fbpx
ದೇವರು

ಇಷ್ಟದೇವರಾಗಿ ಕಷ್ಟಗಳನ್ನು ನಿವಾರಿಸುವ, ಬೇಡಿದ್ದನ್ನು ಕೊಡುವ, ಕಾಮ ಧೇನು ಮಹಿಷಾಸುರ ಮರ್ದಿನಿಯ ಮಹಿಮೆ ಬಗ್ಗೆ ಗೊತ್ತಾದ್ರೆ ,ಆ ತಾಯಿ ಮೇಲೆ ಭಕ್ತಿ ಜಾಸ್ತಿಯಾಗುತ್ತೆ

ಮಹಿಷಾಸುರ ಮರ್ದಿನಿಯ ದೇವಾಲಯದ ಮಹಿಮೆ ಏನು ಎಂದು ನಿಮಗ್ರ ಗೊತ್ತೇ ?
“ ದೇವನೊಬ್ಬ ನಾಮ ಹಲವು” ಎನ್ನುವ ಗಾದೆ ಮಾತು ಎಲ್ಲರಿಗೂ ತಿಳಿದಿದೆ. ದೇವರು ಎಲ್ಲೆಲ್ಲಿಯೂ ಕೂಡ ಇದ್ದಾನೆ. ಈ ಕ್ಷೇತ್ರದಲ್ಲಿ ಬಂದು ದೇವರ ದರ್ಶನ ಮಾಡಿದರೆ ಪಾಪಕರ್ಮಗಳು ನಿರ್ನಾಮವಾಗುತ್ತವೆ ಎನ್ನುವ ಪ್ರತೀತಿ ಇಂದಿಗೂ ಜನರ ಮನಸ್ಸಿನಲ್ಲಿ ಹಾಸುಹೊಕ್ಕಾಗಿದೆ. ಭಕ್ತಿ-ಶ್ರದ್ಧೆಯಿಂದ ಮನಃ ಪೂರ್ವಕವಾಗಿ ಬೇಡಿಕೊಂಡು ತಮ್ಮ ಮನೋ ಕಾಮನೆಗಳನ್ನು ಈಡೇರಿಸಿಕೊಳ್ಳುತ್ತಾರೆ. ಆಶ್ಚರ್ಯವಾದರೂ ಈ ಕ್ಷೇತ್ರದ ಮಹಿಮೆ ಎಂತದ್ದು ಎನ್ನುವ ಕುತೂಹಲ ಮೂಡುತ್ತದೆ. ಬನ್ನಿ ಈ ಕ್ಷೇತ್ರದ ಮಹಿಮೆಯನ್ನು ತಿಳಿದುಕೊಳ್ಳೋಣ.

