ಮನೋರಂಜನೆ

ಬಹು ನೀರಿಕ್ಷಿತ ಅಂಬಿ ನಿಂಗ್ ವಯುಸ್ಸಾಯ್ತೋ ಇಂದು ರಾಜ್ಯಾದ್ಯಂತ ರಿಲೀಸ್.

ರೆಬೆಲ್ ಸ್ಟಾರ್ ಅಂಬರೀಶ್ ಮತ್ತು ಕಿಚ್ಚ ಸುದೀಪ್ ಮುಖ್ಯಭೂಮಿಕೆಯಲ್ಲಿರುವ ಕಾರಣಕ್ಕೆ ಆರಂಭಕ್ಕೂ ಮುಂಚೆಯೇ ಸಾಕಷ್ಟು ಹೆಸರು ಮಾಡಿದ್ದ ಚಿತ್ರ `ಅಂಬಿ ನಿಂಗ್ ವಯಸ್ಸಾಯ್ತೋ’. ಬಹು ವರ್ಷಗಳ ನಂತರ ರೆಬೆಲ್ ಸ್ಟಾರ್ ಅಂಬರೀಷ್ ಅವರು ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿರುವುದರಿಂದ ಚಿತ್ರ ಅಂತೂ ತೆರೆಕಾಣುತಿದ್ದು ಇಂದು ರಾಜ್ಯಾದ್ಯಂತ 250ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ರಿಲೀಸ್ ಆಗುತ್ತಿದೆ.

ಈಗಾಗಲೇ ಎಲ್ಲಾ ಕಡೆ ಒಳ್ಳೆ ರೆಸ್ಪಾನ್ಸ್ ಪಡೆದುಕೊಳ್ಳುತ್ತಿರುವ ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರದ ಟೀಸರ್, ಹಾಡುಗಳನ್ನ ನೋಡಿ ಎಂಜಾಯ್ ಮಾಡಿರೋರಿಗೆ ಇದು ಒಂದು ಅದ್ಭುತ ಚಿತ್ರ ಎನ್ನುವುದರಲ್ಲಿ ಅನುಮಾನವಿಲ್ಲ.

 

 

ಅಂದಹಾಗೆ ಕಿಚ್ಚ ಕ್ರಿಯೇಶನ್ಸ್ ಅರ್ಪಿಸಿ, ಕೆ.ಎಸ್.ಕೆ. ಶೋ ರೀಲ್ ಪ್ರೊಡಕ್ಷನ್ ಅಡಿಯಲ್ಲಿ ತಯಾರಾಗುತ್ತಿರುವ `ಅಂಬಿ ನಿಂಗ್ ವಯಸ್ಸಾಯ್ತೋ’ ಚಿತ್ರವನ್ನು ಕಿಚ್ಚನ ಶಿಷ್ಯ ಗುರುದತ್ ಗಾಣಿಗ ಎಂಬ 26ರ ಪೋರ ನಿರ್ದೇಶಿಸಿದ್ದಾನೆ. ಈ ಚಿತ್ರವನ್ನು ಕಿಚ್ಚ ಸುದೀಪ್ ಮತ್ತು ಮಂಜುನಾಥ್ ಗೌಡ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ಬರುವ ಅಂಬಿಯವರ ಪ್ಲಾಶ್ ಬ್ಯಾಕ್ ಸನ್ನಿವೇಶದಲ್ಲಿ ಸುದೀಪ್ ಗೆ ಜೋಡಿಯಾಗಿ ಅಂದ್ರೆ ಸುಹಾಸಿನಿಯವರ ಯವ್ವನದ ಪಾತ್ರದಲ್ಲಿ ಶ್ರುತಿ ಹರಿಹರನ್ ನಟಿಸುತ್ತಿದ್ದಾರೆ. ಈ ಚಿತ್ರ ತಮಿಳಿನಲ್ಲಿ ಸೂಪರ್ ಹಿಟ್ಟಾಗಿದ್ದ ಪವರ್ ಪಾಂಡಿ ಚಿತ್ರದ ರೀಮೇಕ್. ಆದರೆ ಒಟ್ಟಾರೆ ಕಥೆ ಮತ್ತು ಸನ್ನಿವೇಷಗಳನ್ನು ಇಲ್ಲಿನ ನೇಟಿವಿಟಿಗೆ ಒಗ್ಗಿಸಿಕೊಂಡು ಗುರುದತ್ ದೃಷ್ಯ ಕಟ್ಟಿದ್ದಾರಂತೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top