ಆರೋಗ್ಯ

ಬಿಸಿ ನೀರಿನಲ್ಲಿ ನಿಂಬೆ ಹಣ್ಣನ್ನು ಹಿಂಡಿ ಕುಡಿದರೆ ಎಷ್ಟೆಲ್ಲಾ ಲಾಭಗಳು ಗೊತ್ತಾ.

ಪ್ರತಿ ದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಉಗುರು ಬೆಚ್ಚಗಿನ ನೀರಿನಲ್ಲಿ ನಿಂಬೆ ಹಣ್ಣನ್ನು ಹಿಂಡಿ ಕುಡಿದರೆ ಆರೋಗ್ಯದ ವಿಷ್ಯದಲ್ಲಿ ಅದ್ಬುತವನ್ನೇ ಇದು ಮಾಡುತ್ತದೆ .ಆಯುರ್ವೇದದಲ್ಲಿ ಅಗ್ನಿ ವರ್ಧಕ ಎಂದೇ ಹೆಸರು ಪಡೆದಿರುವ ನಿಂಬೆ ಹಣ್ಣು 125 ವಿವಿಧ ರೀತಿಯ ಕಾಯಿಲೆಗಳಿಗೆ ರಾಮಬಾಣ,ಅನೇಕ ದೇಹದ ಕಾಯಿಲೆಗಳನ್ನು ವಾಸಿ ಮಾಡುವುದಲ್ಲದೆ ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶಗಳನ್ನು ನೀಡುತ್ತದೆ .

 

 

 

ಬಿಸಿ ನೀರಿನಲ್ಲಿ ನಿಂಬೆ ಹಣ್ಣನ್ನು ಹಿಂಡಿ ಕುಡಿದರೆ ಆಗುವ ಆರೋಗ್ಯಕರ ಪ್ರಯೋಜನಗಳ ಬಗ್ಗೆ ತಿಳಿಯೋಣ ಬನ್ನಿ .

ಸಕ್ಕರೆ ಕಾಯಿಲೆ ನಿಯಂತ್ರಣ ಮಾಡಲು :ಸಕ್ಕರೆ ಕಾಯಿಲೆ ಇಂದ ಬಳಲುತ್ತಿರುವವರು ನಿತ್ಯವೂ ಒಂದು ಲೋಟ ಬಿಸಿ ನೀರಿಗೆ ನಿಂಬೆ ಹಣ್ಣು ಹಿಂಡಿ ಕುಡಿದರೆ ರಕ್ತದಲ್ಲಿನ ಗ್ಲುಕೋಸ್ ಮಟ್ಟವನ್ನು ಕಡಿಮೆ ಮಾಡುತ್ತದೆ .

ಕಿಡ್ನಿ ಕಲ್ಲುಗಳು ಕರಗಿಸುತ್ತವೆ :ಸಕ್ಕರೆ ಕಾಯಿಲೆ ಇಂದ ಬಳಲುತ್ತಿರುವವರು ನಿತ್ಯವೂ ಒಂದು ಲೋಟ ಬಿಸಿ ನೀರಿಗೆ ನಿಂಬೆ ಹಣ್ಣು ಹಿಂಡಿ ಕುಡಿದರೆ ದೇಹದಲ್ಲಿ ಪೊಟ್ಯಾಸಿಯಂ ಮಟ್ಟ ಮತ್ತು ಸಿಟ್ರಿಕ್ ಆಮ್ಲದ ಮಟ್ಟ ಹೆಚ್ಚಾಗಿ ಕಿಡ್ನಿ ಕಲ್ಲುಗಳನ್ನು ಕರಗಿಸಲು ಸಹಾಯ ಮಾಡುತ್ತದೆ.