ಕರಾವಳಿ, ಕರ್ನಾಟಕ ಇತಿಹಾಸ ಪ್ರಸಿದ್ಧವಾದ ಪ್ರದೇಶ.ಅಲ್ಲುಬ್ಬರು, ಹೊಯ್ಸಳ ,ವಿಜಯನಗರ ಮುಂತಾದ ಅನೇಕ ರಾಜಮನೆತನಗಳ ಆಡಳಿತಕ್ಕೆ ಒಳಪಟ್ಟ ಈ ಪರಿಸರದಲ್ಲಿ ಅನೇಕ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕೇಂದ್ರಗಳಿದ್ದರೂ ಉಡುಪಿ ತಾಲೂಕಿನ ನೀರಾವರ ಅಥವಾ ನೀಲಾವರ ಕ್ಷೇತ್ರ ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ.ಉಡುಪಿಯಲ್ಲಿ ನೆಲೆಸಿರುವ ಈ ದೇವಾಲಯ. ಬ್ರಹ್ಮಾವರದಿಂದ ಹೆಬ್ರಿಗೆ ಹೋಗುವ ರಸ್ತೆಯಲ್ಲಿ ಕುಂಜಾರಿನಿಂದ 3 ಕಿಲೋಮೀಟರ್ ಉತ್ತರ ಡಿಕ್ಕಿಗೆ ಹೋದರೆ ಸಿಗುವುದೇ ಪ್ರಕೃತಿಯ ರಮಣೀಯವಾದ ಸೀತಾ ನದಿ ತೀರದಲ್ಲಿರುವ ಒಂದು ಸುಂದರವಾದ ಪುಣ್ಯಸ್ಥಳ ನೀಲಾವರ.ಇಲ್ಲಿನ ಪ್ರಮುಖ ಆಕರ್ಷಣೆ ಮಹಿಷಮರ್ದಿನಿ ದೇವಸ್ಥಾನ.
ಈ ಮಹಿಷ ಮರ್ದಿನಿ ದೇವಾಲಯ ಬಹಳ ಪ್ರಾಚೀನವಾದದ್ದು, ಮಹಿಷ ಮರ್ದಿನಿಯೇ ಸಹಸ್ರಾರು ಭಕ್ತ ಕುಟುಂಬಗಳ ಕುಲದೇವತೆ .ಅಷ್ಟೇ ಮಾತ್ರವಲ್ಲ ಅವರ ಧಾರ್ಮಿಕ ಜೀವನದ ಮೇಲೆ ಅಚ್ಚಳಿಯದ ಪ್ರಭಾವವನ್ನು ಬೀರಿದ್ದಾಳೆ. ಇಲ್ಲಿನ ಮೂಲ ಮೂರ್ತಿಯು ಮಹಿಷಾಸುರ ಮರ್ದಿನಿಯ ಚತುರ್ಬಾಹು ವಿಗ್ರಹ, ಬಲಗೈಯಲ್ಲಿ ಚಕ್ರ, ಎಡಗೈಯಲ್ಲಿ ಶಂಕವಿದೆ. ಇನ್ನೊಂದು ಎಡಗೈಯಲ್ಲಿ ಮಹಿಷಾಸುರನನ್ನು ಎತ್ತಿ ಹಿಡಿದು ಅವನ ಕುತ್ತಿಗೆಯನ್ನು ಬಲಗೈನಲ್ಲಿ ತ್ರಿಶೂಲದಿಂದ ಇರಿಯುತ್ತಿರುವಂತೆ ಈ ಮೂರ್ತಿಯನ್ನು ಕೆತ್ತಲಾಗಿದೆ.

 

 

 

ಆಳ್ಳುಬ್ಬ ರಾಜವಂಶ ಇಲ್ಲಿ ದೀರ್ಘಕಾಲ ಆಳಿದ ರಾಜವಂಶಸ್ಥರು. ನೀಲಾವರದ ದೇವಸ್ಥಾನದ ಬಗ್ಗೆ ಹೆಚ್ಚು ಗಮನ ಹರಿಸಿದ್ದರು. ಅಳ್ಳುಬ್ಬ ಅರಸ ವೀರಪಾಂಡ್ಯರು 1258 ಫೆಬ್ರವರಿ 24 ನೇ ತಾರೀಖಿನಂದು ಹೊರಡಿಸಿದ್ದ ಶಾಸನ ಈ ಕ್ಷೇತ್ರದ ಬಗ್ಗೆ ತಿಳಿಸುವ ಅತ್ಯಂತ ಪ್ರಾಚೀನ ದಾಖಲೆಯಾಗಿದೆ. ಅಳ್ಳುಬ್ಬರ ನಂತರ ಅಧಿಕಾರಕ್ಕೆ ಬಂದ ವಿಜಯನಗರದ ಅರಸರ ಕಾಲದಲ್ಲಿಯೂ ನೀರಾವರ ಒಂದು ಪ್ರಸಿದ್ಧ ಧಾರ್ಮಿಕ, ಐತಿಹಾಸಿಕ, ಸಾಂಸ್ಕೃತಿಕ ಕ್ಷೇತ್ರವಾಗಿತ್ತು. ಕ್ರಿಸ್ತಶಕ 1387 ರ ಇಮ್ಮಡಿ ಹರಿಹರನ ನೀಲಾವರದ ಶಾಸನವು ದೇವಾಲಯದ ವ್ಯವಸ್ಥೆ ಮಾಡಿದ ಬಗ್ಗೆ ಹಾಗೂ ಅಲ್ಲಿನ ಪೂಜೆಗೆ ದತ್ತಿಪೀಠ ವಿಷಯವನ್ನು ತಿಳಿಸಿದೆ. ರಾಜಕುಮಾರ ಇಮ್ಮಡಿ ಬಪ್ಪರಾಯ ನೀಲಾವರದಲ್ಲಿ ಆಡಳಿತ ತರಬೇತಿ ಪಡೆದ ವಿಷಯವನ್ನು ಈ ಶಾಸನ ತಿಳಿಸುತ್ತದೆ.

