ಆರೋಗ್ಯ

ಕಡಿಮೆ ಋತು ಸ್ರಾವ Oligo Menorrhoea ಸಮಸ್ಯೆಗೆ ಆಯುರ್ವೇದದ ಅತಿ ಮುಖ್ಯವಾದ 4 ಮನೆಮದ್ದುಗಳು.

ಕಡಿಮೆ ಋತು ಸ್ರಾವಕ್ಕೆ ಹಲವಾರು ಕಾರಣಗಳಿವೆ ಅದರಲ್ಲಿ ಮುಖ್ಯವಾದವು ಒತ್ತಡ , ರಕ್ತ ಹೀನತೆ , ಅಪೌಷ್ಟಿಕತೆ , ಮಾನಸಿಕ ತೊಂದರೆ ,ಭಯ , ದುಃಖ ,ಚಿಂತೆ ,ಕೆಲವು ದೀರ್ಘ ಕಾಲದ ಕ್ಷಯ ಅಥವಾ ಮಲೇರಿಯಾ ದಂತಹ ಸಮಸ್ಯೆಗಳು.

ಕಡಿಮೆ ಋತು ಸ್ರಾವ ಸಮಸ್ಯೆ ನಿವಾರಣೆ ಮಾಡಿಕೊಳ್ಳಲು ಈ ಕೆಳಗಿನ ಆಯುರ್ವೇದದ ಮನೆಮದ್ದುಗಳನ್ನು ಬಳಸಿಕೊಳ್ಳಬಹುದು.

ಲೋಳೆ ಸರ ತಿರುಳನ್ನು ನೀರಿನಲ್ಲಿ ಚೆನ್ನಾಗಿ ತೊಳೆದು ಸ್ವಲ್ಪ ಬೆಲ್ಲ ಸೇರಿಸಿ ಪ್ರತಿ ದಿನ ಬೆಳಗ್ಗೆ ಐದು ದಿನಗಳ ಕಾಲ ಖಾಲಿ ಹೊಟ್ಟೆಯಲ್ಲಿ ತಿನ್ನುವುದು .

 

 

 

ಹತ್ತು ಸಣ್ಣ ಕೆಂಪು ದಾಸವಾಳದ ಹೂವನ್ನು ಅರೆದು ಮಜ್ಜೆಗೆಯಲ್ಲಿ ಸೇರಿಸಿ ದಿನ ನಿತ್ಯ ಬೆಳಗ್ಗೆ ಒಂದು ಏಳು ದಿನಗಳ ಕಾಲ ಸೇವನೆ ಮಾಡಿದರೆ ಉತ್ತಮ.100 ಮೀ .ಲಿ ಅಮೃತಬಳ್ಳಿ ರಸ , ಎರಡು ಗ್ರಾಂ ತ್ರಿಫಲಾ ಚೂರ್ಣ , 125 ಮೀ .ಲಿ ಹಾಲು , ಹತ್ತು ಗ್ರಾಂ ನಷ್ಟು ತುಪ್ಪ ಸೇರಿಸಿ ಪ್ರತಿ ದಿನ ಮತ್ತು ರಾತ್ರಿ ಮುಟ್ಟಾದ ದಿನದಿಂದ 18 ದಿನಗಳವರೆಗೂ ಮೂರು ಮುಟ್ಟಿನ ಚಕ್ರಗಳು ಸೇವನೆ ಮಾಡಿ .ಐವತ್ತು ಗ್ರಾಂ ಕಪ್ಪು ಎಳ್ಳಿಗೆ ನೂರು ಗ್ರಾಂ ಬೆಲ್ಲ ಸೇರಿಸಿ ಅರೆದು ಸಣ್ಣ ಉಂಡೆ ಮಾಡಿ ಒಂದು ಸ್ಪೂನ್ ಗಾತ್ರದಷ್ಟನ್ನು ದಿನಕ್ಕೆ ಒಂದು ಸಾರಿ ಹದಿನೈದು ದಿನಗಳು ಸೇವನೆ ಮಾಡಿದರೆ ಒಳ್ಳೆಯದು.ಅಷ್ಟೇ ಅಲ್ಲದೆ ರಕ್ತ ಹೀನತೆ ತೊಡೆಯುವ ಕ್ಯಾರಟ್ ,ಸೇಬು , ಸಬ್ಬಕ್ಕಿ ,ದಂಟು , ಪಾಲಕ್ ಸೊಪ್ಪು ,ಕೆಂಪು ಹಣ್ಣುಗಳನ್ನು ಹೆಚ್ಚು ಸೇವನೆ ಮಾಡಬೇಕು .ಆದಷ್ಟು ಎಣ್ಣೆ ಪದಾರ್ಥಗಳನ್ನು ಸೇವನೆ ಮಾಡಬೇಡಿ .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top