fbpx
ದೇವರು

ಮಹಿಮಯುತ ಚೌಡೇಶ್ವರಿ ದೇವಿ ಮಹಿಮೆ,ಪೂಜೆ ಸಲ್ಲಿಸಿದರೆ ವಿಶೇಷವಾದ ಫಲಗಳನ್ನು ನೀಡುವ ಮಹಾತಾಯಿ,ಈ ತಾಯಿ ಮಾಡಿರೋ ಪವಾಡಗಳ ಬಗ್ಗೆ ಗೊತ್ತಾದ್ರೆ ನಿಮ್ಮ ಭಕ್ತಿ ಜಾಸ್ತಿಯಾಗುತ್ತೆ

ತುಮಕುರು ಜಿಲ್ಲೆಯ,ತಿಪಟೂರು ತಾಲೂಕಿನ ,ದಸರಿಘಟ್ಟ ಎನ್ನುವ ಗ್ರಾಮದಲ್ಲಿ ನೆಲೆಸಿರುವ ಚೌಡೇಶ್ವರಿ ದೇವಿಯ ಮಹಿಮೆ ಅಪಾರ.ನವರಾತ್ರಿಯ ಸಂದರ್ಭದಲ್ಲಿ ನವದುರ್ಗೆಯರ ರೂಪದಲ್ಲಿ ಇರುವ ಚೌಡೇಶ್ವರಿ ದೇವಿಯನ್ನು ಪೂಜೆ ಮಾಡಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಹೆಪಾಲಾಗುತ್ತದೆ. ಚಾಮುಂಡಿಯ ಪ್ರತಿ ರೂಪವಾಗಿರುವ ಈ ಚೌಡೇಶ್ವರಿ ದೇವಿಗೆ ನವರಾತ್ರಿಯ ಸಮಯದಲ್ಲಿ ಪೂಜೆ ಸಲ್ಲಿಸಿದರೆ ವಿಶೇಷವಾದ ಫಲಗಳು ಲಬಿಸುತ್ತವೆ . ಅನೇಕ ವಿಸ್ಮಯಗಳನ್ನು ಸೃಷ್ಟಿಸುವ ಶ್ರೀ ಚೌಡೇಶ್ವರಿ ದೇವಿಯ ಮಹಾತ್ಮೆ ರಾಜ್ಯದ ಉದ್ದಗಲಕ್ಕೂ ಹರಡಿಕೊಂಡಿದೆ. ಭಕ್ತರು, ಜನಸಾಮಾನ್ಯರು, ರಾಜಕಾರಣಿಗಳು, ಚಿತ್ರರಂಗದವರು ಕೂಡ ಈ ದೇವಿಗೆ ಭಕ್ತಿಯಿಂದ ನಡೆದುಕೊಳ್ಳುತ್ತಿದ್ದಾರೆ. ಅಂತಹ ಪವಾಡ ಸದೃಶ್ಯ ದೇವಿ ನೆಲೆಸಿರುವಂತಹ ಕ್ಷೇತ್ರವೇ ತಿಪಟೂರಿನ ದಸರಿಘಟ್ಟ ಗ್ರಾಮ.

