿದ್ದು ಕೇವಲ ಪ್ರಮುಖ ಗಣ್ಯರು,ಬಂಧುಗಳು ಹಾಗು ಸ್ನೇಹಿತರಿಗೆ ಮಾತ್ರ ಆಹ್ವಾನ ನೀಡಲಾಗಿದೆಯಂತೆ ,ರಿಸೆಪ್ಶನ್ ಡಿಸೆಂಬರ್ ಮೂರನೇ ವಾರ ನಡೆಯುವುದು ಎನ್ನುತ್ತಿವೆ ಮೂಲಗಳು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top