ಹೀಗೆ ಇಲ್ಲಿ ಆಳಿದ ಪ್ರತಿಯೊಂದು ರಾಜವಂಶಗಳ ನಿರಂತರ ಪ್ರೋತ್ಸಾಹ ಹಾಗೂ ಈ ಊರಿನ ಮತ್ತು ಅಕ್ಕಪಕ್ಕದ ಊರಿನ ಭಕ್ತರ ಬೆಂಬಲದಿಂದ ನೀಲಾವರ ಒಂದು ಪ್ರಮುಖ ಧಾರ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರವಾಗಿ ಬೆಳೆಯಿತು . ಅಷ್ಟೇ ಅಲ್ಲದೆ ಸಮೀಪದಲ್ಲಿ ಇರುವ ಸುಬ್ರಮಣ್ಯನ ಆರಾಧನೆ ಹಾಗೂ ಪ್ರತಿವರ್ಷ ವೃಶ್ಚಿಕ ಮಾಸದಲ್ಲಿ ಜರುಗುವ ಪಂಚಮಿ ತೀರ್ಥ ಇಲ್ಲಿನ ಪ್ರಮುಖ ಆಕರ್ಷಣೆಗಳು.
ಮಹಿಷಮರ್ದಿನಿ ದೇವಾಲಯಕ್ಕೆ ಹೊಂದಿಕೊಂಡಂತೆ ವೀರಭದ್ರ ಮತ್ತು ಕಲ್ಕುಡ ದೈವಗಳು ಹೆಚ್ಚು ಹೆಚ್ಚಿನ ಜನರನ್ನು ಆಕರ್ಷಿಸುತ್ತಿವೆ. ಮಹಿಷಾಸುರಮರ್ದಿನಿ ದೇವಾಲಯದ ಸನ್ನಿಧಿಯಲ್ಲಿ ವಿಗ್ರಹವನ್ನು ಘಾಲವ ಎಂಬ ಮಹರ್ಷಿಗಳು ಪುನರ್ ಪ್ರತಿಷ್ಠಾಪನೆ ಮಾಡಿದ್ದಾರೆ. ಅಲ್ಲದೆ ದೇವಸ್ಥಾನದ ತಪ್ಪಲಿನಲ್ಲಿರುವ ಕೆರೆಯಲ್ಲಿ ಸ್ನಾನ ಮಾಡಿ ದೇವಿಯನ್ನು ಪೂಜಿಸುತ್ತಿದ್ದರು ಎಂದು ಹೇಳಲಾಗುತ್ತದೆ. ಆದ್ದರಿಂದ ಈ ಕೆರೆಗೆ ಘಾಲವ ತೀರ್ಥ ಕ್ಷೇತ್ರವೆಂದು ಕೂಡ ಕರೆಯುತ್ತಾರೆ.

 

 

 

ಈ ಕ್ಷೇತ್ರದಲ್ಲಿ ಜೀವದತ್ತ ಎನ್ನುವ ಬ್ರಾಹ್ಮಣನು ಜೀವನದಲ್ಲಿ ಜಿಗುಪ್ಸೆ ಹೊಂದಿ ಯಾತ್ರೆಗೆ ಹೊರಡುತ್ತಾನೆ. 5 ಸರ್ಪಗಳು ಜೀವನ್ಮರಣದಿಂದ ಹೋರಾಟ ನಡೆಸುತ್ತಿರುತ್ತವೆ. ಜೀವದತ್ತ ಅವುಗಳನ್ನು ಕಂಡು ಆ ಹಾವುಗಳನ್ನು ರಕ್ಷಿಸುತ್ತಾನೆ. ದೇವರತಿ ಅರಸಮ್ಮಕಾನು ನಾಗರತಿ ,ಚಾರುರತಿ, ಚೋರಾಡಿ, ಮಂದಿರತಿ, ಮಂದರ್ತಿ, ನೀಲಾರತಿ, ನೀಲಾವರ ಕ್ಷೇತ್ರ ಇದಾಗಿದೆ. ಪಂಚಮಿ ನಾಗಸನ್ನಿಧಿ ಇದೆ ಈ ಕ್ಷೇತ್ರದಲ್ಲಿದೆ. ಸುಬ್ರಹ್ಮಣ್ಯ ಸ್ವಾಮಿ ವೃಶ್ಚಿಕ ಮಾಸದಲ್ಲಿ ಮತ್ತು ಶುದ್ಧ ಪಂಚಮಿ ತೀರ್ಥಸ್ನಾನ ನಡೆಯುತ್ತದೆ ಇದನ್ನು ಪಂಚಮಿತೀರ್ಥ ಸರೋವರವೆಂದು ಎಂದು ಕರೆಯುತ್ತಾರೆ.

