fbpx
ಮನೋರಂಜನೆ

“ಅಮ್ಮಾವ್ರ ಗಂಡ’ ಚಿತ್ರದ ಸುಂದರಿ “ಭಾಗ್ಯ ಶ್ರೀ” ಬದುಕಿನ ಸುತ್ತ ಒಂದು ಇಣುಕು ನೋಟ

ಒಂದು ಕಾಲದಲ್ಲಿ ಹಿಂದಿ ಹಾಗೂ ಕನ್ನಡ ಚಿತ್ರರಂಗದಲ್ಲಿ ಮಿಂಚಿ ಮೀರಿದ ನಟಿ ಭಾಗ್ಯ ಶ್ರೀ ,ಭಾಗ್ಯಶ್ರೀ ಹುಟ್ಟಿದು 23 ಫೆಬ್ರವರಿ 1969 ರಂದು ಒಂದು ಪ್ರತಿಷ್ಠಿತ ಮಿರಾಜ್ ರಾಯಲ್ ಪಟವರ್ಧನ್ ಕುಟುಂಬದಲ್ಲಿ ,ಭಾಗ್ಯ ಶ್ರೀ ಯವರ ಪೂರ್ಣ ಹೆಸರು ಶ್ರೀಮಂತ್ ರಾಜ್ಕುಮಾರಿ ಭಾಗ್ಯಶ್ರೀ ರಾಜೇ ಪಟ್ವರ್ಧನ್ ,ಇವರ ತಂದೆ ಸಾಂಗ್ಲಿಯ ರಾಜರಾಗಿದ್ದ ಶ್ರೀ ವಿಜೇಂದ್ರ ಸಿಂಗ್ ರಾವ್ ಮಾಧವ ರಾವ್ ಪಟ್ವರ್ಧನ್.

ಭಾಗ್ಯಶ್ರೀ ತನ್ನ ನಟನಾ ವೃತ್ತಿಯನ್ನುಶುರು ಮಾಡಿದ್ದೂ ಧಾರಾವಾಹಿಗಳ ಮೂಲಕ ,ಆ ಕಾಲದಲ್ಲಿ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ‘ಕಚ್ಚಿ ಧೂಪ್’ ನಲ್ಲಿ ಧಾರಾವಾಹಿಯಲ್ಲಿ ನಟಿಯಾಗಿ ಮೊದಲ ಬಾರಿಗೆ ಪಾದಾರ್ಪಣೆ ಮಾಡಿದ್ದರು ಭಾಗ್ಯ ಶ್ರೀ .ನಂತರ ಭಾಗ್ಯ ಶ್ರೀ ಯವರಿಗೆ ಸಿನಿಮಾ ಅವಕಾಶಗಳು ಹುಡುಕಿಕೊಂಡು ಬಂದವು 1989ರಲ್ಲಿ ರಿಲೀಸ್ ಆದ ‘ಮೈನೆ ಪ್ಯಾರ್ ಕಿಯಾ’ ಚಿತ್ರದ ಮೂಲಕ ಇವರು ತಮ್ಮ ಸಿನಿ ವೃತ್ತಿಜೀವನವನ್ನು ಪ್ರಾರಂಭಿಸಿದರು ಆ ಸಿನಿಮಾ ಆ ಕಾಲದಲ್ಲಿ ಸೂಪರ್ ಹಿಟ್ ಆಗಿತ್ತು ಈ ಚಿತ್ರದ ಯಶಸ್ವಿ ನಂತರ ಬಾಲಿವುಡ್ ನ ರಾಣಿಯಾಗಿ ಮೆರೆದರು ಭಾಗ್ಯಶ್ರೀ ,ನಂತರ ತನ್ನ ದೀರ್ಘಕಾಲದ ಸ್ನೇಹಿತ, ಹಿಮಾಲಯ ಜೊತೆ ಮದುವೆಯಾಗಲು ಬಯಸಿದ್ದರು. ಆದರೆ ಈಕೆಯ ಕುಟುಂಬ ಇದಕ್ಕೆ ಒಪ್ಪಲಿಲ್ಲ. ಹಠ ಬಿಡದ ಭಾಗ್ಯಶ್ರೀ ತನ್ನ 19 ನೇ ವಯಸ್ಸಿನಲ್ಲಿ ದೇವಸ್ಥಾನವೊಂದರಲ್ಲಿ ತನ್ನ ಕುಟುಂಬದ ಆಶಯದ ವಿರುದ್ಧ ಪ್ರಿಯಕರನನ್ನು ಮದುವೆಯಾದರು.

