fbpx
ದೇವರು

ಇಂದು ಬಾದ್ರಪದ ಪಿತೃ ಪಕ್ಷದ ಸಂಕಷ್ಟಹರ ಚತುರ್ಥಿ ,ನೀವು ಮಾಡಿರುವ ತಪ್ಪುಗಳಿಗೆ ಪ್ರಾಯಶ್ಚಿತ ಮಾಡ್ಕೋಬೇಕು ಅಂದ್ರೆ ಈ ದಿನ ಸುದಿನ ,ಹೇಗೆ ಅಂತೀರಾ, ಮುಂದೆ ಓದಿ

ಇಂದು ಬಾದ್ರಪದ ಮಾಸದ ಕೃಷ್ಣ ಪಕ್ಷದ ಮತ್ತು ಪಿತೃ ಪಕ್ಷದ ಸಂಕಷ್ಟಹರ ಚತುರ್ಥಿ ವ್ರತ,ನೀವು ಮಾಡಿರುವ ತಪ್ಪುಗಳಿಗೆ ಪ್ರಾಯಶ್ಚಿತ ಮಾಡಿಕೊಳ್ಳುವುದಕ್ಕೆ ಇದು ಒಂದು ಸುದಿನವಾಗಿದೆ.

ಬಾದ್ರಪದ ಮಾಸದ ಕೃಷ್ಣ ಪಕ್ಷದ ಮತ್ತು ಪಿತೃ ಪಕ್ಷದ ಸಂಕಷ್ಟಹರ ಚತುರ್ಥಿ ವ್ರತವೂ ತುಂಬಾ ವಿಶೇಷವಾಗಿದ್ದು,ಈ ಸಂದರ್ಭದಲ್ಲಿ ಪೂಜೆ ಪುನಸ್ಕಾರ ಮತ್ತು ದೇವತಾ ಆರಾಧನೆಯನ್ನು ಮಾಡಬಾರದು.ಆದರೆ ಸಂಕಷ್ಟಿಯನ್ನು ಮಾತ್ರ ಶತಸಿದ್ದವಾಗಿ ಇಂದಿನ ದಿನ ಮಾಡಲೇಬೇಕು. ಈ ದಿನ ಸಂಕಷ್ಟಿಯನ್ನು ಆಚರಿಸುವ ವಿದ್ಯಾರ್ಥಿಗಳಿಗೆ ವಿಶೇಷವಾಗಿ ವಿದ್ಯಾಭ್ಯಾಸ ಅಭಿವೃದ್ಧಿ ಯಾಗಲಿದೆ.ಈ ಬಾದ್ರಪದ ಮಾಸದಲ್ಲಿ ಪಿತೃ ಪಕ್ಷದಲ್ಲಿ ನಿಮ್ಮ ಕರ್ಮಗಳು ಏನು ಇವೆ ,ಅವುಗಳನ್ನು ನಿವಾರಿಸಿಕೊಳ್ಳುವುದಕ್ಕೆ ಇದೊಂದು ಸುದಿನ ಎಂದೇ ಹೇಳಬಹುದಾಗಿದೆ.ಗೊತ್ತಿದ್ದು ಮಾಡಿರುವುದು ತಪ್ಪೇ,ಅದಕ್ಕೆ ಏನು ಮಾಡಲು ಆಗುವುದಿಲ್ಲ,ಆದರೆ ಗೊತ್ತಿಲ್ಲದೆ ನೀವು ಯಾವುದಾದರು ತಪ್ಪುಗಳನ್ನು ಮಾಡಿದ್ದರೆ ಹಿರಿಯರಿಗೆ,ತಂದೆ ತಾಯಿಯರಿಗೆ ಅಥವಾ ಗುರುಗಳಿಗೆ ಬಂಧು ಬಾಂಧವರಿಗೆ ,ಬೇರೆಯವರಿಗೆ ಕೆಡುಕನ್ನು ಉಂಟು ಮಾಡಿದ್ದರೆ, ಅಂತಹ ತಪ್ಪುಗಳನ್ನು ಮನ್ನಿಸುವುದಕ್ಕೆ ರಾಮಭಾಣ ಈ ಬಾದ್ರಪದ ಮಾಸದ ಸಂಕಷ್ಟಿ,ಆದ್ದರಿಂದ ಇದು ತುಂಬಾ ಒಳ್ಳೆಯದು.

 

 

 

ನಿಮ್ಮ ಕರ್ಮಗಳನ್ನು ಕಳೆದು ಕೊಳ್ಳುವುದಕ್ಕೆ ಈ ಸಂಕಷ್ಟಿ ತುಂಬಾ ಉತ್ತಮವಾದ ದಿನ. ಆದ್ದರಿಂದ ಈ ಸಂಕಷ್ಟಿ ತುಂಬಾ ಚೆನ್ನಾಗಿದ್ದು,ಯಾರು ಭಕ್ತಿ ಶ್ರದ್ಧೆಯಿಂದ ಈ ವ್ರತವನ್ನು ಆಚರಣೆ ಮಾಡುತ್ತಾರೋ, ಅವರಿಗೆ ಕರ್ಮಗಳೆಲ್ಲವೂ ನಿವಾರಣೆ ಯಾಗಲಿವೆ. ಮಾಡಿರುವ ಕರ್ಮಗಳು, ಅನುಭವಿಸುತ್ತಿರುವ ಸಂಕಷ್ಟಗಳು,ದುಃಖಗಳು,ಮಾಡಿರುವ ತಪ್ಪುಗಳು ಎಲ್ಲವೂ ನಿವಾರಣೆಯಾಗಿ ಸುಲಲಿತವಾದ,ಶಾಂತಿಯುತವಾದ ಜೀವನ ನಿಮ್ಮದಾಗುತ್ತದೆ.ಆದ್ದರಿಂದ ಈ ದಿನ ಉಪವಾಸವಿದ್ದು,ವ್ರತವನ್ನು ಆಚರಿಸಿ ಗಣೇಶನಲ್ಲಿ ಸಂಕಲ್ಪ ಮಾಡಿಕೊಳ್ಳಿ ನಾನು ಈ ದಿನ ಸಂಕಷ್ಟಹರ ಚತುರ್ಥಿ ವ್ರತವನ್ನು ಆಚರಣೆ ಮಾಡುತ್ತಿದ್ದೇನೆ ನನ್ನ ಕರ್ಮಗಳೆಲ್ಲವನ್ನು ಮನ್ನಿಸು,ನಾನು ಮಾಡಿರುವ ತಪ್ಪುಗಳನ್ನು ಕ್ಷಮಿಸು ಎಂದು ಪ್ರಾರ್ಥನೆ ಮಾಡಿಕೊಳ್ಳಿ.ಬೆಳಗಿನಿಂದ ಉಪವಾಸ ವ್ರತವನ್ನು ಮಾಡಿ ,ರಾತ್ರಿ ಚಂದ್ರೋದಯದ ನಂತರ ಚಂದ್ರನಿಗೆ ಅರ್ಘ್ಯ ನೀಡಿ,ನಮಸ್ಕಾರವನ್ನು ಮಾಡಿ,ಉಪ್ಪಿಲ್ಲದೇ ಇರುವ ಆಹಾರವನ್ನು ಸೇವಿಸಿ.ಜೊತೆಗೆ ಗಣೇಶನಿಗೆ ಗರಿಕೆಯನ್ನು ಅರ್ಪಿಸಿ.ಇದರಿಂದ ಗಣೇಶನ ಅನುಗ್ರಹವೂ ನಿಮಗೆ ಲಭಿಸುತ್ತದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top