ಭವಿಷ್ಯ

ದಿನಾ ಹೆಂಡತಿಗೆ ಮಲ್ಲಿಗೆ ಹೂವು ತಗೊಂಡೋಗಿ ಕೊಟ್ರೆ ಶಾಸ್ತ್ರದ ಪ್ರಕಾರ ಈ ಎಲ್ಲ ವಿಷಯಗಳಲ್ಲಿ ಒಳ್ಳೇದಾಗುತ್ತಂತೆ

ಪ್ರತಿ ದಿನ ಪತ್ನಿಗೆ ಮಲ್ಲಿಗೆ ಹೂವು ಕೊಟ್ಟರೆ ಏನೆಲ್ಲಾ  ಶುಭ ಫಲಗಳು ಲಭಿಸುತ್ತವೆ ಎಂದು  ನಿಮಗೆ  ಗೊತ್ತಾ ?

ಮನೆಯ  ಹೊಸಿಲಿನ ಮೇಲೆ ಕಾಲು ಇಡಬಾರದು . ಒಂದು ವೇಳೆ ಕಾಲು ಇಟ್ಟರೆ ಕಣ್ಣಿಗೆ ಒತ್ತಿಕೊಳ್ಳಬೇಕು, ನಮಸ್ಕಾರ ಮಾಡಬೇಕು ಎಂದು ಹೇಳುತ್ತಾರೆ .ಕಪ್ಪು ಬೆಕ್ಕು ಎದುರಾದರೆ ಕೇಡು ಸಂಭವಿಸುವುದು. ಎಲ್ಲಿಗಾದರೂ ಹೊರಡುವಾಗ ಸಿಗುವುದು ಅಪಶಕುನ .ಈ ರೀತಿಯ ಅದೆಷ್ಟೋ ನಂಬಿಕೆಗಳ ಬಗ್ಗೆ ನಮ್ಮ ಮನೆಗಳಲ್ಲಿ ನಿತ್ಯ ಹೇಳುವುದನ್ನು ಕೇಳುತ್ತಿರುತ್ತೇವೆ.ಇವನ್ನು ಕೆಲವರು ಮೂಢನಂಬಿಕೆ ಎಂದು ಒಡೆದು ಹಾಕುತ್ತಾರೆ. ಇನ್ನೂ ಕೆಲವರು ಇದನ್ನು ಪಾಲಿಸುತ್ತಿರುತ್ತಾರೆ. ಪ್ರತಿ ನಿತ್ಯ ಪತ್ನಿಗೆ ಮಲ್ಲಿಗೆ ಹೂವು ತೆಗೆದುಕೊಂಡು ಹೋಗುವುದರಿಂದ ಏನೆಲ್ಲಾ  ಶುಭ ಫಲಗಳು ಲಭಿಸುತ್ತವೆ  ಎಂದು  ನಿಮಗೆ  ಗೊತ್ತಾ ? ಅದರಿಂದ ಉಂಟಾಗುವ ಪ್ರತಿಫಲ ಏನು ಎಂಬುದನ್ನು ತಿಳಿದುಕೊಳ್ಳಿ

 

 

 

ಮನೆಯನ್ನು ನೋಡಿ  ಮನೆಯಾಕೆಗೆ ಮಣೆ ಹಾಕಬೇಕು ಎಂದು ಹೇಳಿದ್ದಾರೆ ಹಿರಿಯರು. ಮನೆಯಲ್ಲಿ ಮಹಿಳೆಯರು ಇದ್ದರೇನೇ ಆ ಕಳೆಯೇ ಬೇರೆ. ಆ ರೀತಿಯ ಹೆಣ್ಣುಮಕ್ಕಳು ಸಂತೋಷವಾಗಿ ಇದ್ದರೆ, ಆ ಕುಟುಂಬ ಸಂತೋಷವಾಗಿ ಇರುತ್ತದೆ ಎಂದರ್ಥ.ಮಹಿಳೆಯರು ಎಷ್ಟು ಸರಳವಾಗಿ ಸುಂದರವಾಗಿ, ಆನಂದವಾಗಿ ,ಸಂಸಾರವನ್ನು ಸಾಗಿಸಿದರೆ ಆ ಮನೆಯಲ್ಲಿ ಅವರ ಜೀವನ ಅಷ್ಟು ಆನಂದವಾಗಿ ಇರುತ್ತದೆ .ಮನುಷ್ಯರನ್ನು ಕಾಡುವ ಸಮಸ್ಯೆಗಳಲ್ಲಿ ಒಂದು ಆರ್ಥಿಕ ಸಮಸ್ಯೆಗಳು.  ಈ ರೀತಿಯ ಸಮಸ್ಯೆಗಳು  ದೂರ ಆಗಬೇಕೆಂದರೆ ಮೊದಲು ನಿಮ್ಮ ಮನೆಯ ಹೆಣ್ಣುಮಕ್ಕಳು ಸಂತೋಷವಾಗಿ ಇರಬೇಕು .ಪುರುಷರು ಪ್ರತಿ ನಿತ್ಯ ಪತ್ನಿಗೆ ಒಂದು ಮೊಳ ಮಲ್ಲಿಗೆ ಹೂವು ಕೊಂಡುಕೊಂಡು ತೆಗೆದುಕೊಂಡು ಹೋದರೆ ಬಹಳ ಒಳ್ಳೆಯದು ನಿಮಗೆ ಉದ್ಯೋಗದಲ್ಲಿ ಮತ್ತು ವ್ಯಾಪಾರದಲ್ಲಿ ಸೂಕ್ತ ಸಂಪಾದನೆ ಇಲ್ಲದಿದ್ದರೆ ಇದನ್ನು ಕಡ್ಡಾಯವಾಗಿ ಪಾಲಿಸಿ ನೋಡಿ ಪ್ರತಿನಿತ್ಯ ಆಕೆಯ ತಲೆಯಲ್ಲಿ ಮಲ್ಲಿಗೆ ಹೂವು ಸಿಂಗರಿಸಿಕೊಂಡರೆ ಶುಕ್ರನು ಆಕೆಗೆ ಅನುಗ್ರಹಿಸುತ್ತಾನೆ.

ಶುಕ್ರನು ಪ್ರೀತಿಯ ಗ್ರಹವಾಗಿದ್ದು ನಿಮ್ಮ ಸಾಂಸಾರಿಕ ಜೀವನ ಚೆನ್ನಾಗಿರುತ್ತದೆ.ಇದಿಷ್ಟೇ ಅಲ್ಲದೆ ಪರಿಮಳ ಭರಿತವಾದ ಜಾಜಿ ಅಂತಹ ಹೂವುಗಳನ್ನು ಕೊಡಬಹುದು ಶುಕ್ರನ ಅನುಗ್ರಹ ಇದ್ದರೆ ಉದ್ಯೋಗ, ವ್ಯಾಪಾರ ಚೆನ್ನಾಗಿ ಆಗುತ್ತದೆ ಸಂಪಾದನೆ ಚೆನ್ನಾಗಿರುತ್ತದೆ ಎಂದು ಶಾಸ್ತ್ರಗಳು ಹೇಳುತ್ತವೆ .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top