ಆರೋಗ್ಯ

ಮುಖದ ಮೊಡವೆ , ಕಪ್ಪು ಕಲೆ ಎಲ್ಲಾ ಮುಖದ ಸೌಂದರ್ಯ ಸಮಸ್ಯೆಗಳಿಗೆ ಪುದಿನಾ ಒಂದೇ ಸಾಕು .

ಸೌಂದರ್ಯವರ್ಧಕ ಪುದೀನಾ.

ಪುದೀನಾ ಇದು ಸುವಾಸನೆ ಭರಿತ ಸೊಪ್ಪು .ಇದನ್ನು ನಾವು ಚಟ್ನಿ,ಪುಲಾವ, ಪುದೀನಾ ಬಾತ್ ಹೀಗೆ ಅಡುಗೆಗೆ ಉಪಯೋಗಿಸುತ್ತೇವೆ ಮತ್ತು ಇದು ಗಂಟಲು ಉರಿ,ಕೆಮ್ಮಿಗೂ ಕೂಡ ಒಳ್ಳೆಯದು.ಅಷ್ಟೇ ಅಲ್ಲದೇ ನಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವುದಕ್ಕೂ ಇದು ಸಹಕಾರಿಯಾಗಿದೆ. ಅದು ಹೇಗೆ ಎಂದು ಈ ಕೆಳಗೆ ನೋಡಿಪುದೀನಾ ಸೊಪ್ಪಿನ ರಸಕ್ಕೆ ಸ್ವಲ್ಪ ಅರಿಶಿನ ಪುಡಿ ಹಾಗೂ ನಿಂಬೆರಸ ಬೆರೆಸಿ ಮುಖಕ್ಕೆ ಹಚ್ಚಿದರೆ ಮೊಡವೆಗಳು ನಿವಾರಣೆಯಾಗುತ್ತವೆ. ಪುದೀನಾ ಸೊಪ್ಪಿನ ರಸ 4 ಚಮಚ ,ಒಂದು ಚಮಚ ನಿಂಬೆರಸ ಹಾಗೂ ಒಂದು ಹಿಡಿಯಷ್ಟು ಹೆಸರು ಹಿಟ್ಟು ಈ ಮುರನ್ನೂ ಸೇರಿಸಿ ಮುಖಕ್ಕೆ ಲೇಪಿಸಿ 15 ನಿಮಿಷಗಳ ನಂತರ ಮುಖ ತೊಳೆಯಬೇಕು. ತದನಂತರ ಮಂಜುಗೆಡ್ಡೆ ತುಂಡಿನಿಂದ ಮುಖವನ್ನು ಮಾಲಿಷ ಮಾಡಬೇಕು. ಹೀಗೆ ಮಾಡಿದರೆ ಮೊಡವೆಗಳು ನಿವಾರಣೆಯಾಗುತ್ತವೆ.

 

 

 

