ಸಮಾಚಾರ

‘ಆಧಾರ್’ ಸುಪ್ರೀಂ ತೀರ್ಪಿನಿಂದ ನಿಮಗೇನು ಲಾಭ? ಇಲ್ಲಿದೆ ಮಾಹಿತಿ.

ಆಧಾರ್ ಸಿಂಧುತ್ವದ ಕುರಿತು ಸಲ್ಲಿಕೆಯಾಗಿದ್ದ ಅರ್ಜಿಗಳ ಕುರಿತು ಸುದೀರ್ಘ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ತೀರ್ಪು ಪ್ರಕಟಿಸಿದೆ. ಆಧಾರ್ ಸಿಂಧುತ್ವದ ಕುರಿತು ಮಹತ್ವದ ತೀರ್ಪನ್ನು ಸುಪ್ರೀಂ ಕೋರ್ಟ್ ನೀಡಿದ್ದು ಸರಕಾರದ ವಿವಿಧ ಸೇವೆಗಳಿಗೆ ಆಧಾರ್ ಕಾರ್ಡನ್ನು ಕಡ್ಡಾಯಗೊಳಿಸಬೇಕೋ ಅಥವಾ ಬೇಡವೋ ಎಂಬ ಗೊಂದಲಗಳಿಗೆ ಸುಪ್ರೀಂಕೋರ್ಟ್ ತೆರೆ ಎಳೆದಿದೆ. ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಐದು ಸದಸ್ಯರ ಸುಪ್ರೀಮ್ ಕೋರ್ಟ್ ಸಾಂವಿಧಾನಿಕ ಪೀಠ ಮಹತ್ವದ ತೀರ್ಪು ನೀಡಿದೆ..

ಯಾವುದಕ್ಕೆ ಆಧಾರ್ ಕಡ್ಡಾಯವಾಗಿರುತ್ತದೆ:
1. ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಆಧಾರ್ ಕಡ್ಡಾಯ
2.ಪ್ಯಾನ್‌ ಕಾರ್ಡ್‌ಗೆ ಆಧಾರ್ ಜೋಡಣೆ ಕಡ್ಡಾಯ
3.ಆದಾಯ ತೆರಿಗೆ ಪಾವತಿಗೆ ಆಧಾರ್ ಕಡ್ಡಾಯ
4.ಯಾವುದಕ್ಕೆ ಆಧಾರ್ ಕಡ್ಡಾಯವಾಗಿರುವುದಿಲ್ಲ…

 

ಅಷ್ಟೇ ಅಲ್ಲದೆ ಸುಪ್ರೀಂ ಕೋರ್ಟ್ ತೀರ್ಪು ಸಾಮಾನ್ಯ ವ್ಯಕ್ತಿಗೆ ಸಂಬಂಧಿಸಿದ ಹಲವಾರು ರೀತಿಯಅನುಕೂಲವನ್ನು ನೀಡಿದ್ದು, ಇದು ಅವರಿಗೆ ಪ್ರಯೋಜನವನ್ನು ನೀಡುತ್ತದೆ.

ಇನ್ನು ಶಿಕ್ಷಣ ಸಂಸ್ಥೆ, ಬ್ಯಾಂಕ್‍ಗಳಲ್ಲಿ ಆಧಾರ್ ಕಡ್ಡಾಯವಲ್ಲ ಎಂದು ಹೇಳಿರುವ ಕೋರ್ಟ್, ಸರ್ಕಾರದ ಯೋಜನೆಗಳಿಗೆ ಮಾತ್ರ ಆಧಾರ್ ಕಡ್ಡಾಯ ಎಂದು ಸ್ಪಷ್ಟಪಡಿಸಿದೆ. ಪ್ರಮುಖ ಪರೀಕ್ಷೆಗಳಾದ CBSC, NEET ನಂತಹ ಪರೀಕ್ಷೆಗಳಲ್ಲಿ ಆಧಾರ್ ಕಡ್ಡಾಯಗೊಳಿಸುವಂತಿಲ್ಲ ಅಂತೆಯೇ ಸರ್ಕಾರಿ ಆಸ್ಪತ್ರೆಗಳೂ ಸೇರಿದಂತೆ ಎಲ್ಲ ಆಸ್ಪತ್ರೆಗಳಲ್ಲಿ ಆಧಾರ್ ಕಾರ್ಡ್ ಇಲ್ಲ ಎಂದು ಚಿಕಿತ್ಸೆ ನಿರಾಕರಿಸುವಂತಿಲ್ಲ ಎಂದೂ ಸುಪ್ರೀಂ ಕೋರ್ಟ್ ಹೇಳಿದೆ.

ಬ್ಯಾಂಕ್ ಖಾತೆಗಳಿಗೆ ಆಧಾರ್ ಕಡ್ಡಾಯವಲ್ಲ
1.ಬ್ಯಾಂಕ್​ ಖಾತೆಗಳಿಗೆ ಆಧಾರ್ ಜೋಡಣೆ ಕಡ್ಡಾಯವಲ್ಲ
2.ಮೊಬೈಲ್​ ನಂಬರ್​ಗೆ ಆಧಾರ್​ ಜೋಡಣೆ ಅಗತ್ಯವಿಲ್ಲ
3.ಮೊಬೈಲ್​ ಫೋನ್​ಗಳಿಗೆ ಆಧಾರ್ ಕಾರ್ಡ್​ ಕಡ್ಡಾಯವಿಲ್ಲ
4.ಅಕ್ರಮ ವಲಸಿಗರಿಗೆ ಆಧಾರ್ ಕಾರ್ಡ್​ ಮಾಡುವಂತಿಲ್ಲ
5.ಆಧಾರ್​ ಕಾಯ್ದೆಯ ಸೆಕ್ಷನ್​​ 57ನ್ನು ಸುಪ್ರೀಂ ಕೋರ್ಟ್​​ ರದ್ದುಗೊಳಿಸಿದೆ. ಹೀಗಾಗಿ ಖಾಸಗಿ ಸಂಸ್ಥೆಗಳು ಆಧಾರ್​ ಮಾಹಿತಿಗಾಗಿ ಒತ್ತಾಯಿಸುವಂತಿಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top