ಮನೋರಂಜನೆ

ಕಿಚ್ಚನಿಗೆ ಕೃತಜ್ಞತೆ ಸಲ್ಲಿಸಿದ ದರ್ಶನ್ ಅಭಿಮಾನಿಗಳು- ಮತ್ತೆ ಒಂದಾಗ್ತಾರಾ ಕುಚುಕು ಗೆಳೆಯರು.

ಕನ್ನಡ ಚಿತ್ರರಂಗದಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಮತ್ತು ಅಂಬರೀಶ್ ಅವರಂತೆಯೇ ಕುಚಿಕ್ಕೂ ಗಳೆಯರಾಗಿ ಪ್ರಸಿದ್ಧರಾಗಿದ್ದವರು ದರ್ಶನ್ ಮತ್ತು ಸುದೀಪ್. ಆದರೆ ವಯಕ್ತಿಕ ಕಾರಣಗಳಿಂದ ಸ್ನೇಹದಲ್ಲಿ ಮನಸ್ತಾಪ ಉಂಟಾಗಿ ವರ್ಷಾಂತರಗಳಿಂದ ಇಬ್ಬರೂ ದೂರಾಗಿದ್ದರು.. ಹೀಗಿದ್ದರೂ ಆಗ್ಗಾಗ್ಗೆ ದರ್ಶನ್ ಕುರಿತು ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದ ಸುದೀಪ್ ಇದೀಗ ಮತ್ತೊಮ್ಮೆ ದರ್ಶನ್ ಅಭಿಮಾನಿಗಳ ಮನಗೆದ್ದಿದ್ದಾರೆ.

ಕಾರು ಅಪಘಾತದಿಂದ ಚಾಲೆಂಜಿಂಗ್ ಸ್ಟಾರ್​ ದರ್ಶನ್ ಆಸ್ಪತ್ರೆ ಸೇರಿದ್ದರು. ಅಪಘಾತದ ಸುದ್ದಿ ತಿಳಿದ ಕಿಚ್ಚ ಸುದೀಪ್ ಅವರು ಗೆಳೆಯ ದರ್ಶನ್ ಆರೋಗ್ಯದ ಬಗ್ಗೆ ವಿಚಾರಿಸಿ ಟ್ವೀಟ್ ಮಾಡಿದ್ದರು. “ನೀನು ಆರೋಗ್ಯವಾಗಿರೋ ಸುದ್ದಿ ಕೇಳಿ ಸಂತೋಷವಾಗಿದೆ. ಆದಷ್ಟು ಬೇಗ ಹುಷಾರಾಗು ಗೆಳೆಯ” ಎಂದು ಹೇಳಿದ್ದರು..

 

 

ಈ ಟ್ವೀಟ್’ಗೆ ಇದೀಗ ದರ್ಶನ್ ಅನೇಕ ಅಭಿಮಾನಿಗಳು ಕೂಡ ದನ್ಯವಾದಗಳನ್ನ ಅರ್ಪಿಸುತ್ತಿದ್ದಾರೆ.. ದರ್ಶನ್ ಅವರ ಅಧಿಕೃತ ಅಭಿಮಾನಿಗಳ ಸಂಘಟನೆಗಳ್ಳಿ ಒಂದಾದ ‘ಡಿ ಕಂಪನಿ’ ಕೂಡ ಸುದೀಪ್ ಅವರಿಗೆ ಧನ್ಯವಾದಗಳನ್ನ ತಿಳಿಸಿದೆ. “ಡಿ ಬಾಸ್ ರವರು ಗುಣಮುಖರಾಗಲಿ ಎಂದು ಹಾರೈಸಿದ ನಿಮಗೆ ಧನ್ಯವಾದಗಳು” ಎಂದು ಕಿಚ್ಚನ ಟ್ವೀಟ್ ಗೆ ರಿಪ್ಲೇ ಮಾಡಿದ್ದಾರೆ.. ಡಿ ಕಂಪನಿ ಮಾಡಿರುವ ಈ ಟ್ವೀಟ್ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು ದರ್ಶನ್ ಅಭಿಮಾನಿಗಳ ನಡೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ದರ್ಶನ್ ಮತ್ತು ಸುದೀಪ್ ಮತ್ತೆ ಒಂದಾಗುತ್ತಾರಾ ಎಂಬ ಕುತೂಹಲ ಕೂಡ ಗರಿಗೆದರಿದೆ..

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top