fbpx
ದೇವರು

15 ದಿನದ ಪಿತೃ ಪಕ್ಷದಲ್ಲಿ ಯಾವ ಯಾವ ತಿಥಿಯ ದಿನ ಯಾರ ಶ್ರಾದ್ಧ ಕಾರ್ಯವನ್ನು ಮಾಡಬೇಕು ಗೊತ್ತಾ,ತಿಳ್ಕೊಳ್ಳಿ

ಪಿತೃ ಪಕ್ಷ ,ಕೃಷ್ಣ ಪಕ್ಷದಿಂದ ಆರಂಭವಾಗಿದ್ದು,ಯಾವ ಯಾವ ತಿಥಿಯ ದಿನ ಯಾರ ಶ್ರಾದ್ಧ ಕಾರ್ಯವನ್ನು ಮಾಡಬೇಕು ಎಂಬುದನ್ನು ತಿಳಿಯೋಣ.

ಭಾದ್ರಪದ ಮಾಸದ ಕೃಷ್ಣ ಪಕ್ಷದಿಂದ ಪಿತೃ ಪಕ್ಷ ಶುರುವಾಗಿದೆ. ಜ್ಯೋತಿಷ್ಯ ಶಾಸ್ತ್ರಗಳ ಪ್ರಕಾರ ನಮ್ಮ ಪೂರ್ವಿಕರು ಹದಿನಾರು ದಿನಗಳ ಕಾಲ ನಮ್ಮ ಮನೆಯಲ್ಲಿ ನೆಲೆಸುತ್ತಾರಂತೆ. ಈ ವೇಳೆ ಶ್ರಾದ್ಧ ಕರ್ಮಗಳನ್ನು ಮಾಡಿದರೆ ಅವರು ಪ್ರಸನ್ನರಾಗುತ್ತಾರೆ. ಶ್ರಾದ್ಧವನ್ನು ಮನಸ್ಸಿಗೆ ತೋಚಿದಂತೆ ಮಾಡಬಾರದು. ವಿಧಿ ವಿಧಾನದ ಮೂಲಕ ಹಿರಿಯರು ಮಾಡಿಕೊಂಡು ಬಂದ ಪದ್ಧತಿಯಲ್ಲಿ ಮಾಡಬೇಕು. ಬ್ರಾಹ್ಮಣರಿಗೆ ದಾನ ಮಾಡುವುದರಿಂದ ಅಶುಭ ಫಲಗಳು ಪ್ರಾಪ್ತಿಯಾಗುತ್ತವೆ.

ನಾಯಿ ಹಾಗೂ ಕಾಗೆಗಳಿಗೆ ಆಹಾರವನ್ನು ನೀಡಬೇಕು. ನಾವು ಊಟ ಮಾಡುವ ಮೊದಲು ನಾಯಿಗೆ ಎಲೆಯ ಮೇಲೆ ಆಹಾರವನ್ನು ತಿನ್ನಲು ನೀಡಬೇಕು. ನಂತರ ಮೂರು ಹಿಡಿ ಅನ್ನವನ್ನು ಕಾಗೆಗಳಿಗೆ ಹಾಕಬೇಕು. ಪ್ರತಿದಿನ ಈ ಪಿತೃಪಕ್ಷದ ದಿನಗಳಲ್ಲಿ 15 ದಿನಗಳ ಕಾಲ ಕಾಗೆಗೆ ಮೊದಲು ಮೂರು ಹಿಡಿ ಅನ್ನವನ್ನು ಹಾಕಬೇಕು.ನಂತರ ನಾವು ಆಹಾರವನ್ನು ಸ್ವೀಕರಿಸಬೇಕು.
ಮರಣ ಹೊಂದಿದ ನಮ್ಮ ಪೂರ್ವಜರ ಶ್ರಾದ್ಧ ಕಾರ್ಯವನ್ನು ಮಾಡಲು ಒಬ್ಬೊಬ್ಬರಿಗೆ ಒಂದೊಂದು ತಿಥಿಗಳಿವೆ . ಅದಕ್ಕೆಂದೇ ಬೇರೆ ಬೇರೆ ತಿಥಿಗಳಿವೆ. ಎಲ್ಲರ ಶ್ರಾದ್ದಾ ಕಾರ್ಯವನ್ನು ಒಂದೇ ದಿನ ಮಾಡಲು ಸಾಧ್ಯವಿಲ್ಲ. ಬೇರೆ ಬೇರೆ ದಿನ ಬೇರೆ ಬೇರೆ ಪೂರ್ವಜರ ಶ್ರಾದ್ಧ ಕಾರ್ಯವನ್ನು ಮಾಡಬೇಕು.

