ದೇವರು

ಪಿತೃಪಕ್ಷ ಮಾಸ ಆರಂಭವಾಗಿದೆ,ಇದರ ಆಚರಣೆ ಹೇಗಿರಬೇಕು, ಏನೆಲ್ಲ ವಿಧಿ ವಿಧಾನಗಳನ್ನು ತಪ್ಪದೆ ಪಾಲಿಸಬೇಕು ಗೊತ್ತಾ

ನೆನ್ನೆಯಿಂದ ಪಿತೃಪಕ್ಷ ಆರಂಭವಾಗಿದೆ. ಇಂದಿನಿಂದ ಇನ್ನು 15 ದಿನಗಳವರೆಗೆ ಪಿತೃಪಕ್ಷದ ಮಹಾಲಯ ಅಮಾವಾಸ್ಯೆಯವರೆಗೆ ಇರುತ್ತದೆ.ಪಿತೃಪಕ್ಷದ ಮಾಸ ಆರಂಭವಾಗಿದೆ. ಇದರ ಆಚರಣೆ ಹೇಗಿರಬೇಕು ? ಏನೆಲ್ಲ ವಿಧಿ ವಿಧಾನಗಳನ್ನು ಪಾಲಿಸಬೇಕು ? ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಪಿತೃ ಪಕ್ಷ ನಮಗೆ ವರ್ಷಕ್ಕೊಮ್ಮೆ ಬರುವುದು. ಪಿತೃಗಳಿಗೆ ನಮನವನ್ನು ಸಲ್ಲಿಸುವ ಮಾಸವೇ ಪಿತೃಪಕ್ಷದ ಮಾಸ.ಈ ನಮನ ಸಲ್ಲಿಸುವುದು ಪಿತೃಪಕ್ಷದ ಮಾಸದಲ್ಲಿ ಪ್ರತಿಯೊಬ್ಬರ ಕರ್ತವ್ಯವಾಗಿದೆ. ಇದನ್ನು ಈ ನಕ್ಷತ್ರ, ರಾಶಿ, ಇವರೇ ಮಾಡಬೇಕು ? ಎಂಬುದು ಇಲ್ಲ.
ಪ್ರತಿಯೊಬ್ಬರ ಮನೆಯಲ್ಲಿಯೂ ಸಹ ಪಿತೃ, ಪಿತಾಮಹ ಮತ್ತು ಪ್ರಪಿತಾಮಹ ಅಂದರೆ ಮೂರು ತಲೆ ಮಾರುಗಳವರಿಗೆ ನಾವು ನಮನವನ್ನು ಸಲ್ಲಿಸಬೇಕು. ಇಂದು ನಾವು ಯಾವುದೇ ಕಾರ್ಯಗಳನ್ನು ಮಾಡಿದಾಗ ನಾವು ತರ್ಪಣಾದಿಗಳನ್ನು, ಪಿಂಡ ಪ್ರಧಾನಗಳನ್ನು ಮಾಡುವ ಸಮಯದಲ್ಲಿ ಪಿತೃ ಅಥವಾ ಪಿತಾಮಹ ಅಥವಾ ಪ್ರಪಿತಾಮಹ ಇವರಿಗೆ ಮೂರು ಜನಕ್ಕೂ ಕೂಡ ನಾವು ನಮನವನ್ನು ಸಲ್ಲಿಸಬೇಕು.
ಪಿತೃ ಪಕ್ಷದ ಈ ಮಾಸದಲ್ಲಿ ನಾವು ಆದಷ್ಟು ವ್ಯವಸ್ಥಿತವಾಗಿ ವರ್ಷವಿಡಿ ದೊಡ್ಡವರ ಫೋಟೋಗಳಿಗೆ ನಮಸ್ಕಾರ ಹಾಕುತ್ತೀರೋ ? ಬಿಡುತ್ತೀರೋ ? ಗೊತ್ತಿಲ್ಲ. ಆದರೆ ಈ ಮಾಸದಲ್ಲಿ ಪ್ರತಿನಿತ್ಯ ಬೆಳಗ್ಗೆ ಎದ್ದ ತಕ್ಷಣ ನಿಮ್ಮನ್ನು ಅಗಲಿರುವಂತಹ ಪಿತೃ ದೇವತೆಗಳಿಗೆ ನಮಸ್ಕಾರವನ್ನು ಮಾಡಬೇಕು.

