ಮನೋರಂಜನೆ

ದುನಿಯಾ ವಿಜಯ್ ಪ್ರಕರಣ:ಗಂಡನನ್ನು ನೋಡಲು ಜೈಲ್ಗೆ ಹೋದ ಮೊದಲ ಪತ್ನಿ ನಾಗರತ್ನಗೆ ಈ ರೀತಿ ಚೀಟಿ ಬರೆದು ಕಳುಯಿಸಿದ ವಿಜಿ

ಜಿಮ್ ಟ್ರೈನರ್ ಮಾರುತಿ ಗೌಡ ಎಂಬುವವರ ಮೇಲೆ ಹಲ್ಲೆ ಮತ್ತೆ ಕಿಡ್ನಾಪ್ ಪ್ರಕರಣಕ್ಕೆ ಸಂಭಂದಿಸಿದಂತೆ ಬಂಧಿತರಾಗಿರುವ ದುನಿಯಾ ವಿಜಯ್ ರವರನ್ನು ನೋಡಲು ಹೋದ ವಿಜಿಯವರ ಮೊದಲ ಪತ್ನಿ ನಾಗರತ್ನ ರವರನ್ನು ನೋಡಲು ನಿರಾಕರಿಸಿದ ವಿಜಯ್ .ವಿಜಯ್ ಜೈಲ್ಗೆ ಹೋದ ಮೇಲೆ ಮೊದಲ ಸಲ ನಾಗರತ್ನ ಪತಿಯನ್ನು ನೋಡಲು ಜೈಲಿಗೆ ಹೋಗಿದ್ದರು ಆದ್ರೆ ನಾಗರತ್ನ ರವರಿಗೆ ವಿಜಯ್ ಭೇಟಿಗೆ ಜೈಲು ಅಧಿಕಾರಿಗಳು ಅವಕಾಶ ನೀಡಿರಲಿಲ್ಲ ಕೊನೆಗೆ ನಾಗರತ್ನ ತುಂಬಾ ಪ್ರಯತ್ನ ಮಾಡಿ ಅಧಿಕಾರಿಗಳ ಮನವೊಲಿಸಿದ ನಾಗರತ್ನ ವಿಜಯ್​​​​ರನ್ನು ಭೇಟಿ ಮಾಡಲು ಅನುಮತಿ ಪಡೆದು ಸರದಿ ಸಾಲಿನಲ್ಲಿ ನಿಂತು ಒಂದು ಗಂಟೆಗೂ ಹೆಚ್ಚು ಕಾಲ ಕುಳಿತು ಕಾದಿದ್ದಾರೆ.

 

 

 

ಇಷ್ಟು ಕಾದ ಮೇಲೆ ವಿಜಯ್ ರವರಿಂದ ಸಿಕ್ಕ ಪ್ರತಿಕ್ರಿಯೆ ನಾಗರತ್ನ ರನ್ನು ಭೇಟಿ ಮಾಡಲು ನನಗೆ ಇಷ್ಟವಿಲ್ಲಾ ಎಂದು ,ನಾಗರತ್ನ ಅವರನ್ನು ಭೇಟಿ ಮಾಡಲು ನಿರಾಕರಿಸಿದ್ದಾರೆ ವಿಜಯ್ ಪ್ರವೇಶ ಚೀಟಿಯಲ್ಲಿ ನಾಗರತ್ನ ಅವರನ್ನು ಭೇಟಿಯಾಗಲು ಆಸಕ್ತಿಯಿಲ್ಲ ಎಂದು ಬರೆದು ಕಳುಹಿಸಿದ್ದಾರೆ ಎನ್ನಲಾಗಿದೆ. ಇಂದು ಮಧ್ಯಾಹ್ನ ನಗರದ 8 ನೇ ಎಸಿಎಂಎಂ ನ್ಯಾಯಾಲಯದಲ್ಲಿ ಜಾಮೀನು ತೀರ್ಪು ಹೊರ ಬೀಳಲಿದೆ.

ಏನಿದು ಘಟನೆ?
“ವಸಂತನಗರದ ಅಂಬೇಡ್ಕರ್ ಭವನದಲ್ಲಿ ಶನಿವಾರ ಮಿ.ಬೆಂಗಳೂರು ದೇಹದಾರ್ಢ್ಯ ಸ್ಪರ್ಧೆ ಏರಪಟ್ಟಿತ್ತು. ಈ ಸ್ಪರ್ಧೆಯನ್ನು ನೋಡಲು ದುನಿಯಾ ವಿಜಿ ತಮ್ಮ ಸಹಚರರೊಂದಿಗೆ ಬಂದಿದ್ದರು. ಈ ವೇಳೆ ಪಾನಿಪೂರಿ ಕಿಟ್ಟಿ ಅಣ್ಣನ ಮಗ ಮಾರುತಿಗೌಡ ಮತ್ತು ದುನಿಯಾ ವಿಜಿ ನಡುವೆ ಮಾತಿನ ಚಕಮಕಿ ನಡೆದಿದ್ದು ಮಾತು ವಿಕೋಪಕ್ಕೆ ತಿರುಗಿ ಹೊಡೆದಾಟ ನಡೆದಿದೆ. ದುನಿಯಾ ವಿಜಯ್ ಮತ್ತು ಅವರ ಸಹಚರರು ಮಾರುತಿಗೌಡನನ್ನು ಕಾರಿನಲ್ಲಿ ಕಿಡ್ನಾಪ್ ಮಾಡಿ ಮೇಲೆ ಹಲ್ಲೆ ನಡೆಸಿದ್ದಾರೆ.” ಎಂದು ಹೇಳಲಾಗಿದೆ.. ಈ ಬಗ್ಗೆ ದುನಿಯಾ ವಿಜಯ್ ವಿರುದ್ಧ ಐಪಿಸಿ ಸೆಕ್ಷನ್ 365, 342, 325, 506ರ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಹೈಗ್ರೌಂಡ್ ಪೊಲೀಸರು ದುನಿಯ್ ವಿಜಯ್ ನನ್ನ ಬಂಧಿಸಿದ್ದರು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top