ಭವಿಷ್ಯ

ನೀವು ಹಣಕಾಸಿನ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ,ನಿಮ್ಮ ಮನೆಯಲ್ಲಿರುವ ಕುಂಕುಮದ ಭರಣಿಗೆ ಇದೊಂದನ್ನು ಹಾಕಿ ನೋಡಿ.ನಿಮ್ಮ ಸಮಸ್ಯೆ ಪಟ್ ಅಂತ ಹೋಗುತ್ತೆ

ನೀವು ಹಣಕ್ಕೆ ಸಂಬಂಧಿಸಿದಂತೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ನಿಮ್ಮ ಮನೆಯಲ್ಲಿರುವ ಕುಂಕುಮದ ಭರಣಿಗೆ ಇದೊಂದನ್ನು ಹಾಕಿ ನೋಡಿ.
ನಿಮ್ಮ ದೇವರ ಮನೆಯಲ್ಲಿ ಕುಂಕುಮದ ಭರಣಿಯಲ್ಲಿ ಇದನ್ನು ಇಟ್ಟರೆ ಸಾಕು, ಸಮಸ್ಯೆಗಳೆಲ್ಲ, ನಿವಾರಣೆಯಾಗಿ ಹೋಗಿ, ಸಿರಿ ಸಂಪತ್ತುಗಳು ಪ್ರಾಪ್ತಿಯಾಗುತ್ತವೆ. ಯಾವ ಕೆಲಸ ಮಾಡುವುದರಿಂದ ತೊಂದರೆಗಳು ತೊಲಗಿ ಹೋಗುತ್ತದೆ ಎಂದು ಈಗ ನಾವು ತಿಳಿದುಕೊಳ್ಳೋಣ.

 

 

 

ಮೊದಲಿಗೆ ಬೆಳ್ಳಿಯ ಕುಂಕುಮದ ಭರಣಿಯನ್ನು ತೆಗೆದುಕೊಳ್ಳಬೇಕು. ಇದಕ್ಕೆ ಕುಂಕುಮವನ್ನು ಮತ್ತು ಕೇಸರಿಯ ಎಲೆಗಳು, ಗೋಮತಿ ಚಕ್ರಗಳು ಮತ್ತು ಐದು ಕರ್ಪೂರಗಳನ್ನು ಹಾಕಬೇಕು.ಈ ಕುಂಕುಮ ಭರಣಿಯನ್ನು ನಿಮ್ಮ ದೇವರ ಮನೆಯಲ್ಲಿ ಇಟ್ಟು ಪೂಜಿಸಿ, ಆರ್ಥಿಕ ಸಮಸ್ಯೆಗಳು ದೂರವಾಗಬೇಕೆಂದು ಪ್ರಾರ್ಥಿಸಿ ಕೊಳ್ಳುವುದರಿಂದ ಲಕ್ಷ್ಮೀ ದೇವಿಯ ಅನುಗ್ರಹ ಲಭಿಸುತ್ತದೆ.ಏಕೆಂದರೆ ಲಕ್ಷ್ಮೀ ದೇವಿಯು ಹೇಗೆ ಸಮುದ್ರದಿಂದ ಉದ್ಭವವಾಗಿರುವಳೋ, ಹಾಗೆಯೇ ಗೋಮತಿ ಚಕ್ರಗಳು ಸಹ ಉದ್ವವಾಗಿವೆ. ಗೋಮತಿ ಚಕ್ರ, ಮತ್ತು ಕರ್ಪೂರದ ಸುವಾಸನೆ ಎಂದರೂ ಸಹ ಲಕ್ಷ್ಮೀ ದೇವಿಗೆ ತುಂಬಾ ಇಷ್ಟ. ಗೋಮತಿ ಚಕ್ರಗಳು ಎಲ್ಲಿರುತ್ತದೆಯೋ ? ಅಲ್ಲಿ ಲಕ್ಷ್ಮಿ ವಾಸವಾಗಿರುತ್ತಾಳೆ ಎಂದು ಶಾಸ್ತ್ರಗಳು ಹೇಳುತ್ತವೆ.ಆದ್ದರಿಂದ ಕುಂಕುಮದ ಭರಣಿಯಲ್ಲಿ ಗೋಮತಿ ಚಕ್ರಗಳನ್ನು, ಕರ್ಪೂರವನ್ನು ಹಾಕಿ ದೇವರ ಮನೆಯಲ್ಲಿ ಇಟ್ಟು ಸಂಕಲ್ಪ ಮಾಡಿಕೊಳ್ಳುವುದರಿಂದ, ಧನ ಪ್ರಾಪ್ತಿಯಾಗುತ್ತದೆ. ಹೀಗೆ ಇದನ್ನು ಇಟ್ಟು ಪ್ರತಿದಿನ ಮನೆಯಲ್ಲಿ ದೀಪಾರಾಧನೆ ಮಾಡಬೇಕು.

ಪ್ರತಿನಿತ್ಯ ಲಕ್ಷ್ಮಿ ಅಷ್ಟೋತ್ತರವನ್ನು ಪಠಿಸಬೇಕು. ಹೀಗೆ ಪಠಿಸುವುದರಿಂದ ಅನಾರೋಗ್ಯ ಸಮಸ್ಯೆಗಳು, ನಿರುದ್ಯೋಗ ಸಮಸ್ಯೆಗಳು, ಆರ್ಥಿಕ ಸಮಸ್ಯೆಗಳು ಸಹ ದೂರವಾಗುತ್ತವೆ.ಲಕ್ಷ್ಮೀ ದೇವಿಗೆ 11 ಕಮಲದ ಹೂವುಗಳಿಂದ ಪೂಜಿಸಬೇಕು. ಹೀಗೆ ಪೂಜಿಸುವುದರಿಂದ ಲಕ್ಷ್ಮೀ ದೇವಿಯ ಅನುಗ್ರಹದ ಜೊತೆಗೆ ಸಮಸ್ಯೆಗಳೆಲ್ಲಾ ದೂರವಾಗುತ್ತವೆ ಎಂದು ಶಾಸ್ತ್ರಗಳು ಹೇಳುತ್ತವೆ.ದೀಪಾರಾಧನೆ ಮಾಡುವಾಗ ಕಮಲದ ಹೂವಿನ ಹಾಗೆ ಬತ್ತಿಗಳನ್ನು ಅಲಂಕರಿಸಿ, ಇದರಿಂದ ದೀಪಾರಾಧನೆ ಮಾಡಿದರೆ ಗ್ರಹ ದೋಷಗಳು ದೂರವಾಗುತ್ತವೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top