ಪುದೀನಾ ಎಲೆಗಳನ್ನು ಅರೆದು ಕಡಲೆ ಹಿಟ್ಟಿನೊಂದಿಗೆ ಸೇರಿಸಿ ಫೇಸ್ ಪ್ಯಾಕ್ ಮಾಡಿಕೊಂಡು ಮುಖಕ್ಕೆ ಲೇಪಿಸಬೇಕು. ಅರ್ಧ ಗಂಟೆಯ ನಂತರ ತೊಳೆಯಬೇಕು. ಇದರಿಂದ ಮುಖ ಕಾಂತಿಯುತವಾಗುತ್ತದೆ.ಒಂದು ಚಮಚ ಪುದೀನಾ ರಸ, ಎಂಟು ಚಮಚ ಜೇನುತುಪ್ಪ ಬೆರೆಸಿ ಮುಖಕ್ಕೆ ಲೇಪಿಸಿ,ಅರ್ಧ ಗಂಟೆಯ ನಂತರ ತೊಳೆಯಬೇಕು. ಇದರಿಂದ ಮುಖದ ತ್ವಚೆಗೆ ಬ್ಲೀಚ್ ಮಾಡಿದಂತಹ ಪರಿಣಾಮ ಉಂಟಾಗುತ್ತದೆ.ಹೀಗೆ 15 ದಿನಗಳಿಗೊಮ್ಮೆ ಮಾಡಿದರೆ ಚರ್ಮದ ಹೊಳಪು ಹೆಚ್ಚುತ್ತದೆ.ಪುದೀನಾ ಎಲೆಗಳನ್ನು ಟೊಮ್ಯಾಟೊ ರಸದ ಜೊತೆಗೆ ಹಚ್ಚಿದರೆ ಮೊಡವೆ,ಕಪ್ಪು ಕಲೆಗಳು ನಿವಾರಣೆಯಾಗುತ್ತವೆ.ವಾರಕ್ಕೊಮ್ಮೆ ಮುಖಕ್ಕೆ ಪುದೀನಾ ರಸ ಹಚ್ಚುತ್ತಿದ್ದರೆ ಮೊಡವೆ ಏಳುವುದಿಲ್ಲ.ಪುದೀನಾ ರಸ ಹಾಗೂ ಜೇನುತುಪ್ಪ ಬೆರೆಸಿ ಮುಖದ ಕಲೆಗಳಿಗೆ ನಿತ್ಯವೂ ಹಚ್ಚಿ ಮಾಲಿಷ ಮಾಡುತ್ತಿದ್ದರೆ ಕಲೆಗಳು ನಿವಾರಣೆಯಾಗುತ್ತವೆ.ಪುದೀನಾ ಎಲೆಗಳನ್ನು ಜಜ್ಜಿ ಕುದಿಯುವ ನೀರಿಗೆ ಹಾಕಿ ಅದರ ಹಬೆಯನ್ನು ಮುಖಕ್ಕೆ ತೆಗೆದುಕೊಳ್ಳಬೇಕು.

ಇದರಿಂದ ಚರ್ಮದ ನೆರಿಗೆಗಳು ಕಡಿಮೆಯಾಗುತ್ತವೆ. ಬಿಳಿ ಮತ್ತು ಕಪ್ಪು ಕಲೆಗಳು ಹೋಗುತ್ತವೆ.ಪುದೀನಾ ರಸಕ್ಕೆ ಚಿಟಕಿ ಉಪ್ಪು ಬೆರೆಸಿ ಹಲ್ಲು ವಸಡುಗಳಿಗೆ ತ್ತಿಕ್ಕಿದರೆ ಹಲ್ಲುಗಳು ಹೊಳೆಯುತ್ತವೆ ಹಾಗೂ ಹಲ್ಲು-ವಸಡುಗಳ ಸೌಂದರ್ಯ ಹೆಚ್ಚುತ್ತದೆ.ಪುದೀನಾ ರಸ ಮತ್ತು ಹರಿಶಿನ ಪುಡಿಯನ್ನು ಬೆರೆಸಿ ಆಲೂಗೆಡ್ಡೆಯೊಂದಿಗೆ ಕಿವುಚಿ ಬೆರೆಸಬೇಕು.ಇದನ್ನು ಕುತ್ತಿಗೆಗೆ ಲೇಪಿಸುವುದರಿಂದ ಕುತ್ತಿಗೆಯ ಕಪ್ಪು ಬಣ್ಣ ತಿಳಿಯಾಗುತ್ತದೆ.ವಾರಕ್ಕೊಮ್ಮೆ ಕೈ-ಕಾಲುಗಳಿಗೆ ಪುದೀನಾ ರಸ ಮತ್ತು ಹರಿಶಿನ ಪುಡಿ ಬೆರೆಸಿ ಲೇಪಿಸಿದರೆ ಕೈ-ಕಾಲುಗಳ ಚರ್ಮ ಮೃದುವಾಗುತ್ತದೆ;ಕಾಂತಿ ಹೆಚ್ಚುತ್ತದೆ.

 

 

 

ಚಹಾದ ಡಿಕಾಕ್ಷನ್ ನಲ್ಲಿ ಪುದೀನಾ ಎಲೆಗಳನ್ನು ಹಾಕಿ ಕುದಿಸಬೇಕು;ಅದನ್ನು ಆರಿಸಿ ,ಸೋಸಿ,ಈ ಕಷಾಯದಿಂದ ಮುಖ ತೊಳೆದರೆ ಜಿಡ್ಡಾಗಿರುವ ಮುಖದ ಚರ್ಮದ ಜಿಡ್ಡು ಹೋಗುತ್ತದೆ.ಚರ್ಮ ಹೊಳೆಯುತ್ತದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top