 

 

 

ಮೊದಲು ಈ ಕೆಲಸವನ್ನು ಮಾಡುವುದರಿಂದ ಅವರ ಅನುಗ್ರಹ ನಮಗೆ ಲಭ್ಯವಾಗುತ್ತದೆ. ಪಿತೃ ಪಕ್ಷದಲ್ಲಿ ವ್ಯವಸ್ಥಿತವಾಗಿ ವರ್ಷಕ್ಕೆ ಒಮ್ಮೆ ಅಡಿಗೆಯನ್ನು ಮಾಡಿ ಪಾಯಸ, ಕಜ್ಜಾಯ, ಎಲ್ಲವನ್ನು ಮಾಡಿ ಕಾಗೆ ಮೊದಲು ಆಹಾರವನ್ನು ಸ್ಪರ್ಷ ಮಾಡಬೇಕು ಎಂದು ಕಾದು ನಿಂತಿರುತ್ತೇವೆ. ಪ್ರತಿನಿತ್ಯ ನಾವು ಕೂಡ ಊಟ ಮಾಡುವುದಕ್ಕಿಂತ ಮುಂಚೆ ಮೂರು ಮುಷ್ಟಿಯ ಹಿಡಿ ಅನ್ನವನ್ನು ಈ ಪಿತೃಪಕ್ಷ ಮಾಸದಲ್ಲಿ ಕಾಗೆಗಳಿಗೆ ಹಾಕಿ ಬನ್ನಿ. ಆಗ ಪಿತೃ ದೇವತೆಗಳ ಅನುಗ್ರಹ ಪ್ರಾಪ್ತಿಯಾಗುತ್ತದೆ. ನೀವು ಏನನ್ನಾದರೂ ನಿಯಮ ಬದ್ಧವಾಗಿ ಪಿತೃ ದೇವತೆಗಳ ಕಾರ್ಯವನ್ನು ಮಾಡಬೇಕು.

ಒಂದು ಪಕ್ಷ ಎಂದು ನಾವು ಹೇಳುತ್ತೇವೆ.ಅಂದರೆ 15 ದಿನಗಳಿಗೆ ಒಂದು ಪಕ್ಷ ಬರುತ್ತದೆ. ಶುಕ್ಲ ಪಕ್ಷ ಮುಗಿದಿದೆ ಮತ್ತು ಈಗ ಕೃಷ್ಣ ಪಕ್ಷ. ಇವತ್ತಿನಿಂದ ಕೃಷ್ಣಪಕ್ಷ ಪ್ರಾರಂಭವಾಗಿದೆ. ಕೃಷ್ಣ ಪಕ್ಷದಲ್ಲಿ 15 ತಿಥಿಗಳು ನಮಗೆ ದೊರೆಯುತ್ತವೆ.ಈ 15 ತಿಥಿಯಲ್ಲಿ ನಮ್ಮ ಪೂರ್ವಿಕರು ಯಾವ ತಿಥಿಯಲ್ಲಿ ನಿಧಾನರಾಗಿರುತ್ತಾರೋ ? ಅದರಲ್ಲಿ ಯಾವುದಾದರೂ ಒಂದು ದಿನ ನಿಧಾನವಾಗಿರುತ್ತಾರೆ. ಅಂತಹ ಒಂದು ತಿಥಿಯ ದಿನ ವ್ಯವಸ್ಥಿತವಾಗಿ ನಿಮ್ಮ ಪೂರ್ವಿಕರ ಹೆಸರಲ್ಲಿ ತರ್ಪಣ, ಪಿಂಡ ಪ್ರದಾನ, ದಾನ, ಧರ್ಮಗಳನ್ನು ಮಾಡಿ, ನಿಮಗೆ ಏನು ಗೊತ್ತಿಲ್ಲ ? ಎಂದರೆ ಅದಕ್ಕೋಸ್ಕರವೇ ಮಹಾಲಯ ಅಮಾವಾಸ್ಯೆ ಎನ್ನುವುದು ಇದೆ. ಆ ಮಹಾಲಯ ಅಮಾವಾಸ್ಯೆಯ ದಿನದಂದು ನಿಮಗೆ ತಿಥಿ ಗೊತ್ತಿಲ್ಲ ಎಂದರೆ ಆ ಮಹಾಲಯ ಅಮಾವಾಸ್ಯೆಯ ದಿನ ತರ್ಪಣಗಳನ್ನು ಮಾಡಿ, ಆದಷ್ಟು ದಾನ, ಧರ್ಮಗಳನ್ನು ಮಾಡಿ ಎಲ್ಲರಿಗೂ ಕೂಡ ಪಿತೃ ದೇವತೆಗಳ ಅನುಗ್ರಹ ಪ್ರಾಪ್ತಿಯಾಗಲಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top