ಮನೋರಂಜನೆ

ಗಾಯಗೊಂಡಿರೋ ಅಣ್ಣ ದರ್ಶನ್ ರನ್ನು ನೋಡಲು ಬರಲೇ ಇಲ್ಲ ತಮ್ಮ ದಿನಕರ್- ಕಾರಣವೇನು ಗೊತ್ತಾ?

ಕಾರು ಅಪಘಾತದಲ್ಲಿ ಕೈ ಮೂಳೆ ಮುರಿದುಕೊಂಡಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ಯ​ ಮೈಸೂರಿನ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದು ತಿಳಿದಿರುವ ವಿಷಯವೆ. ಸದ್ಯ ದಚ್ಚು ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು ಅವರನ್ನು ಸ್ಪೆಷಲ್ ವಾರ್ಡ್ ಗೆ ಶಿಫ್ಟ್ ಮಾಡಲಾಗಿದೆ. ನಿನ್ನೆ ಐಸಿಯುನಲ್ಲಿದ್ದ ದರ್ಶನ್ ಇಂದು ಸ್ಪೆಷಲ್ ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಕೈಗೆ ಶಸ್ತ್ರ ಚಿಕಿತ್ಸೆ ಮಾಡಿ ಪ್ಲೇಟ್ ಹಾಕಲಾಗಿದೆ.

 

 

ದರ್ಶನ್ ಅವರನ್ನು ಕನ್ನಡ ಚಿತ್ರರಂಗದ ಹಲವು ತಾರೆಯರು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಶಿವರಾಜಕುಮಾರ್, ಪ್ರೇಮ್, ಸೃಜನ್, ಚಿರು ಸರ್ಜಾ ಸೇರಿದಂತೆ ಅನೇಕರು ದರ್ಶನ್ ಅವರನ್ನು ನೋಡಿಕೊಂಡು ಬಂದಿದ್ದಾರೆ. ಅಷ್ಟೇ ಅಲ್ಲದೇ ಸಾವಿರಾರು ಅಭಿಮಾನಿಗಳು ದರ್ಶನ್ ಅವರನ್ನು ನೋಡಲು ಆಸ್ಪತ್ರೆಗೆ ಬಂದಿದ್ದರು. ಆದರೆ, ದರ್ಶನ್ ಸಹೋದರ ದಿನಕರ್ ಅವರು ಮಾತ್ರ ಸಹೋದರನ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಹೋಗಲೇ ಇಲ್ಲ. ಇದಕ್ಕೆ ಕೆಲವರು ನಾನಾ ಅರ್ಥಗಳನ್ನು ಕಲ್ಪಿಸಿಕೊಂಡಿದ್ದರೂ ದಿನಕರ್ ದರ್ಶನ್ ಅವರನ್ನು ಭೇಟಿಯಾಗದಿದ್ದಕ್ಕೆ ಬೇರೆಯೇ ಕಾರಣವಿದೇ. ಅದು ಏನು ಅಂತೀರಾ? ಮುಂದೆ ಓದಿ

ದರ್ಶನ್ ನೋಡಲು ದಿನಕರ್ ಬಾರದೆ ಇದ್ದದ್ದು ಯಾಕೆ?
ಅತ್ತ ಅಣ್ಣ ದರ್ಶನ್ ಕೈ ಮುರಿದುಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೇ ಇತ್ತ ದಿನಕರ್ ಅವರು ಕೂಡ ಜ್ವರದಿಂದ ಬಳಲುತ್ತಿದ್ದಾರೆ. ದರ್ಶನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ ದಿನಕರ್ ಮನೆಯಲ್ಲಿ ಹಾಸಿಗೆ ಇಡಿದಿದ್ದಾರೆ.. ದಿನಕರ್ ಅವರಿಗೆ ಕಳೆದ ಒಂದು ವಾರದಿಂದ ವೈರಲ್ ಫೀವರ್ ಕಾಡುತ್ತಿದ್ದು ಈ ಹಿನ್ನೆಲೆಯಲ್ಲಿ ದರ್ಶನ್ ಆರೋಗ್ಯ ವಿಚಾರಿಸಲು ಬಂದಿಲ್ಲ. ಆದರೆ ಪ್ರತಿನಿತ್ಯ ದರ್ಶನ್ ಜೊತೆಯಲ್ಲಿ ದಿನಕರ್ ಅವರು ಫೋನ್ ಮೂಲಕ ಸಂಪರ್ಕದಲ್ಲಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top