ಮನೋರಂಜನೆ

ದೇಶದ್ರೋಹ ಪ್ರಕರಣ ಜಡಿದರೂ ಜಗ್ಗದ ರಮ್ಯಾ- ಮತ್ತೆ ‘ಕಳ್ಳ ಪ್ರಧಾನಿ’ ಎಂದ ಮಾಜಿ ಸಂಸದೆ.

ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷದ ಪ್ರಭಾವ ಹೊಂದುವ ಮೂಲಕ ಆನ್‌ಲೈನ್ ವಿಭಾಗವನ್ನು ನಿರ್ವಹಿಸುತ್ತಿರುವಾಕೆ ರಮ್ಯಾ.. ಆಗ್ಗಾಗ್ಗೆ ಪ್ರಧಾನಿ ಮೋದಿಯನ್ನು ಅಣಕಿಸದೆ ಇದ್ದರೇ ರಮ್ಯಾಗೆ ನೆಮ್ಮದಿಯಾಗೊಲ್ಲವಾ? ಹೀಗೊಂದು ಪ್ರಶ್ನೆ ಒಂದು ಕಾಲದಲ್ಲಿ ಅವರನ್ನು ಆರಾಧಿಸುತ್ತಿದ್ದ ಅಭಿಮಾನಿಗಳನ್ನು ಕಾಡುತ್ತಿದ್ದರೆ ಅಚ್ಚರಿಯೇನಿಲ್ಲ.ಪದೇ ಪದೇ ಪ್ರಧಾನಿ ಮೋದಿಯವರನ್ನು ಕೆಣಕುವಂತ ಮತ್ತು ಅವರನ್ನು ಅಣಕಿಸುವಂತ ಅವಹೇಳನಕಾರಿ ಟ್ವೀಟ್ ಮಾಡುವುದೇ ತನ್ನ ಕಸುಬನ್ನಾಗಿಸಿಕೊಂಡಿರುವ ರಮ್ಯಾ ಇದೀಗ ಮತ್ತೊಮ್ಮೆ ಮೋದಿಯನ್ನು ನೇರಾ ನೇರಾವಾಗಿ ಅಣಕಿಸುತ್ತಿದ್ದಾರೆ.

 

 

ರಫೆಲ್​ ಒಪ್ಪಂದಕ್ಕೆ ಸಂಬಂಧಪಟ್ಟಂತೆ ಪ್ರಧಾನಿ ಮೋದಿಯವರನ್ನು ವ್ಯಂಗ್ಯಮಾಡುವಂತೆ ಎಡಿಟ್​ ಮಾಡಿದ ಫೋಟೋವನ್ನು ಟ್ವೀಟ್​ ಮಾಡಿದ್ದರು. “ಮೋದಿಯವರು ತಮ್ಮ ಮೇಣದ ಪ್ರತಿಮೆಯ ಹಣೆಯ ಮೇಲೆ ಚೋರ್​(ಕಳ್ಳ) ಎಂದು ಬರೆಯುತ್ತಿರುವಂತೆ ಎಡಿಟ್ ಮಾಡಿದ ಫೋಟೋಕ್ಕೆ, #ChorPMChupHai ಎಂಬ ಹ್ಯಾಶ್​ ಟ್ಯಾಗ್​ ಕೊಟ್ಟು ಟ್ವೀಟ್​ ಮಾಡಿದ್ದರು.. ಈ ಟ್ವೀಟ್ ನೋಡಿ ರಮ್ಯಾ ವಿರುದ್ಧ ಉರಿದು ಬೀಳುತ್ತಿರುವ ಮೋದಿ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ..

ಈ ಬಗ್ಗೆ ರಮ್ಯಾ ವಿರುದ್ಧ ದೇಶದ್ರೋಹ ಪ್ರಕರಣ ಸೇರಿದಂತೆ ಅನೇಕ ಪ್ರಕರಣಗಳು ದಾಖಲಾಗಿದ್ದವು.. ಹತ್ತು ಸಾವಿರ ಕೋಟಿ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ವ್ಯಕ್ತಿಯೊಬ್ಬರು ಹೇಳಿದ್ದರು., ಆದರೆ ಈ ಯಾವುದಕ್ಕೂ ಜಗ್ಗದ ರಮ್ಯಾ ಇದೀಗ ಮೋದಿಯನ್ನು ಮತ್ತೊಮ್ಮೆ ‘ಕಳ್ಳ’ ಎಂದಿದ್ದಾರೆ.

 

 

“ನನ್ನ ಟ್ವೀಟ್ ಇಷ್ಟ ಪಟ್ಟು ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದಗಳು. ನಾನು ಏನು ಅಂತಾ ಹೇಳಲಿ? ಮುಂದೆ ಕೂಡ ಇದೇ ಶೈಲಿಯಲ್ಲಿ ಟ್ವೀಟ್​ ಮುಂದುವರೆಸುತ್ತೇನೆ.. ಭಾರತದಲ್ಲಿ ದೇಶದ್ರೋಹದ ಕಾನೂನಿಗೆ ಮೌಲ್ಯ ಕಡಿಮೆಯಾಗುತ್ತಿದೆ, ದೇಶದ್ರೋಹ ಕಾನೂನನ್ನು ಬೇಕಾಬಿಟ್ಟಿ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ..” ಎಂದು ಟ್ವೀಟ್ ಮಾಡಿರುವ ರಮ್ಯಾಅದರ ಜೊತೆಗೆ ಪಿಎಂ ಚೋರ್​ ಹೇ (ಪ್ರಧಾನಿ ಕಳ್ಳ) ಎಂಬ ಹ್ಯಾಶ್​​​ಟ್ಯಾಗ್​ ಹಾಕಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top