ಮನೋರಂಜನೆ

ದರ್ಶನ್ ಅಭಿಮಾನಿಗಳಿಗೆ ಮತ್ತೊಂದು ಶಾಕಿಂಗ್ ಸಮಾಚಾರ.

ಕಾರು ಅಪಘಾತದಲ್ಲಿ ಕೈ ಮೂಳೆ ಮುರಿದುಕೊಂಡಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ಯ​ ಮೈಸೂರಿನ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದು ತಿಳಿದಿರುವ ವಿಷಯವೆ. ಸದ್ಯ ದಚ್ಚು ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು ಅವರನ್ನು ಸ್ಪೆಷಲ್ ವಾರ್ಡ್ ಗೆ ಶಿಫ್ಟ್ ಮಾಡಲಾಗಿದೆ. ನಿನ್ನೆ ಐಸಿಯುನಲ್ಲಿದ್ದ ದರ್ಶನ್ ಇಂದು ಸ್ಪೆಷಲ್ ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಕೈಗೆ ಶಸ್ತ್ರ ಚಿಕಿತ್ಸೆ ಮಾಡಿ ಪ್ಲೇಟ್ ಹಾಕಲಾಗಿದೆ.

ಕೈಗೆ ಹಾಕಲಾಗಿರುವ ಪ್ಲೇಟ್ ತೆಗೆಯಲು ಎರಡು ವರ್ಷ ಬೇಕಾಗಬಹುದು. ಆದರೆ ಅಲ್ಲಿವರೆಗೂ ದರ್ಶನ್ ಭಾರ ಎತ್ತುವಂತಿಲ್ಲ. ಅಲ್ಲದೇ ಒಂದು ವರ್ಷ ಜಿಮ್ ಮಾಡುವಂತಿಲ್ಲ ಮತ್ತು ಭಾರ ಎತ್ತುವಂತಿಲ್ಲ,, ಬಲಗೈಗೆ ಹೆಚ್ಚು ಕೆಲಸ ನೀಡುವಂತಿಲ್ಲ, ಹಾಗೆಯೆ ಜಿಮ್ ಮಾಡುವಂತಿಲ್ಲವಾದ್ದರಿಂದ ಕಟ್ಟುಮಸ್ತಾದ ದೇಹವನ್ನು ಉಳಿಸಿಕೊಳ್ಳುವುದು ಕೂಡ ಕಶ್ಟವಾಗಲಿದೆ. ಎಂದು ಆಸ್ಪತ್ರೆಯ ತಜ್ಞ ವೈದ್ಯರು ಮಾಹಿತಿ ನೀಡಿದ್ದಾರೆ..

 

 

ಇನ್ನು ಸಾಹಸ ದೃಶ್ಯಗಳಲ್ಲಿ ಅಭಿನಯಿಸುವುದು ಕೂಡ ಅಪಾಯ ಎಂದು ವೈದ್ಯರು ಹೇಳಿದ್ದಾರೆ.. ಇದು ದರ್ಶನ್ ಅಭಿಮಾನಿಗಳಿಗೆ ಬೇಸರದ ಸುದ್ದಿಯಾಗಿದೆ, ಯಾಕೆಂದರೆ ಮಾಸ್, ಫೈಟ್ಸ್ ಆಧಾರಿತ ಸಿನಿಮಾಗಳಿಗೆ ಹೆಚ್ಚು ಹೆಸರುವಾಗಿರುವ ದರ್ಶನ್ ಇನ್ನು ಕನಿಷ್ಠ ವರ್ಷವಾದರೂ ಸಾಹಸಮಯ ದೃಶ್ಯಗಳಿಂದ ದೂರ ಉಳಿಯಬೇಕಾಗಿದೆ.

ದರ್ಶನ್ ಕೈಮೂಳೆ ಮುರಿದಿರುವುದರಿಂದ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಬಂದ ಮೇಲೆಯೂ ಹೆಚ್ಚು ವಿಶ್ರಾಂತಿಯ ಅಗತ್ಯ ಇದೆ. ಕನಿಷ್ಠ ಅಂದರೂ ಮೂರು ವಾರಗಳ ಕಾಲ ಅವರು ಬೆಡ್ ರೆಸ್ಟ್ ಮಾಡಬೇಕಿದೆ.. ಈ ವೇಳೆ ಅವರು ಯಾವುದೇ ಸಿನಿಮಾ ಕೆಲಸಗಳಲ್ಲಿ ತೊಡಗುವಂತಿಲ್ಲ, ಯಾವುದೇ ಬಾರವಾದ ವಸ್ತುಗಳನ್ನ ಎತ್ತುವಂತಿಲ್ಲ ಎಂದು ವೈದ್ಯರು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಇದರಿಂದಾಗಿ ಸದ್ಯ ದರ್ಶನ್​ ಅಭಿನಯಿಸುತ್ತಿರುವ ‘ಯಜಮಾನ’ ಹಾಗೂ ‘ಒಡೆಯ’ ಸಿನಿಮಾಗಳು ಚಿತ್ರೀಕರಣಕ್ಕೆ ಬ್ರೇಕ್​ ಬೀಳುವ ಸಾಧ್ಯತೆಯೇ ಹೆಚ್ಚಿದೆ. ಅಲ್ಲದೇ ಅವರ ಕಟ್ಟುಮಸ್ತಾದ ದೇಹವೂ ಕೂಡ ಕೊಂಚ ಕರಗುವ ಸಾಧ್ಯತೆಗಳಿವೆ..

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top