 

 

 

ಮದುವೆಯಾದ ನಂತರವೂ ಈಕೆಗೆ ಅನೇಕ ಆಫರ್ ಗಳು ಬಂದಿದ್ದವು. ಆದರೆ ಈಕೆ ಬೇರೆ ನಟರ ಜೊತೆಗೆ ನಟಿಸಲು ನಿರಾಕರಿಸಿದಳು. ತಾನು ನಟಿಸುವುದಾದರೆ ಗಂಡನ ಜೊತೆಗೆ ಮಾತ್ರ ನಟಿಸುವುದು ಅಂತಾ ಹೇಳಿಕೆ ನೀಡಿದ್ದರು. ಹೀಗೆ ಗಂಡ ಹಿಮಾಲಯ ಜೊತೆಗೆ ಮೂರು ಚಿತ್ರಗಳಲ್ಲಿ ನಟಿಸಿದರು. ಆದರೆ ಈ ಸಿನಿಮಾ ಹಿಟ್ ಆಗಲಿಲ್ಲ. ನಂತರ ಭಾಗ್ಯಶ್ರೀ ಚಿತ್ರಗಳಲ್ಲಿ ಅಷ್ಟು ಕಾಣಿಸಿಕೊಳ್ಳಲಿಲ್ಲ ನಂತರ 7 ವರ್ಷದ ನಂತರ ಟಿವಿ ಶೋ ಹಾಗೂ ಕೆಲ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದರು ಭಾಗ್ಯಶ್ರೀ ,ಭಾಗ್ಯ ಶ್ರೀ ಗೆ ಇಬ್ಬರು ಮಕ್ಕಳು ಒಂದು ಗಂಡು ಒಂದು ಹೆಣ್ಣು ,ತನ್ನದೇ ಆದ ಸುಂದರ ಸಂಸಾರ ಹೊಂದಿರುವ ಭಾಗ್ಯಶ್ರೀ ಈಗ ನಮ್ಮ ಕನ್ನಡ ನೆಲದ ಮೇಲೆ ಮತ್ತೆ ಮರಳಿ ಬರಲು ರೆಡಿ ಆಗಿದ್ದಾರೆ.
ನಮ್ಮ ಸ್ಯಾಂಡಲ್ ವುಡ್ ನಲ್ಲಿ ಬಾಲಿವುಡ್ ನಟ ನಟಿಯರ ಬರುವುಕೆ ಹೊಸದೇನು ಅಲ್ಲ ,ಈಗಾಗಲೇ ಅನೇಕ ನಟ ನಟಿ ಯರು ಕನ್ನಡದ ಎಷ್ಟೋ ಸೂಪರ್ ಡೂಪರ್ ಚಿತ್ರಗಳಲ್ಲಿ ನಟಿಸಿದ್ದಾರೆ ,ಇನ್ನೂ ಕೆಲವರು ಈಗಲೂ ನಟಿಸುತ್ತಲೇ ಇದ್ದಾರೆ.ಈಗ ಹರಿದಾಡುತ್ತಿರುವ ಹೊಸ ಸೆನ್ಸಾಷನಲ್ ಸುದ್ದಿ ಏನು ಅಂದ್ರೆ ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಕನ್ನಡದ ಖ್ಯಾತ ನಟನ ಜೊತೆ ನಟಿಸಿ ತುಂಬಾ ಹೆಸರು ಮಾಡಿ ಇಲ್ಲಿಂದ ಮಾಯವಾಗಿದೆ ಸುಂದರ ನಟಿ ಮತ್ತೆ ನಮ್ಮ ಕನ್ನಡದ ಚಂದನವನಕ್ಕೆ ಹೆಜ್ಜೆ ಇಡಲು ರೆಡಿ ಆಗಿದ್ದಾರೆ.

