fbpx
ಸಮಾಚಾರ

ಭಾರತಕ್ಕೆ ದೊಡ್ಡ ಶಾಕ್- ಬುಲೆಟ್ ರೈಲು ಯೋಜನೆಗೆ ಹಣಕಾಸು ಅನುದಾನ ನಿಲ್ಲಿಸಿದ ಜಪಾನ್.

ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷಿ ಯೋಜನೆ ಬುಲೆಟ್ ಟ್ರೈನ್​​ಗೆ ಆರಂಭದಲ್ಲೇ ವಿಘ್ನ ಎದುರಾಗಿದೆ. ಜಪಾನ್ ಇಂಟರ್ ನ್ಯಾಷನಲ್ ಕೋ ಆಪರೇಷನ್ ಏಜೆನ್ಸಿಯು ಈ ಬುಲೆಟ್ ರೈಲ್ವೆ ಜಾಲ ನಿರ್ಮಾಣಕ್ಕೆ ಹಣಕಾಸು ನೆರವು ನೀಡುವುದನ್ನು ನಿಲ್ಲಿಸಿದೆ. ಬುಲೆಟ್ ರೈಲು ನಿರ್ಮಾಣವಾಗುವ ಸ್ಥಳದಲ್ಲಿರುವ ರೈತರ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಜಪಾನ್ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಹೇಳಲಾಗುತ್ತಿದೆ.

ಮುಂಬೈ–ಅಹಮದಾಬಾದ್ ನಡುವಣ ಬುಲೆಟ್‌ ಟ್ರೈನ್‌ ಯೋಜನೆಗೆ ನಡೆಯುತ್ತಿರುವ ಭೂಸ್ವಾಧೀನ ಪ್ರಕ್ರಿಯೆಯನ್ನು ವಿರೋಧಿಸಿ ತಮ್ಮ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದನ್ನು ಒಪ್ಪುವುದಿಲ್ಲ ಎಂದು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. 2015ರ ಸೆಪ್ಟೆಂಬರ್‌ನಲ್ಲಿ ಬುಲೆಟ್ ಟ್ರೈನ್ ಯೋಜನೆಗೆ ಜಪಾನ್‌ ಜತೆ ಒಪ್ಪಂದ ಮಾಡಿಕೊಂಡ ನಂತರ 2013ರ ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ ತಂದು ಅದನ್ನು ದುರ್ಬಲಗೊಳಿಸಲಾಗಿದೆ. ಈ ತಿದ್ದುಪಡಿಯೂ ಜೆಐಸಿಎ ಮಾರ್ಗದರ್ಶನಗಳ ಉಲ್ಲಂಘನೆ ಎಂದು ರೈತರು ಆರೋಪಿಸಿದ್ದಾರೆ.

 

 

1 ಲಕ್ಷ ಕೋಟಿ ರುಪಾಯಿ ವೆಚ್ಚದ ಈ ಯೋಜನೆಗಾಗಿ ಸ್ವಾಧೀನ ಮಾಡಿಕೊಂಡ ಭೂಮಿಗಾಗಿ ರೈತರಿಗೆ ಪರಿಹಾರ ನೀಡಲು ಸರಕಾರ ಆದ್ಯತೆ ಕೊಡಬೇಕು ಎಂದು ಜಪಾನ್ ನ ಏಜೆನ್ಸಿ ಹೇಳಿತ್ತು. ಆದರೆ, ರೈತರ ಸಮಸ್ಯೆಯನ್ನು ಪರಿಹರಿಸಲು ವಿಫಲವಾಗಿರುವುದೇ ಜಪಾನ್​ನ ಈ ನಿರ್ಧಾರಕ್ಕೆ ಕಾರಣ ಎನ್ನಲಾಗಿದ್ದು, ಯೋಜನೆ ಜಾರಿಗೆ 2022ರವರೆಗೆ ಗಡುವು ನೀಡಿದೆ ಎಂದು ವರದಿಯಾಗಿದೆ.

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ 1. 10 ಲಕ್ಷ ಕೋಟಿ ರೂ ವೆಚ್ಚದ ಯೋಜನೆಯಿಂದ ಅನೇಕ ಬೆಳೆಗಾರರು ತೊಂದರೆಗೊಳಗಾಬೇಕಾಗುತ್ತದೆ. ಆದ್ದರಿಂದ ಈ ಯೋಜನೆ ಕೈಗೆತ್ತಿಕೊಳ್ಳಬಾರದೆಂದು ಎಂದು 1 ಸಾವಿರ ರೈತರು ಪ್ರತ್ಯೇಕವಾಗಿ ಗುಜರಾತ್ ಹೈಕೋರ್ಟ್ ಅಫಿಡವೆಟ್ ಸಲ್ಲಿಸಿದ್ದಾರೆ. ಈ ಬೆಳವಣಿಗೆಗಳು ಜಪಾನ್ ಏಜೆನ್ಸಿಯನ್ನು ಚಿಂತೆಗೀಡು ಮಾಡಿವೆ. ಹಾಗಾಗಿ ರೈತರ ಕಾಳಜಿಯ ಪರವಾಗಿ ಜಪಾನ್ ಏಜೆನ್ಸಿ ಹಣಕಾಸಿನ ನೆರವನ್ನು ನಿಲ್ಲಿಸಿದೆ ಎನ್ನಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top