fbpx
ಮನೋರಂಜನೆ

ಅಂದು ಹಲ್ಲೆಗೂ ಮುನ್ನ ಅಂಬೇಡ್ಕರ್ ಭವನದಲ್ಲಿ ವಿಜಯ್ ಮಾತಾಡಿದ್ದ EXCLUSIVE ವೀಡಿಯೋ ಇಲ್ಲಿದೆ.

ಜಿಮ್ ಟ್ರೈನರ್ ಮಾರುತಿ ಗೌಡ ಎಂಬುವವರ ಮೇಲೆ ಹಲ್ಲೆ ಮತ್ತೆ ಕಿಡ್ನಾಪ್ ಪ್ರಕರಣಕ್ಕೆ ಸಂಭಂದಿಸಿದಂತೆ ಬಂಧಿತರಾಗಿರುವ ದುನಿಯಾ ವಿಜಯ್ ಅವರ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ. ವಾದ, ಪ್ರತಿವಾದ ಪರಿಶೀಲಿಸಿದ ನ್ಯಾಯಾಧೀಶರು ಜಾಮೀನು ಅರ್ಜಿಯನ್ನು ವಜಾಗೊಳಿಸಿದ್ದಾರೆ. ಕೋರ್ಟ್ ಆದೇಶದಂತೆ ದುನಿಯಾ ವಿಜಯ್ 14 ದಿನಗಳವರೆಗೂ ನ್ಯಾಯಾಂಗ ಬಂಧನದಲ್ಲೇ ಇರಬೇಕಾಗಿದೆ.. ದುನಿಯಾ ವಿಜಿ ಸತತ ನಾಲ್ಕನೇ ದಿನ ಜೈಲಿನಲ್ಲೇ ಕಳೆದಿದ್ದಾರೆ..

ದುನಿಯಾ ವಿಜಯ್ ಬಗ್ಗೆ ಪ್ರತಿ ಮಾಧ್ಯಮಗಳು ತಮಗೆ ತೋಚಿದ ರೀತಿಯಲ್ಲಿ ರಾಜಾರೋಷವಾಗಿ ಪ್ರಸಾರ ಮಾಡುತ್ತಿವೆ. ಮಾಧ್ಯಮಗಳು ವಿಜಯ್ ಅವರನ್ನು ರೌಡಿ, ಗೂಂಡಾ ಎನ್ನುವಂತೆ ಬಿಂಬಿಸಲು ಪ್ರಯತ್ನಿಸುತ್ತಿವೇ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ವಿಜಿ ತಪ್ಪು ಮಾಡಿದ್ದರೆ ಕಾನೂನು ಶಿಕ್ಷೆ ನೀಡುತ್ತೆ ಎಂಬ ಪೂರ್ವಾಪರ ಯೋಚಿಸದೇ ಇವನು ರೌಡಿ, ಇವನು ಪಟಿಂಗ, ಇವನು ಗೂಂಡಾ ಎಂದು ಊಳಿಟ್ಟು ಅತಿಯಾದ ಸುಳ್ಳುಗಳನ್ನೇ ಹೇಳೋ ಮೂಲಕ ವಿಜಿಯ ಜೀವಂತ ಸಮಾಧಿ ಕಟ್ಟುವ ಕೆಲಸಕ್ಕೆ ಮಾದ್ಯಮದವರು ಕೈಹಾಕಿದ್ದಾರೆ..

 

 