ಪಿತ್ತ ಕೋಶದ ಕಲ್ಲುಗಳು :ದಿನಾಗಲೂ ನಿಂಬೆ ರಸವನ್ನು ಸೇವಿಸುವುದರಿಂದ ಗಾಲ್ ಬ್ಲಾಡರ್ ಸ್ಟೋನ್ಸ್ ಕಡಿಮೆ ಮಾಡುತ್ತದೆ , ಹೊಟ್ಟೆ ನೋವು ಮುಂತಾದ ಸಮಸ್ಯೆಗಳಿಂದ ಮುಕ್ತಿ ನೀಡುತ್ತದೆ .

ದೇಹದಿಂದ ಕಶ್ಮಲ ಪದಾರ್ಥಗಳನ್ನು ಹೊರಗೆ ಹಾಕಲು ಸಹಾಯಕ :ನಾವು ತಿನ್ನುವ ಆಹಾರ , ವಾತಾವರಣ ,ನೀರು ಇವೆಲ್ಲವೂ ದಿನನಿತ್ಯ ದೇಹಕ್ಕೆ ವಿಷವನ್ನು ಉಣಿಸುತ್ತವೆ ಇದರಿಂದ ಮುಕ್ತಿ ಬೇಕೆಂದರೆ ದಿನಾಗಲೂ ನಿಂಬೆ ರಸ ಸೇವನೆ ಮಾಡುವುದು ಒಳ್ಳೆಯದು .

ಚರ್ಮದ ಆರೋಗ್ಯ ಕಾಪಾಡಲು :ಚರ್ಮದ ಸುಕ್ಕು , ಕಪ್ಪು ಕಲೆ ನಿವಾರಣೆ ಮಾಡಿ ,ತ್ವಚೆಗೆ ಪುನರ್ ಉತ್ತೇಜನ ನೀಡಿ ಹೊಳೆಯುವ ಹಾಗೆ ಮಾಡಲು ನಿಂಬೆ ರಸ ಬಹಳ ಒಳ್ಳೆಯದು.

ಜೀರ್ಣ ಕ್ರಿಯೆಗೆ ಸಹಾಯಕ :ಅಸಿಡಿಟಿ , ಮಲಬದ್ಧತೆ , ಅಜೀರ್ಣ ದಂತಹ ಸಮಸ್ಯೆಗಳನ್ನು ದೂರ ತಳ್ಳಲು ಮತ್ತು ಜೀರ್ಣ ಕ್ರಿಯೆಯ ಇನ್ನಾವುದೇ ಸಮಸ್ಯೆ ದೂರ ತಳ್ಳಲು ನಿಂಬೆ ಹಣ್ಣು ಬಹಳ ಒಳ್ಳೆಯದು .

ದೇಹದ ಕೊಬ್ಬನ್ನು ಕರಗಿಸುತ್ತದೆ :ದೇಹದ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ , ರಕ್ತದ ಸರಬರಾಜು ಉತ್ತಮಗೊಂಡು ಹೃದಯ ಸಂಬಂಧಿ ಕಾಯಿಲೆಗಳನ್ನು ದೂರ ತಳ್ಳುತ್ತದೆ .

ಸಾಮಾನ್ಯ ದೇಹದ ಸಮಸ್ಯೆಗಳಿಗೆ ಪರಿಹಾರ :ದಿನ ನಿತ್ಯ ಕಾಡುವ ಕೆಮ್ಮು ,ನೆಗಡಿ , ಜ್ವರದ ಸಮಸ್ಯೆಗೆ ನಿಂಬೆ ಹಣ್ಣಿನ ರಸ ರಾಮಬಾಣ .

ನೆನಪಿಡ ಬೇಕಾದ ಅಂಶ :ನಿಂಬೆ ಉಷ್ಣ ಕಾರಕ ಆದ್ದರಿಂದ ದೇಹಕ್ಕೆ ಉಷ್ಣ ಹೆಚ್ಚಾದರೆ ಎಳ ನೀರು ಮತ್ತು ಮಜ್ಜಿಗೆಯಂತಹ ತಂಪು ಪದಾರ್ಥಗಳನ್ನು ಸೇವಿಸಿ .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top