ಸಮಾಚಾರ

ಅಯೋಧ್ಯೆ ವಿವಾದ: 1994ರ ತೀರ್ಪನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್.

ತೀವ್ರ ಕುತೂಹಲ ಕೆರಳಿಸಿದ್ದ ಅಯೋಧ್ಯೆ ರಾಮ ಮಂದಿರ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಸದಸ್ಯರ ವಿಸ್ತೃತ ನ್ಯಾಯಪೀಠಕ್ಕೆ ವರ್ಗಾಯಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಮಸೀದಿಯಲ್ಲೇ ಪ್ರಾರ್ಥನೆ ಸಲ್ಲಿಸಬೇಕೆಂದೇನಿಲ್ಲ. ಮಸೀದಿಯನ್ನು ಸ್ಥಳಾಂತರ ಮಾಡೋದ್ರಿಂದ ನಮಾಜ್​ಗೆ ಧಕ್ಕೆ ಇಲ್ಲ. ಬೇರೆ ಮಸೀದಿಯಲ್ಲೂ ಅಥವಾ ಹೊರಗೂ ನಮಾಜ್​ ಮಾಡಬಹುದು. ಮಸೀದಿ ಇಸ್ಲಾಮ್ ನ ಅವಿಭಾಜ್ಯ ಅಂಗವಲ್ಲ ಎಂಬ 1994 ರ ಫಾರೂಕಿ ಪ್ರಕರಣದ ತೀರ್ಪನ್ನು ಸುಪ್ರೀಂ ಕೋರ್ಟ್ ನ ತ್ರಿಸದಸ್ಯ ಪೀಠ ಎತ್ತಿ ಹಿಡಿದಿದೆ.

 

 

ಇದೇ ವೇಳೆ ಯಾವುದೇ ಧರ್ಮದ ಸ್ಥಳಗಳನ್ನು ಸರ್ಕಾರಗಳು ವಶಕ್ಕೆ ಪಡೆಯಬಹುದು ಎಂಬುದನ್ನೂ ಸುಪ್ರೀಂ ಕೋರ್ಟ್ ನ ತ್ರಿಸದಸ್ಯ ಪೀಠದ ನ್ಯಾಯಮೂರ್ತಿಗಳು ಹೇಳಿದ್ದಾರೆ. ಇನ್ನು ರಾಮ ಜನ್ಮಭೂಮಿ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ 29ರಂದು ವಿಚಾರಣೆ ನಡೆಯಲಿದೆ. ಅಯೋಧ್ಯೆ ಪ್ರಕರಣದ ವಿಚಾರಣೆ ವೇಳೆಯೂ ಮಸೀದಿ ವಿಚಾರವೂ ಪ್ರಸ್ತಾಪವಾಗಿರುವುದರಿಂದ ಈ ತೀರ್ಪು ಈಗ ಮಹತ್ವವಾಗಿದೆ.

ಏನಿದು ಪ್ರಕರಣ?
1994 ರಲ್ಲಿ ನಮಾಜನ್ನು ಎಲ್ಲಾದರೂ ಮಾಡಬಹುದು. ಮಸೀದಿಯಲ್ಲೇ ಮಾಡಬೇಕಿಲ್ಲ. ನಮಾಜ್ ಗಾಗಿ ಪ್ರತ್ಯೇಕ ಜಾಗವನ್ನು ಸರ್ಕಾರ ನೀಡಬೇಕು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಆದರೆ ಈ ತೀರ್ಪನ್ನು ಮುಸ್ಲಿಂ ಸಂಘಟನೆಗಳು ಪ್ರಶ್ನಿಸಿದ್ದವು. ವಿಚಾರಣೆ ಕೈಗೆತ್ತಿಕೊಂಡ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ, ಮಸೀದಿ ಕುರಿತ ಫಾರೂಕಿ ತೀರ್ಪಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಹಾಗಾಗಿ ವಿಸ್ತೃತ ಪೀಠಕ್ಕೆ ಪ್ರಕರಣ ವರ್ಗಾವಣೆ ಇಲ್ಲ ಎಂದು ತೀರ್ಪು ನೀಡಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top