ಸಮಾಚಾರ

ಅಂತೂ ಇಂತೂ ಮುಗಿತು ‘ಪುಟ್ಟಗೌರಿ’ ಪುರಾಣ – ಆದರೆ?

ಖ್ಯಾತಿ ಮತ್ತು ಕುಖ್ಯಾತಿ ಎರಡನ್ನೂ ಸಮಾನವಾಗಿ ಪಡೆದುಕೊಂಡಿರುವ ಕನ್ನಡ ಧಾರಾವಾಹಿ ಪುಟ್ಟಗೌರಿ ಮದುವೆ ಪ್ರೇಕ್ಷಕರಿಗೆ ಕೊಡುವ ಕಾಟದ ಬಗೆ ಹೇಳುವ ಅಗತ್ಯವೇನಿಲ್ಲ. ಏಕೆಂದರೆ ತರ್ಕಕ್ಕೆ ನಿಲುಕದಂತಹ ದೃಶ್ಯಗಳನ್ನೆಲ್ಲಾ ರಬ್ಬರ್ ನಂತೆ ಎಳೆದು ತೋರಿಸುವ ಮೂಲಕ ಮುಗ್ದ ವೀಕ್ಷಕರನ್ನು ದಡ್ಡರನ್ನಾಗಿಸುತ್ತಾ ಈಗಾಗಲೇ ಅತಿ ಹೆಚ್ಚು ನಗೆಪಾಟಲಿಗೀಡಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಟ್ರೊಲ್ ಆಗಿದೆ..

ಇಂಥಾ ‘ಪುಟ್ಟಗೌರಿ ಮದುವೆ’ ಸೀರಿಯಲ್ಲಿನ ವೀಕ್ಷಕರು ಅಂತೂ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.. ಯಾಕೆಂದರೆ ಸುಮಾರು ವರ್ಷಗಳಿಂದಲೂ ಎಳೆದಾಡಿಕೊಂಡು ಬಂದಿದ್ದ ಈ ಧಾರಾವಾಹಿ ನೋಡುಗರಿಗೆಯೇ ವ್ಯಾಕರಕೆ ಹುಟ್ಟಿಸಿತ್ತು.. ದಿನಕ್ಕೊಂದು ಚಿತ್ರ ವಿಚಿತ್ರ ತಿರುವನ್ನು ಪಡೆದುಕೊಳ್ಳುತ್ತಲೇ ಈಗ ಮುಗಿಯುತ್ತದೆ, ಆಗ ಮುಗಿಯುತ್ತದೆ ಇನ್ನೇನು ಮುಗಿದೇ ಹೋಯ್ತು ಎಂದು ಖುಷಿಪಡುತ್ತಿದ್ದ ನೊಂದ ವೀಕ್ಷಕರಿಗೆ ಅಂತೂ ದಾರಾವಾಹಿಯವರು ಖುಷಿಯ ಸಮಾಚಾರ ನೀಡಿಯೇ ಬಿಟ್ಟಿದ್ದಾರೆ.

 

 

ಏನೇ ಟೀಕೆ-ಟಿಪ್ಪಣಿಗಳಿದ್ದರೂ ‘ಪುಟ್ಟಗೌರಿ’ ತನ್ನ ಜನಪ್ರಿಯತೆಯನ್ನು ಮಾತ್ರ ಕಳೆದುಕೊಂಡಿರಲಿಲ್ಲ, ಧಾರಾವಾಹಿಯನ್ನು ನೋಡುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇತ್ತು. ಇದೇನೇ ಇದ್ದರೂ ಒಂದು ವರ್ಗದ ವೀಕ್ಷಕರಲ್ಲಿ ಬೇಸರ ಮೂಡಿಸಿದ್ದು ಮಾತ್ರ ಸುಳ್ಳಲ್ಲ.. ಇಂಥಾ ಗತ ಇತಿಹಾಸವನ್ನು ಹೊಂದಿರೋ ಪುಟ್ಟಗೌರಿ ಮದುವೆ ಶೀಘ್ರದಲ್ಲೇ ತನ್ನ ಪಯಣವನ್ನ ಮುಗಿಸಲಿದೆಯಂತೆ.. ಧಾರಾವಾಹಿಯಲ್ಲಿ ಇತ್ತೀಚಿಗೆ ‘ಅಜ್ಜಮ್ಮ’ ಎನ್ನುವ ಪಾತ್ರ ಸಾವನ್ನಪ್ಪಿದ್ದರಿಂದ ಪ್ರೇಕ್ಷಕರು ಬೇಜಾರು ಮಾಡಿಕೊಂಡಿದ್ದು ಆ ಕಾರಣದಿಂದಲೇ ಧಾರಾವಾಹಿಗೆ ಅಂತ್ಯ ನೀಡಲು ನಿರ್ಧರಿಸಲಾಗಿದೆಯಂತೆ..

ಆದರೆ ಇಷ್ಟು ದಿನ ಪುಟ್ಟಗೌರಿಯಾಗಿ ಪ್ರೇಕ್ಷಕರನ್ನು ರಂಜಿಸಿದ ಗೌರಿ ಇನ್ಮುಂದೆ ‘ಮಂಗಳಗೌರಿ’ ಆಗಿ ನಿಮ್ಮ ಮುಂದೆ ಬರಲಿದ್ದಾಳೆ. ಹೌದು, ಹೊಸ ಕಥೆಯೊಂದಿಗೆ ‘ಮಂಗಳಗೌರಿ’ ಎನ್ನುವ ದಾರಾವಾಹಿಯನ್ನ ಇದೇ ತಂಡ ಶುರುಮಾಡಲಿದೆಯಂತೆ ಎಂಬ ಹೊಸ ಸುದ್ದಿಯೊಂದು ಓಡಾಡುತ್ತಿದೆ. ಆದರೆ ಈ ಸುದ್ದಿ ನಿಜವೋ ಅಥವಾ ಗಾಳಿ ಸುದ್ದಿಯೋ ಗೊತ್ತಿಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top