ಸಮಾಚಾರ

ರಮ್ಯಾ ವಿರುದ್ಧ 10,000 ಕೋಟಿ ರೂ ಮಾನನಷ್ಟ ಮೊಕದ್ದಮೆ ದಾಖಲು- ಠೇವಣಿಗಾಗಿ ಜನರ ಮೊರೆ.

ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷದ ಪ್ರಭಾವ ಹೊಂದುವ ಮೂಲಕ ಆನ್‌ಲೈನ್ ವಿಭಾಗವನ್ನು ನಿರ್ವಹಿಸುತ್ತಿರುವಾಕೆ ರಮ್ಯಾ.. ಆಗ್ಗಾಗ್ಗೆ ಪ್ರಧಾನಿ ಮೋದಿಯನ್ನು ಅಣಕಿಸದೆ ಇದ್ದರೇ ರಮ್ಯಾಗೆ ನೆಮ್ಮದಿಯಾಗೊಲ್ಲವಾ? ಹೀಗೊಂದು ಪ್ರಶ್ನೆ ಒಂದು ಕಾಲದಲ್ಲಿ ಅವರನ್ನು ಆರಾಧಿಸುತ್ತಿದ್ದ ಅಭಿಮಾನಿಗಳನ್ನು ಕಾಡುತ್ತಿದ್ದರೆ ಅಚ್ಚರಿಯೇನಿಲ್ಲ.ಪದೇ ಪದೇ ಪ್ರಧಾನಿ ಮೋದಿಯವರನ್ನು ಕೆಣಕುವಂತ ಮತ್ತು ಅವರನ್ನು ಅಣಕಿಸುವಂತ ಅವಹೇಳನಕಾರಿ ಟ್ವೀಟ್ ಮಾಡುವುದೇ ತನ್ನ ಕಸುಬನ್ನಾಗಿಸಿಕೊಂಡಿರುವ ರಮ್ಯಾ ಇದೀಗ ಮತ್ತೊಮ್ಮೆ ಮೋದಿಯನ್ನು ನೇರಾ ನೇರಾವಾಗಿ ಅಣಕಿಸಿ ಸಂಕಷ್ಟಕ್ಕೆ ಸಿಲುಕಿದ್ದಾರೆ.

 

 

ರಫೆಲ್​ ಒಪ್ಪಂದಕ್ಕೆ ಸಂಬಂಧಪಟ್ಟಂತೆ ಪ್ರಧಾನಿ ಮೋದಿಯವರನ್ನು ವ್ಯಂಗ್ಯಮಾಡುವಂತೆ ಎಡಿಟ್​ ಮಾಡಿದ ಫೋಟೋವನ್ನು ಟ್ವೀಟ್​ ಮಾಡಿದ್ದರು. “ಮೋದಿಯವರು ತಮ್ಮ ಮೇಣದ ಪ್ರತಿಮೆಯ ಹಣೆಯ ಮೇಲೆ ಚೋರ್​(ಕಳ್ಳ) ಎಂದು ಬರೆಯುತ್ತಿರುವಂತೆ ಎಡಿಟ್ ಮಾಡಿದ ಫೋಟೋಕ್ಕೆ, #ChorPMChupHai ಎಂಬ ಹ್ಯಾಶ್​ ಟ್ಯಾಗ್​ ಕೊಟ್ಟು ಟ್ವೀಟ್​ ಮಾಡಿದ್ದರು.. ಈ ಟ್ವೀಟ್ ನೋಡಿ ರಮ್ಯಾ ವಿರುದ್ಧ ಉರಿದು ಬೀಳುತ್ತಿರುವ ಮೋದಿ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ..