ಋಷಿಮುನಿಗಳು ಪೂಜೆಯನ್ನು ಮಾಡುತ್ತಿದ್ದ ಈ ಕ್ಷೇತ್ರದಲ್ಲಿ ದುಷ್ಟರನ್ನು ಸಂಹಾರ ಮಾಡಿದ ಮಹಿಷಮರ್ದಿನಿ ಇಲ್ಲಿನ ಕ್ಷೇತ್ರದ ಜನತೆಗೆ ಕುಲದೇವರಾಗಿ , ಇಷ್ಟದೇವರಾಗಿ, ಕಷ್ಟಗಳನ್ನು ನಿವಾರಿಸುವ, ಬೇಡಿದ್ದನ್ನು ಕೊಡುವ, ಕಾಮ ಧೇನುವಾಗಿ ಮಹಿಷಮರ್ದಿನಿ ವರಗಳನ್ನು ಕರುಣಿಸುತ್ತಾಳೆ. ಇಲ್ಲಿಗೆ ಬಂದ ಭಕ್ತರಿಗೆ ಪರಿಪೂರ್ಣವಾಗಿ ಅನುಗ್ರಹವನ್ನು ನೀಡುತ್ತಿದ್ದಾಳೆ ಶ್ರೀ ತಾಯಿ ಮಹಿಷಾಸುರಮರ್ದಿನಿ.
ಚೈತ್ರ ಪೌರ್ಣಮಿಯ ದಿನ ಶ್ರೀ ಕ್ಷೇತ್ರದ ವಾರ್ಷಿಕ ಜಾತ್ರೆಯು ತುಂಬಾ ವಿಜೃಂಭಣೆಯಿಂದ ನಡೆಯುತ್ತದೆ. ಪ್ರತಿ ವರ್ಷ ಮಾರ್ಚ್ ತಿಂಗಳಿನಲ್ಲಿ ಶ್ರೀ ಕಲ್ಕುಡ ನವರಾತ್ರಿ ಉತ್ಸವಗಳು ನಡೆಯುತ್ತವೆ. ಪ್ರತಿ ದಿನ ಬೆಳಗ್ಗೆ ಎಂಟು ಮೂವತ್ತಕ್ಕೆ ಬೆಳಗಿನ ಪೂಜೆ, ಮಧ್ಯಾಹ್ನ 12ಕ್ಕೆ ಸರಿಯಾಗಿ ಮಹಾಪೂಜೆ, ಮಹಾ ಮಂಗಳಾರತಿ, ಮತ್ತು ರಾತ್ರಿ 8 ಗಂಟೆಗೆ ವಿಶೇಷವಾದ ರಾತ್ರಿ ಪೂಜೆಯನ್ನು ಕೂಡ ಮಾಡಲಾಗುತ್ತದೆ. ಇಲ್ಲಿಗೆ ಬರುವ ಸಾವಿರಾರು ಭಕ್ತಾದಿಗಳಿಗೆ ಪ್ರತಿದಿನ ಮಧ್ಯಾಹ್ನ ಅನ್ನ ದಾಸೋಹವನ್ನು ಕೂಡ ಮಾಡಲಾಗುತ್ತಿದೆ. ಹೀಗೆ ದೇವಸ್ಥಾನದ ಆಡಳಿತ ಮಂಡಳಿ ಸರ್ವತೋಮುಖ ಅಭಿವೃದ್ಧಿಯ ಬಗ್ಗೆ ಕಾರ್ಯ ಪ್ರವೃತ್ತವಾಗಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top