ಮನೋರಂಜನೆ

ಹಿಂದಿಯಲ್ಲಿ ಕೋಟಿ ಕ್ಲಬ್ ಸೇರಿದ ಕನ್ನಡ ನಟಿ ಪ್ರಣೀತಾ

ಕನ್ನಡದ ಹುಡುಗಿ ಪ್ರಣೀತ ಕನ್ನಡ ಚಿತ್ರಗಳಲ್ಲಿ ನಟಿಸದೆ ಬಹಳಷ್ಟು ಸಮಯಗಳೇ ಕಳೆದಿವೆ. ಆಕೆಯ ಅಭಿಮಾನಿಗಳು ಬೇಗನೆ ಕನ್ನಡ ಚಿತ್ರಗಳಲ್ಲಿ ಪ್ರಣೀತಾ ಕಾಣಿಸಿಕೊಳ್ಳ ಬಹುದೆಂಬ ನಿರೀಕ್ಷೆ ಹೊಂದಿರುವಾಗಲೆಲ್ಲಾ ಆ ನಿರೀಕ್ಷೆಗಳೆಲ್ಲಾ ಸುಳ್ಳಾಗಿದ್ದವು. ಪ್ರಣೀತ ಕನ್ನಡ ಚಿತ್ರಗಳಲ್ಲಿ ನಟಿಸುತ್ತಾ ಬ್ಯುಸಿಯಾಗಿದ್ದ ಕಾಲದಲ್ಲಿಯೇ ಬೇರೆ ಭಾಷೆಗಳ ಆಫರ್‌ಗಳತ್ತಲೂ ಗಮನ ಹರಿಸಿದ್ದದ ನಟಿ. ಈಗಾಗಲೇ ತಮಿಳು, ತೆಲುಗಿನಲ್ಲಿ ಛಾಪು ಮೂಡಿಸಿರುವ ಜಿಂಕೆ ಕಣ್ಣ ಸುಂದರಿ ಇದೀಗ ಬಾಲಿವುಡ್‌ ಅಂಗಳದಲ್ಲಿ ಕೋಟಿ ಗೆದ್ದಿದ್ದಾಳೆ.

 

 

ದಕ್ಷಿಣದಲ್ಲಿ ಮಿಂಚಿದ್ದ ಬಳಿಕ ಬಾಲಿವುಡ್ ಕಡೆಗೂ ತನ್ನ ಛಾಪನ್ನು ಮೂಡಿಸಲು ನಿಂತಿರುವ ಪ್ರಣೀತಾ ಬಾಲಿವುಡ್‌ನಲ್ಲಿ ನಿರ್ಮಾಣವಾಗಿರುವ ‘ಚಾನ್​ ಕಿತ್ತನ್​’ ಎಂಬ ಆಲ್ಬಂ ಒಂದರಲ್ಲಿಆಯುಷ್ಮಾನ್‌ ಖುುರಾನ ಜತೆ ಪ್ರಣೀತಾ ನಟಿಸಿದ್ದಾರೆ. ಚಾನ್​ ಕಿತ್ತನ್​’ ಆಲ್ಬಂ ಭರ್ಜರಿ ಯಶಸ್ಸು ಗಳಿಸಿದ್ದು ಯೂಟ್ಯೂಬ್ ನಲ್ಲಿ ಬರೋಬ್ಬರಿ ಮೂರು ಕೋಟಿಗೂ ಹೆಚ್ಚು ವೀಕ್ಷಣೆಗಳನ್ನ ಪಡೆದುಕೊಂಡಿದೆ. ಅಲ್ಲದೆ ಮೂರು ಲಕ್ಷಕ್ಕೂ ಅಧಿಕ ಮಂದಿ ‘ಲೈಕ್’ ಮಾಡಿದ್ದಾರೆ. ಈ ಮೂಲಕ ಬಾಲಿವುಡ್ ನಲ್ಲಿಯೂ ಯಶಸ್ಸಿನ ಮೂಲಕ ಖಾತೆ ತೆರೆದಿದ್ದಾಳೆ ಪ್ರಣೀತಾ.

 

2016ರ ಹೊತ್ತಿಗೆಲ್ಲಾ ಆಕೆ ತೆಲುಗಿನಲ್ಲಿಯೂ ಅಪಾರ ಪ್ರಮಾಣದಲ್ಲಿ ಅಭಿಮಾನಿಗಳನ್ನು ಗಳಿಸಿಕೊಂಡಿದ್ದಳು. ಆದರೆ ಅದೇಕೋ ಕನ್ನಡದಲ್ಲಾದಂತೆಯೇ ತೆಲುಗಿನಲ್ಲಿಯೂ ಸುದೀರ್ಘ ಕಾಲದವರೆಗೂ ಪ್ರಣೀತಾಗೆ ಯಾವ ಅವಕಾಶಗಳಳೂ ಸಿಕ್ಕಿರಲಿಲ್ಲ. ಬಾಲಿವುಡ್ ಸೇರಿದಂತೆ ನಾನಾ ಭಾಷೆಗಳಲ್ಲಿ ಅವಕಾಶಕ್ಕಾಗಿ ಅಲೆದಾಡಿದ್ದ ಪ್ರಣೀತ ವರ್ಷಾಂತರಗಳ ಕಾಲ ಸೈಲೆಂಟ್ ಆಗಿದ್ದಳು..  ಸ್ವಲ್ಪ ಗ್ಯಾಪಿನ ನಂತರ ಮತ್ತೆ ತೆಲುಗಿನ ಚಿತ್ರಗಳಲ್ಲಿ ಬ್ಯುಸಿಯಾಗಿದ್ದ ಪ್ರಣೀತಾ ಈಗ ಬಾಲಿವುಡ್ ನಲ್ಲೂ ಹೆಸರು ಮಾಡುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top