ಶ್ರೀ ಮಾತೆ ಆದಿಶಕ್ತಿಯ ಅವತಾರವಾಗಿರುವ ಶ್ರೀ ಚೌಡೇಶ್ವರಿ ದೇವಿ ನೆಲೆಸಿರುವ ಸ್ಥಳ, ತುಮಕೂರು ಜಿಲ್ಲೆಯ ತಿಪಟೂರು ಸಮೀಪದ ದಸರಿಘಟ್ಟ ಎಂಬ ಪುಟ್ಟ ಗ್ರಾಮದಲ್ಲಿ ಮೊದಲು ಸಣ್ಣ ದೇವಸ್ಥಾನವಾಗಿದ್ದು,ಈಗ ದೊಡ್ಡ ದೇವಾಲಯವಾಗಿದೆ ಹಾಗೂ ಧಾರ್ಮಿಕ ಕೇಂದ್ರವಾಗಿದೆ.
ಈ ದೇವರು ಇಷ್ಟಾರ್ಥ ಸಿದ್ಧಿಯ ಪ್ರತೀಕವಾಗಿದೆ ಎನ್ನುವುದು ಭಕ್ತರ ಅನುಭವದ ಮಾತು. ಇಲ್ಲಿಗೆ ಬಂದು ಯಾರು ಏನೇ ಕೇಳಿಕೊಂಡರು ಪ್ರತಿಫಲ ಸಿಕ್ಕೆ ಸಿಗುತ್ತದೆ ಎನ್ನುವ ಭಾವನೆ ಇದೆ. ಪ್ರತಿ ಶುಕ್ರವಾರ ಮತ್ತು ಮಂಗಳವಾರ ಇಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಕೇವಲ ಜನಸಾಮಾನ್ಯರಷ್ಟೇ ಅಲ್ಲದೆ ರಾಜಕಾರಣಿಗಳು ಮತ್ತು ಚಿತ್ರರಂಗದವರ ಆರಾಧ್ಯ ದೈವವಾಗಿ ಚೌಡೇಶ್ವರಿ ದೇವಿ ನೆಲೆಸಿದ್ದಾಳೆ . ಕರ್ನಾಟಕದ ಖ್ಯಾತನಾಮ ವ್ಯಕ್ತಿಗಳು ಇಲ್ಲಿಗೆ ಬಂದು ಪೂಜೆ ಸಲ್ಲಿಸುತ್ತಾರೆ. ಇಲ್ಲಿನ ಮತ್ತೊಂದು ವಿಶೇಷ ಎಂದರೆ ಚೌಡೇಶ್ವರಿ ದೇವಿಗೆ ಮೊದಲು ಸೀರೆ ಹರಕೆ ಸಲ್ಲಿಸಿದ್ದು ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮನವರು.
ಅಂದಿನಿಂದ ಇಂದಿನವರೆಗೂ ಇಲ್ಲಿ ಸೀರೆ ಸಲ್ಲಿಸಿ ಹರಕೆ ಸಲ್ಲಿಸುವ ವಾಡಿಕೆ ನಡೆದುಕೊಂಡು ಬಂದಿದೆ. ಹಾಗಾಗಿ ಸ್ತ್ರೀಯರು ದೇವಾಲಯಕ್ಕೆ ಬಂದು ಸೀರೆ ಸಲ್ಲಿಸಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸುತ್ತಾರೆ. ನಟ-ನಟಿಯರು ಮಾತ್ರವಲ್ಲದೆ, ಮೈಸೂರು ಅರಸರ ಮನೆತನದ ದೊರೆಗಳು ಕೂಡ ಈ ದೇವಿಗೆ ಭಯ, ಭಕ್ತಿ, ಶ್ರದ್ಧೆಯಿಂದ ನಡೆದುಕೊಳ್ಳುತ್ತಿದ್ದರಂತೆ. ಹಾಗಾಗಿ ಪ್ರತಿ ನವರಾತ್ರಿಯಂದು ಈ ದೇವಾಲಯದಲ್ಲಿ ನವರಾತ್ರಿಯ ಉತ್ಸವ ನಡೆಯುತ್ತದೆ. ಒಂಬತ್ತು ದಿನಗಳ ಕಾಲ ದೇವಿಯನ್ನು ವಿಶೇಷವಾಗಿ ಅಲಂಕರಿಸಿ ಪೂಜಿಸಲಾಗುತ್ತದೆ .

 

 

 

ಮಕ್ಕಳು ಹಾಗೂ ದೊಡ್ಡವರಿಗೆ ಇಲ್ಲಿ ತಾಯತವನ್ನು ಮಾಡಿಕೊಡಲಾಗುತ್ತದೆ. ಇಲ್ಲಿ ನೀಡುವ ತಾಯತವನ್ನು ಧರಿಸಿದರೆ ಮಕ್ಕಳನ್ನು ಕಾಡುವ ದೃಷ್ಟಿ ದೋಷಗಳು ಕೂಡ ದೂರವಾಗುತ್ತವಂತೆ. ಅಷ್ಟೇ ಅಲ್ಲದೆ ಹೆಚ್ಚಾಗಿ ಭಯಪಡುವ ಮಕ್ಕಳನ್ನು ಕರೆದುಕೊಂಡು ಬಂದು ಚೌಡೇಶ್ವರಿ ದೇವಿಯ ತಾಯತವನ್ನು ಕಟ್ಟುವುದು ಇಲ್ಲಿನ ಪ್ರತೀತಿಯಾಗಿದೆ . ಅಷ್ಟೇ ಅಲ್ಲದೆ ಮಕ್ಕಳಿಗೆ ಕಾಯಿಲೆ ಏನಾದರೂ ಇದ್ದರೆ ಅವು ಕೂಡ ವಾಸಿಯಾಗುತ್ತದೆ ಎನ್ನುವ ನಂಬಿಕೆ ಇದೆ.
ಈ ದೇವಿಯ ಅಪ್ಪಣೆ ಹಾಗೂ ಹೇಳಿಕೆಯನ್ನು ನೀಡುವುದು ಸಹ ವಿಶೇಷ. ಅಲ್ಲಿ ಒಂದು ಹಲಗೆಯ ಮೇಲೆ ರಂಗೋಲಿಯನ್ನು ಹರಡಲಾಗುತ್ತದೆ. ರಂಗೋಲಿಯ ಮೇಲೆ ದೇವಿಯು ಬರೆಯುತ್ತಾಳಂತೆ. ಅಂದರೆ ದೇವಿಯ ವಿಗ್ರಹ ಅಲ್ಲಿ ರಂಗೋಲಿಯ ಮೇಲೆ ಬರೆಯುವ ಮೂಲಕ ಉತ್ತರ ನೀಡುತ್ತದೆ.ಆ ಬರವಣಿಗೆಯ ಆಧಾರದ ಮೇಲೆ ಜನರ ಕಷ್ಟ, ಕಾರ್ಪಣ್ಯಗಳಿಗೆ ಉತ್ತರ ಹೇಳುತ್ತಾಳೆ ಇಲ್ಲಿನ ಚೌಡೇಶ್ವರಿ ದೇವಿ.

