ಸಮಾಚಾರ

16 ನೇ ವಯಸ್ಸಿಗೆ ಬಾಯ್​ಫ್ರೆಂಡ್​ ನಿಂದಲೇ ಆತ್ಯಾಚಾರಕ್ಕೆ ಒಳಗಾದ ಸೂಪರ್ ಮಾಡಲ್ ನ ದುರಂತ ಕಥೆ

ಈ ಮಾಡೆಲ್ ಬೇರೆ ಯಾರು ಅಲ್ಲ ಅಮೆರಿಕನ್ ಆಥರ್, ನಟಿ , ಮಾಡೆಲ್, ಟೆಲಿವಿಷನ್ ಹೋಸ್ಟ್, ಹಾಗೂ ಪ್ರೊಡ್ಯೂಸರ್. ಸೂಪರ್ ಮಾಡಲ್ ಪದ್ಮ ಲಕ್ಷ್ಮೀ,ಪದ್ಮ ಲಕ್ಷ್ಮಿ ಹುಟ್ಟಿದು ತಮಿಳು ನಾಡಿನಲ್ಲಿ ಬೆಳೆದದ್ದು ಅಮೇರಿಕಾದಲ್ಲಿ ಪದ್ಮ ಲಕ್ಷ್ಮಿ ಸೆಪ್ಟೆಂಬರ್ 1, 1970 ರಲ್ಲಿ ಜನಿಸಿದ್ದರು .”ಮೊದಲ ಬಾರಿ ಪದ್ಮ ಲಕ್ಷ್ಮೀ ಶೋಷಣೆಗೆ ಒಳಗಾಗಿದ್ದು ಅವರ 7 ನೇ ವಯಸಿನಲ್ಲಿ ,ಲಕ್ಷ್ಮಿ ಪದ್ಮ ರವರ ಮಲ ತಂದೆಯ ಸಂಬಂಧಿಕರಿಂದ ಅತ್ಯಾಚಾರಕ್ಕೆ ಒಳಗಾದರು ಈ ಕುರಿತು ತನ್ನ ತಾಯಿ ಹಾಗೂ ಮಲ ತಂದೆಯ ಹತ್ತಿರ ಹೇಳಿಕೊಂಡರು ಆದರೆ ಅವರ ತಾಯಿ ಈ ವಿಷಯ ಕೇಳಿ ಮಗಳಾದ ಪದ್ಮ ಲಕ್ಷ್ಮಿಯವರನ್ನು ತಮಿಳುನಾಡಿನ ತನ್ನ ಅಜ್ಜಿಯ ಮನೆಗೆ ಕಳುಯಿಸಿದ್ದರು.

 

 

 

