fbpx
ದೇವರು

ಶುಕ್ರವಾರದ ದಿನ ಹೆಣ್ಮಕ್ಳು ಪೂಜೆ ಮಾಡಕ್ಕೆ ಆಗಿಲ್ಲ ಅಂದ್ರೆ ,ಹೀಗೆ ಮಾಡಿದರೆ ಸಾಕಂತೆ ಲಕ್ಷ್ಮಿ ದೇವಿ ಕಟಾಕ್ಷ ದೊರೆಯುತಂತ್ತೆ

ಶುಕ್ರವಾರದ ದಿನ ಮಹಿಳೆಯರಿಗೆ ಪೂಜೆ ಮಾಡಲು ಸಮಯ ಇಲ್ಲವೆಂದರೆ ಹೀಗೆ ಮಾಡಿದರೂ ಸಾಕು ಲಕ್ಷ್ಮೀ ದೇವಿ ಪ್ರಸನ್ನಳಾಗುತ್ತಾಳೆ.
ನಮ್ಮ ಇಂದೂ ಸಂಪ್ರದಾಯದಲ್ಲಿ ಶುಕ್ರವಾರಕ್ಕೆ ತುಂಬಾ ವಿಶೇಷವಾದ ಪ್ರಾಮುಖ್ಯತೆ ಇದೆ.ಯಾಕೆಂದರೆ ಶುಕ್ರವಾರ ಎನ್ನುವ ಹೆಸರಿನಲ್ಲಿಯೇ ಶುಕ್ರ ಎಂದರೆ ಹಣಕ್ಕೆ ಸಿರಿ ಸಂಪತ್ತಿಗೆ ಅಧಿದೇವತೆಯಾಗಿರುವ ಲಕ್ಷ್ಮೀ ದೇವಿಯ ದಿನವಾಗಿದೆ. ಆದಿಪರಾಶಕ್ತಿ ರೂಪವಾದ ಶ್ರೀ ಮಹಾಲಕ್ಷ್ಮಿ ದೇವಿಗೆ ತುಂಬಾ ಇಷ್ಟವಾದ ವಾರ ಶುಕ್ರವಾರ ಅಂತಹ ಪವಿತ್ರವಾದ ಈ ಶುಕ್ರವಾರ ದಿನದಂದು ಕೆಲವು ಕೆಲಸಗಳನ್ನು ಮಾಡಬಾರದು.
ಒಂದು ವೇಳೆ ಈ ಶುಕ್ರವಾರದ ದಿನದಂದು ಎನಾದರೂ ತಪ್ಪುಗಳನ್ನು ಮಾಡಿದರೆ ಲಕ್ಷ್ಮೀದೇವಿಯ ಸಹೋದರಿಯಾದ ಜೇಷ್ಠಾ ದೇವಿಯು ಮನೆಗೆ ಪ್ರವೇಶ ಮಾಡುತ್ತಾಳೆ. ಆದ್ದರಿಂದ ಈ ದಿನ ಯಾವ ಕೆಲಸಗಳನ್ನು ಮಾಡಬೇಕು ಮತ್ತು ಯಾವ ಕೆಲಸಗಳನ್ನು ಮಾಡಬಾರದು ಎಂದು ಈಗ ನಾವು ತಿಳಿದುಕೊಳ್ಳೋಣ.

 

 

 

ಶುಕ್ರವಾರದ ದಿನ ಮಹಿಳೆಯರು ಕಪ್ಪು ಬಣ್ಣದ ವಸ್ತ್ರವನ್ನು ಧರಿಸಬಾರದು, ಹಾಗೆಯೇ ಕಪ್ಪು ಬಣ್ಣದ ಬಳೆಗಳನ್ನು ಧರಿಸಬಾರದು, ಕಪ್ಪು ಬಣ್ಣದ ಕುಂಕುಮವನ್ನು ಸಹ ದಾರಣೆ ಮಾಡಬಾರದು. ಶುಕ್ರವಾರದ ದಿನ ಯಾರಾದರೂ ಮುತ್ತೈದೆಯರು ಮನೆಗೆ ಬಂದರೆ, ತಪ್ಪದೇ ಅವರಿಗೆ ಅರಿಶಿನ-ಕುಂಕುಮವನ್ನು ಕೊಡದೆ ಕಳುಹಿಸಬಾರದು. ಹಾಗೆಯೇ ಶುಕ್ರವಾರದ ದಿನ ಸ್ತ್ರೀಯರು ಕುಂಕುಮವನ್ನು ಧಾರಣೆ ಮಾಡಿಕೊಳ್ಳದೇ ಬರೀ ಹಣೆಯಲ್ಲಿ ಹಾಗೆಯೇ ಇರಬಾರದು.ಶುಕ್ರವಾರದ ದಿನ ಆಶ್ವತ ಮರವನ್ನು ಮುಟ್ಟಬಾರದು. ಹಾಗೆ ಇದರ ಎಲೆಗಳನ್ನು ಸಹ ಕೀಳಬಾರದು. ಈ ದಿನ ಮಂಗಳಕರ ವಸ್ತುಗಳಾದ ಕುಂಕುಮ, ಕಪ್ಪು ಬಳೆ, ಇವುಗಳನ್ನು ಖರೀದಿ ಮಾಡಬಾರದು. ಶುಕ್ರವಾರದ ದಿನ ಪುರುಷರೂ ತಲೆ ಸ್ನಾನವನ್ನು ಮಾಡದೇ ಇರುವುದು ಒಳ್ಳೆಯದು. ಹಾಗೆ ಮಹಿಳೆಯರು ಶುಕ್ರವಾರದ ದಿನ ಅರಿಶಿನವನ್ನು ಲೇಪನ ಮಾಡಿಕೊಂಡು ತಲೆಸ್ನಾನ ಮಾಡುವುದು ಶ್ರೇಯಸ್ಕರವಾದದ್ದು .ಶುಕ್ರವಾರದ ದಿನ ಲಕ್ಷ್ಮೀ ದೇವಿಗೆ ತುಂಬಾ ಇಷ್ಟವಾದ ಅರಿಶಿನ, ಕೆಂಪು, ಹಸಿರು ,ಬಣ್ಣದ ವಸ್ತ್ರವನ್ನು ಧರಿಸಿದರೆ ಒಳ್ಳೆಯದು. ಈ ದಿನ ತಪ್ಪದೇ ತುಳಸಿ ಗಿಡದ ಪೂಜೆ ಮಾಡಬೇಕು.

ಈ ದಿನ ಸಾಯಂಕಾಲದ ಸಮಯದಲ್ಲಿ ಎಳ್ಳೆಣ್ಣೆ ಅಥವಾ ಶುದ್ಧ ಹಸುವಿನ ತುಪ್ಪದಿಂದ ಲಕ್ಷ್ಮೀ ದೇವಿಗೆ ದೀಪಾರಾಧನೆ ಮಾಡಬೇಕು . ಪೂಜೆ ಮಾಡಲು ಸಮಯವಿಲ್ಲವೆಂದರೆ ಕನಿಷ್ಠ ಪಕ್ಷ ಶುಕ್ರವಾರದ ದಿನ ತುಳಸಿ ಗಿಡಕ್ಕೆ ನೀರನ್ನಾದರೂ ಹಾಕಬೇಕು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top