ದೇವಿಯ ಶಕ್ತಿ ಮತ್ತು ಮಹಿಮೆಯಿಂದಾಗಿ ನಿತ್ಯವೂ ಇಲ್ಲಿ ಭಕ್ತರ ದಂಡೇ ನೆರೆದಿರುತ್ತದೆ. ಶಕ್ತಿ ದೇವತೆ ಚೌಡೇಶ್ವರಿಯಿಂದ ಒಳಿತನ್ನು ಕಂಡ ಲಕ್ಷಾಂತರ ಜನ ಭಕ್ತರು ನಾಡಿನೆಲ್ಲೆಡೆ ನೆಲೆಸಿದ್ದಾರೆ. ಭಕ್ತರ ಕಷ್ಟ ಕಾರ್ಪಣ್ಯದ ಮೇಲೆ ಅದನ್ನು ಹರಕೆಯ ರೂಪದಲ್ಲಿ ಸಲ್ಲಿಸಲೇಬೇಕು ಎನ್ನುವುದು ಮತ್ತೊಂದು ವಿಶೇಷ. ಹರಕೆಯನ್ನು ತೀರಿಸದೆ ಹೋದರೆ ಅಥವಾ ಮರೆತುಬಿಟ್ಟರೆ ತಾಯಿ ಕಷ್ಟ ನೀಡುತ್ತಾಳೆ. ಹಾಗಾಗಿ ದೇವಿಯ ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಯಾದ ಮೇಲೆ ತಪ್ಪದೇ ಬಂದು ದೇವಿಗೆ ಹರಕೆಯನ್ನು ಪೂರೈಸುತ್ತಾರೆ. ಒಟ್ಟಾರೆ ದಸರಿಘಟ್ಟ ಎಂಬ ಒಂದು ಪುಟ್ಟ ಗ್ರಾಮದಲ್ಲಿ ನೆಲೆಸಿರುವ ಚೌಡೇಶ್ವರಿ ದೇವಿ ಇಂದು ಆ ಗ್ರಾಮಕ್ಕೆ ಸೀಮಿತವಾಗಿಲ್ಲ . ಕೊಟ್ಟ ಮಾತನ್ನು ಈಡೇರಿಸುವ ಮೂಲಕ ಭಕ್ತರ ಪಾಲಿನ ಕರುಣಾಮಯಿಯಾಗಿದ್ದಾಳೆ.

 

 

 

ಇಷ್ಟೇ ಅಲ್ಲದೆ ನರೇಂದ್ರಮೋದಿಯವರು ಪ್ರಧಾನಿಯಾಗುವುದಕ್ಕೂ ಮುನ್ನ ಗುಜರಾತ್ ರಾಜ್ಯದ ಮುಖ್ಯಮಂತ್ರಿ ಆಗಿದ್ದಾಗ ಅವರೂ ಕೂಡ ಇಲ್ಲಿಗೆ ಬಂದು ಅವರ ಭವಿಷ್ಯವನ್ನು ಕೇಳಿದ್ದಾರಂತೆ. ಆಗ ಅವರು ಮುಂದೆ ಪ್ರಧಾನಿಯಾಗುತ್ತಾರೆ ಎಂದು ಈ ದೇವಿ ಮುಂಚೆಯೇ ಭವಿಷ್ಯ ನುಡಿದಿದ್ದಳಂತೆ.
ಈ ಚೌಡೇಶ್ವರಿ ದೇವಿಯ ದೇವಾಲಯಕ್ಕೆ ತೆರಳಲು ತುಮಕೂರು ಜಿಲ್ಲೆಯ ತಿಪಟೂರು ಗ್ರಾಮಕ್ಕೆ ಹೋಗಿ,ಅಲ್ಲಿಂದ 10 ಕಿಲೋಮೀಟರ್ ಕ್ರಮಿಸಿದರೆ ನಿಮಗೆ ದಸರಿಘಟ್ಟ ಎನ್ನುವ ಗ್ರಾಮ ಸಿಗುತ್ತದೆ.ಅಲ್ಲಿ ಭವ್ಯವಾದ ಬೃಹತ್ ದೇವಿಯ ಮಂದಿರ ನಿಮ್ಮನ್ನು ಬರಮಾಡಿಕೊಳ್ಳುತ್ತದೆ.ಇಲ್ಲಿಗೆ ತೆರಳಲು ಸಾರಿಗೆ ವ್ಯವಸ್ಥೆ ಇದ್ದು,ತಿಪಟೂರಿನಿಂದ ಆಟೋಗಳಲ್ಲಿ ಕೂಡ ನೀವು ದಸರಿಘಟ್ಟ ಗ್ರಾಮಕ್ಕೆ ತೆರಳಬಹುದು.ನೀವು ಒಂದು ಸಲ ಭೇಟಿ ನೀಡಿ ದೇವಿಯ ದರ್ಶನ ಭಾಗ್ಯ ಪಡೆದು ಪುನೀತರಾಗಿ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top