ವಿಡಿಯೋದಲ್ಲೇನಿದೆ?
ಈ ಎಲ್ಲಾ ಸಂಗತಿಗಳ ನಡುವೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು ಅಂದು ಹಲ್ಲೆ ನಡೆದಿದ್ದ ದಿನ ಅಂಬೇಡ್ಕರ್ ಭವನದಲ್ಲಿ ನಡೆದಿದ್ದ ದೇಹದಾರ್ಢ್ಯ ಸ್ಪರ್ಧೆಯ ವೇದಿಕೆ ಮೇಲೆ ದುನಿಯಾ ವಿಜಯ್ ಮಾತನಾಡಿರುವುದು ಈ ವಿಡಿಯೋದಲ್ಲಿದೆ. “ಈಗ ಬಾಡಿ ಬಿಲ್ಡಿಂಗ್ ಎಂಬುದು ಒಂದು ರೀತಿಯ ಫ್ಯಾಷನ್ ಆಗಿಬಿಟ್ಟಿದೆ. ಅದರ ಬಗ್ಗೆ ಏನೂ ಗೊತ್ತಿಲ್ಲದವರೂ ಬಾಡಿ ಬಿಲ್ಡಿಂಗ್ ಹೇಳಿಕೊಡುತ್ತೇನೆ ಎನ್ನುತ್ತಿದ್ದಾರೆ, ಆದರೆ ಬಾಡಿ ಬಿಲ್ಡಿಂಗ್ ಬಗ್ಗೆ ಏನೂ ಗೊತ್ತಿಲ್ಲದೇ ಈ ಕೆಲಸಕ್ಕೆ ಕೈ ಹಾಕಬಾರದು. ಆದರೆ ನನ್ನ ಹಲವು ವರ್ಷಗಳ ಸ್ನೇಹಿತ ಪ್ರಸಾದ್ ತುಂಬಾ ಕಷ್ಟಪಟ್ಟು ಇಂದು ಈ ಮಟ್ಟಕ್ಕೆ ಬೆಳೆದಿದ್ದಾರೆ,, ಅವರ ತಂಡಕ್ಕೆ ಶುಭಾಶಯ ತಿಳಿಸಲು ನಾನು ಇಲ್ಲಿಗೆ ಬಂದಿದ್ದೇನೆ.” ಎಂದು ಹೇಳಿದ್ದಾರೆ..

ಹೀಗೆ ದುನಿಯಾ ವಿಜಯ್ ಮಾತನಾಡುವಾಗ ಪಾನಿಪುರಿ ಕಿಟ್ಟಿಯ ಅಣ್ಣನ ಮಗ ಮಾರುತಿ ಗೌಡ ದುನಿಯಾ ವಿಜಿ ಮತ್ತು ಪುತ್ರ ಸಾಮ್ರಾಟ್ ವಿಜಯ್ ಅವರನ್ನು ರೇಗಿಸಿದ್ದನಂತೆ.. ಇದರಿಂದ ಕೋಪಗೊಂಡ ವಿಜಿ ಮತ್ತು ಬೆಂಬಲಿಗರು ಸೇರಿಕೊಂಡು ಮಾರುತಿಗೌಡನ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ..

ಏನಿದು ಘಟನೆ?
“ವಸಂತನಗರದ ಅಂಬೇಡ್ಕರ್ ಭವನದಲ್ಲಿ ಶನಿವಾರ ಮಿ.ಬೆಂಗಳೂರು ದೇಹದಾರ್ಢ್ಯ ಸ್ಪರ್ಧೆ ಏರಪಟ್ಟಿತ್ತು. ಈ ಸ್ಪರ್ಧೆಯನ್ನು ನೋಡಲು ದುನಿಯಾ ವಿಜಿ ತಮ್ಮ ಸಹಚರರೊಂದಿಗೆ ಬಂದಿದ್ದರು. ಈ ವೇಳೆ ಪಾನಿಪೂರಿ ಕಿಟ್ಟಿ ಅಣ್ಣನ ಮಗ ಮಾರುತಿಗೌಡ ಮತ್ತು ದುನಿಯಾ ವಿಜಿ ನಡುವೆ ಮಾತಿನ ಚಕಮಕಿ ನಡೆದಿದ್ದು ಮಾತು ವಿಕೋಪಕ್ಕೆ ತಿರುಗಿ ಹೊಡೆದಾಟ ನಡೆದಿದೆ. ದುನಿಯಾ ವಿಜಯ್ ಮತ್ತು ಅವರ ಸಹಚರರು ಮಾರುತಿಗೌಡನನ್ನು ಕಾರಿನಲ್ಲಿ ಕಿಡ್ನಾಪ್ ಮಾಡಿ ಮೇಲೆ ಹಲ್ಲೆ ನಡೆಸಿದ್ದಾರೆ.” ಎಂದು ಹೇಳಲಾಗಿದೆ.. ಈ ಬಗ್ಗೆ ದುನಿಯಾ ವಿಜಯ್ ವಿರುದ್ಧ ಐಪಿಸಿ ಸೆಕ್ಷನ್ 365, 342, 325, 506ರ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಹೈಗ್ರೌಂಡ್ ಪೊಲೀಸರು ದುನಿಯ್ ವಿಜಯ್ ನನ್ನ ಬಂಧಿಸಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top