ಮತ್ತೆ ಮರಳಿ ಅಮೆರಿಕಾಗೆ ಹೋದ ಪದ್ಮ ಲಕ್ಷ್ಮಿ ಮತ್ತೆ 16 ನೇ ವಯಸ್ಸಿನಲ್ಲಿಅತ್ಯಾಚಾರಕ್ಕೆ ಒಳಪಡುತ್ತಾರೆ ಇನ್ನೊಂದು ಅಘಾತಕಾರಿ ವಿಷ್ಯ ಎಂದು ಅಂದ್ರೆ ಆ ಅತ್ಯಾಚಾರಕ್ಕೆ ಮಾಡಿದ್ದೂ ಆಕೆಯ 23 ವರ್ಷದ ಬಾಯ್ ಫ್ರೆಂಡ್, ಅವರು ತಮ್ಮ ಗೆಳೆಯನ ಅಪಾರ್ಟ್​ ಮೆಂಟ್ ನಲ್ಲಿ ಒಂದು ರಾತ್ರಿ ಅವರ ಸ್ನೇಹಿತ ತನ್ನ16 ವರ್ಷದ ಗೆಳತಿಯ ಮೇಲೆ (ಪದ್ಮ ಲಕ್ಷ್ಮೀ) ಈ ಹೀನ ಕೃತ್ಯವನ್ನು ಎಸಗಿದ್ದ ಬೆಳಗ್ಗೆ ಏಳುವಾಗ ಅವರ (ಪದ್ಮ ಲಕ್ಷ್ಮೀ) ಅಪಾರ ಪ್ರಮಾಣದಲ್ಲಿ ನೋವು ಕಾಣಿಸಿಕೊಂಡಿತ್ತು. ಆಗ ಅವರ ಗೆಳೆಯನನ್ನು ಮುಗ್ಧವಾಗಿ, ಮುಕ್ತವಾಗಿ ಕೇಳಿದ್ದಾರೆ.” ನೀ ಏನು ಮಾಡಿದೆ ಅಂತಾ”. ಆಗ ಪದ್ಮ ಲಕ್ಷ್ಮೀ ಅವರ ಗೆಳೆಯ ಈ ನೋವು ನಿನಗೆ ಸ್ವಲ್ಪ ಹೊತ್ತು ಮಾತ್ರ ಕಾಡುತ್ತದೆ ಅಂಥಾ ಅಷ್ಟೇ ಎಂದು ಹೇಳಿದ್ದಾನೆ. ಏನೂ ಅರಿಯದ ಆ ವಯಸ್ಸಿನಲ್ಲಿ ಪದ್ಮ ಲಕ್ಷ್ಮಿ ಅತ್ಯಾಚಾರಕ್ಕೆ ಒಳಗಾಗಿದ್ದರು. ತಾನು ಅತ್ಯಾಚಾರವಾಗಿದ್ದೇನೆ ಎಂಬ ಸಣ್ಣ ಕುರುಹು ಕೂಡ ಆಕೆಗಿರಲಿಲ್ಲ. ಈ ಪರಿಸ್ಥಿಯನ್ನು, ಅಂದಿನ ತನ್ನ ತೊಳಲಾಟವನ್ನು ಈಗ ಹಂಚಿಕೊಂಡಿದ್ದಾರೆ ಈ ಮಾಡೆಲ್​.

ಈ ಎಲ್ಲ ಅನ್ಯಾಯದ ನಡುವೆ ಛಲ ಬಿಡ್ಲಿಲ್ಲ ಪದ್ಮ ಲಕ್ಷ್ಮಿ ನಂತರ 21 ನೇ ವಯಸಿನಲ್ಲಿ ಮಾಡೆಲಿಂಗ್ ವೃತ್ತಿ ಶುರು ಮಾಡುತ್ತಾರೆ ,1999 ಅವ್ರು ಬರೆದ ಮೊದಲ ಬುಕ್ ಗೆ ಅವಾರ್ಡ್ ಪಡೆಯುತ್ತಾರೆ ,ಇವರು ಅನೇಕ ಸಿನಿಮಾ ಗಳಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ ಏಪ್ರಿಲ್ 17 , 2004, ರಲ್ಲಿ ಲಕ್ಷ್ಮಿ ಸಲ್ಮಾನ್ ಋಷದ್ಯ್ ಎಂಬ ಬರಹಗಾರನನ್ನು ಮದುವೆ ಮಾಡಿಕೊಳ್ಳುತ್ತಾರೆ ,ಜೀವನದಲ್ಲಿ ತುಂಬಾ ನೊಂದಿರುವ ಲಕ್ಷ್ಮಿ ಈಗ ಅನೇಕ NGO ಗಳನ್ನೂ ನಡೆಸುತ್ತಿದ್ದು ಸಾಮಾಜಿಕ ಕೆಲಸಗಳಲ್ಲಿ ಅವರನ್ನು ತೊಡಗಿಸಿಕೊಂಡಿದ್ದಾರೆ ಎಷ್ಟೋ ಹೆಣ್ಣು ಮಕ್ಕಳಿಗೆ ದಾರಿ ದೀಪವಾಗಿದ್ದಾರೆ

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top