 

 

 

ಸೆಪ್ಟೆಂಬರ್ 28 ನೇ ತಾರೀಖಿನಂದು ಚತುರ್ಥಿಯ ತಿಥಿ ಇದೆ .ಈ ದಿನ ಆತ್ಮಹತ್ಯೆ ಮಾಡಿಕೊಂಡವರ ಶ್ರಾದ್ಧ ಕಾರ್ಯವನ್ನು ಮಾಡಬೇಕು. ಕೊಲೆಯಾದವರು ಅಥವಾ ಅಪಘಾತದಲ್ಲಿ ಸಾವನ್ನಪ್ಪಿದವರ ತಿಥಿಯನ್ನು ಈ ದಿನ ಮಾಡಬೇಕು.
ಸೆಪ್ಟಂಬರ್ 29ನೇ ತಾರೀಕಿನಂದು ಪಂಚಮಿಯ ತಿಥಿ ಇದೆ. ಈ ದಿನ ಸಹಜವಾಗಿ ಸಾವನ್ನಪ್ಪಿರುವ ಅವಿವಾಹಿತರ ಶ್ರಾದ್ಧ ಕಾರ್ಯವನ್ನು ಮಾಡಬೇಕು. ಅಪಘಾತದಲ್ಲಿ ಸಾವನ್ನಪ್ಪಿದ ಕಾರ್ಯವನ್ನು ಕೂಡ ಈ ದಿನ ಮಾಡಬಹುದು.
ಅಕ್ಟೋಬರ್ 2 ನೇ ತಾರೀಖಿನಂದು, ಅಷ್ಟಮಿಯ ತಿಥಿ ಇದ್ದು, ಈ ದಿನ ಮೃತ ತಂದೆಯ ಶ್ರಾದ್ಧ ಕಾರ್ಯವನ್ನು ಮಾಡಬೇಕು. ಅಕ್ಟೋಬರ್ ಮೂರನೇ ತಾರೀಕಿನಂದು, ನವಮಿಯ ತಿಥಿ ಇದ್ದು, ಈ ದಿನ ತಾಯಿಯ ತಿಥಿಯನ್ನು ಮಾಡುವುದು ಒಳ್ಳೆಯದು. ಯಾವುದೇ ಮಹಿಳೆಯ ಅಥವಾ ಸ್ತ್ರೀಯರ ಶ್ರಾದ್ಧವನ್ನು ಈ ದಿನ ಮಾಡಬಹುದು.

ಅಕ್ಟೋಬರ್ 5 ನೇ ತಾರೀಖಿನಂದು ಏಕಾದಶಿಯಂದು ಸನ್ಯಾಸತ್ವ ಸ್ವೀಕರಿಸಿ ಸಾವನ್ನಪ್ಪಿದವರ ತಿಥಿ ಮಾಡಬಹುದು.ಅಕ್ಟೋಬರ್ ಆರನೇ ತಾರೀಕಿನಂದು ದ್ವಾದಶಿಯಂದು ಕೂಡ ಸನ್ಯಾಸಿಯ ಶ್ರಾದ್ಧ ಕಾರ್ಯವನ್ನು ಮಾಡಬಹುದಾಗಿದೆ. ಅಕ್ಟೋಬರ್ 7 ನೇ ತಾರೀಖಿನಂದು ತ್ರಯೋದಶಿ ಹಾಗೂ ಚತುರ್ದಶಿಯಾಗಿದ್ದು, ಆ ದಿನ ಅಕಾಲ ಮೃತ್ಯುವಿಗೆ ಒಳಗಾದವರು, ಮನೆಯ ಯಾವುದೇ ಸದಸ್ಯನ ಶ್ರಾದ್ಧ ಕಾರ್ಯವನ್ನು ಮಾಡಬಹುದು.
ಅಕ್ಟೋಬರ್ 8 ನೇ ತಾರೀಖಿನಂದು ಕೊನೆಯ ದಿನವಾಗಿದ್ದು, ಆ ದಿನವೇ ಕೃಷ್ಣ ಪಕ್ಷದ ಮಹಾಲಯ ಅಮಾವಾಸ್ಯೆಯಾಗಿದ್ದು ಈ ದಿನ ಎಲ್ಲ ಮೃತಪಟ್ಟವರ ಶ್ರಾದ್ಧ ಕಾರ್ಯವನ್ನು ಸಹ ಈ ದಿನ ಮಾಡಬಹುದು. ನಿಮಗೆ ಮರಣ ಹೊಂದಿದವರ ತಿಥಿಯು ಅಥವಾ ಅವರು ತೀರಿಹೋದ ತಿಥಿ ತಿಳಿದಿಲ್ಲವೆಂದರೆ ಯಾವುದೇ ತೀರಿಹೋದವರ ಶ್ರಾದ್ಧ ಕಾರ್ಯವನ್ನು ಮಾಡಲು ಈ ದಿನ ಕೊನೆಯ ದಿನ ಮತ್ತು ಸೂಕ್ತ ದಿನವಾಗಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top