 

ಹೌದು ನಮ್ಮ ಕುಮಾರಸ್ವಾಮಿ ಯವರ ಸುಪುತ್ರ ನಟನೆ ಮಾಡುತ್ತಿರುವ ‘ಸೀತಾರಾಮ ಕಲ್ಯಾಣ’ಚಿತ್ರದ ಮೂಲಕ ಆ ನಟಿ ಕಾಣಿಸಿಕೊಳ್ಳುತ್ತಿದ್ದಾರೆ ,ಆ ನಟಿ ಬೇರೆ ಯಾರೂ ಅಲ್ಲ ಬಾಲಿವುಡ್ ನ `ಮೈನೆ ಪ್ಯಾರ್ ಕಿಯಾ’ ಲಡಕಿ ಎಂದೇ ಫೇಮಸ್ ಆಗಿರುವ ಭಾಗ್ಯಶ್ರೀ .ಭಾಗ್ಯ ಶ್ರೀ ಸೀತಾರಾಮ ಕಲ್ಯಾಣ ಚಿತ್ರದಲ್ಲಿ ನಿಖಿಲ್ ತಾಯಿಯಾಗಿ ಅಭಿನಯಿಸಲಿದ್ದಾರೆ ಎಂಬುದು ಈ ಚಿತ್ರದ ವಿಶೇಷ.ಈ ಚಿತ್ರದಲ್ಲಿ ಈಗ ಬಾಲಿವುಡ್‌ ನಟಿ ಭಾಗ್ಯಶ್ರೀ ಅವರು ಅಭಿನಯಿಸುತ್ತಿದ್ದಾರೆ.
ಭಾಗ್ಯಶ್ರೀ ಕನ್ನಡಕ್ಕೆ ಬರುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಶಿವರಾಜ್‌ಕುಮಾರ್‌ ಅಭಿನಯದ “ಅಮ್ಮಾವ್ರ ಗಂಡ’ ಚಿತ್ರದಲ್ಲಿ ನಟಿಸಿದ್ದಾರೆ. ಭಾಗ್ಯಶ್ರೀ ಬರೋಬ್ಬರಿ 20 ವರ್ಷಗಳ ಬಳಿಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.ಈಗ ನಿಖಿಲ್ ಅಭಿನಯದ ಸೀತಾರಾಮ ಕಲ್ಯಾಣ ಚಿತ್ರತಂಡದ ಕೋರಿಕೆ ಮೇರೆಗೆ ಭಾಗ್ಯಶ್ರೀ ಕನ್ನಡ ಸಿನಿಮಾದಲ್ಲಿ ಮತ್ತೆ ಅಭಿನಯಿಸುವುದಕ್ಕೆ ಒಪ್ಪಿದ್ದು ,ನಿಖಿಲ್ ತಾಯಿಯ ಪಾತ್ರದಲ್ಲಿ ಭಾಗ್ಯಶ್ರೀ ನಟಿಸಲಿದ್ದು, ಒಂದು ಫ್ಲ್ಯಾಶ್‍ಬ್ಯಾಕ್ ಕಥೆಯಲ್ಲಿ ಭಾಗ್ಯಶ್ರೀ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅಂದಹಾಗೆ, ಸುಂದರ ನಟಿ ಭಾಗ್ಯಶ್ರೀ ಯವರ ಭಾಗದ ಚಿತ್ರೀಕರಣ ಕಳೆದ ಸೋಮವಾರದಿಂದ ಶುರುವಾಗಿದ್ದೇ

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top