ಈ ಹಿನ್ನಲೆಯಲ್ಲಿ ದೆಹಲಿ ಮೂಲದ ವಕೀಲ ವಿಭೋರ್‌ ಆನಂದ್‌ ಎಂಬುವವರು ರಮ್ಯಾ ವಿರುದ್ಧ 10 ಸಾವಿರ ಕೋಟಿ ರೂಪಾಯಿಯ ಮಾನನಷ್ಟ ಮೊಕದ್ದಮೆ ಹೂಡಲು ಮುಂದಾಗಿದ್ದಾರೆ. ಯಾವುದೇ ಮಾನನಷ್ಟ ಮೊಕದ್ದಮ್ಮೆ ಹೂಡುವ ಮುನ್ನ ಕೋರ್ಟ್‌ಗೆ ಠೇವಣಿ ಕಟ್ಟಬೇಕು. ಇದೀಗ ೧೦ ಸಾವಿರ ಕೋಟಿಗೆ ಶೇ.೧ರಷ್ಟು ಹಣವನ್ನು ಕೋರ್ಟ್ ಗೆ ಕಟ್ಟಬೇಕಾಗಿದೆ. ಶೇಕಡಾ 1% ಅಂದ್ರೆ 100 ಕೋಟಿಯಾಗುತ್ತದೆ ಅದಕ್ಕೆ ಏನು ಮಾಡುತ್ತೀರಿ ಎಂಬ ಪ್ರಶ್ನೆಗೆ ‘ಜನರಿದ್ದಾರೆ. ಸಹಾಯ ಮಾಡುತ್ತಾರೆ’ ಎಂದು ತಿಳಿಸಿದ್ದು ಆನ್​​ಲೈನ್​​ ಕ್ರೌಡ್​​ಫಂಡಿಂಗ್​ ಮೂಲಕ ಹಣ ಸಂಗ್ರಹಕ್ಕೆ ಮುಂದಾಗಿದ್ದಾರೆ

ರಮ್ಯಾ ವಿರುದ್ಧ ದೇಶದ್ರೋಹ ಪ್ರಕರಣ:
ಕೇವಲ ಮಾನನಷ್ಟ ಮೊಕದ್ದಮೆ ಮಾತ್ರವಲ್ಲದೇ ಪ್ರಧಾನಿ ನರೇಂದ್ರ ಮೋದಿಯನ್ನು ‘ಕಳ್ಳ’ ಎಂಬಂತೆ ಬಿಂಬಿಸದಕ್ಕಾಗಿ ರಮ್ಯಾ ವಿರುದ್ಧ ದೇಶದ್ರೋಹದ ಆರೋಪದಡಿ ಉತ್ತರಪ್ರದೇಶ ಪೊಲೀಸರು ಕೇಸ್​ ದಾಖಲಿಸಿಕೊಂಡಿದ್ದಾರೆ. ಲಖನೌ ಮೂಲದ ವಕೀಲ ಮತ್ತು ಸಾಮಾಜಿಕ ಕಾರ್ಯಕರ್ತ ಸೈಯದ್‌ ರಿಜ್ವಾನ್‌ ಅಹ್ಮದ್‌ ಎಂಬುವವರು ಮಂಗಳವಾರ ದೂರು ದಾಖಸಿದ್ದರು. ರಮ್ಯಾ ವಿರುದ್ಧ ಉತ್ತರಪ್ರದೇಶದ ಗೋಮತಿನಗರ ಪೊಲೀಸ್‌ ಠಾಣೆಯಲ್ಲಿ ಸೆಕ್ಷನ್‌ 67 ಮಾಹಿತಿ ತಂತ್ರಜ್ಞಾನ ತಿದ್ದುಪಡಿ ಕಾಯ್ದೆ, 2008 ಮತ್ತು ಸೆಕ್ಷನ್‌ 124ಎ(ದೇಶದ್ರೋಹ) ಅಡಿ ಎಫ್ಐಆರ್ ದಾಖಲಿಸಲಾಗಿದೆ.

ಆದರೆ ಪ್ರಜಾಪ್ರಭುತ್ವದಲ್ಲಿ ಪ್ರಧಾನಿಯನ್ನೇ ಆಗಲಿ ಮುಖ್ಯಮಂತ್ರಿಗಳನ್ನೇ ಆಗಲಿ ಟೀಕಿಸುವುದು ದೇಶದ್ರೋಹ ಹೇಗಾಗುತ್ತದೆ ಎಂಬ ಪ್ರಜ್ಞಾವಂತ ಚರ್ಚೆ ಕೂಡ ಆರಂಭವಾಗಿದೆ. ಇಂಥಾದ್ದರ ಮೂಲಕ ಪ್ರಧಾನಿ ಪ್ರಶ್ನಾತೀತ ಎಂಬ ಸರ್ವಾಧಿಕಾರ ಹೇರಲಾಗುತ್ತಿದೆ ಎಂಬ ಅಭಿಪ್ರಾಯವೂ ಕೇಳಿ ಬರುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top